ಹತ್ತು ವರ್ಷಗಳ ರಿಲೇಶನ್ಶಿಪ್ ಎಂದು ದರ್ಶನ್ ಜೊತೆಗಿನ ಫೋಟೋಸ್ ಹಂಚಿಕೊಂಡ ಪವಿತ್ರ ಗೌಡ..! ವಿಜಯಲಕ್ಷ್ಮಿ ಮಾಡಿದ್ದೇನು

ಹತ್ತು ವರ್ಷಗಳ ರಿಲೇಶನ್ಶಿಪ್ ಎಂದು ದರ್ಶನ್ ಜೊತೆಗಿನ ಫೋಟೋಸ್ ಹಂಚಿಕೊಂಡ ಪವಿತ್ರ ಗೌಡ..! ವಿಜಯಲಕ್ಷ್ಮಿ ಮಾಡಿದ್ದೇನು

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ವಿಚಾರವಾಗಿ ಇದೀಗ ಮತ್ತೊಂದು ಸುದ್ದಿ ಎಲ್ಲೆಡೆ ಹಬ್ಬುತ್ತಿದೆ. ಹೌದು ಸೋಶಿಯಲ್ ಮೀಡಿಯಾದಲ್ಲಿ ಪವಿತ್ರ ಗೌಡ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ದರ್ಶನ್ ಒಟ್ಟಿಗಿನ ಕೆಲವು ಫೋಟೋಗಳನ್ನು ಹಾಕಿಕೊಂಡು, ವಿಡಿಯೋ ಮೂಲಕ ಪೋಸ್ಟ್ ಮಾಡಿಕೊಂಡಿದ್ದಾರೆ. ಇದರಲಿ ಡಿ ಬಾಸ್ ಹಾಗೂ ಪವಿತ್ರ ಒಟ್ಟಿಗೆ ಹಾರ ಹಾಕಿಕೊಂಡ ಫೋಟೋಸ್ ಸಹ ಕಂಡು ಬಂದಿವೆ. ಜೊತೆಗೆ ಇದು 10 ವರ್ಷಗಳ ರಿಲೇಶನ್ನ್ಶಿಪ್ ಎಂದು ದರ್ಶನ್ ಅವರಿಗೆ ಟ್ಯಾಗ್ ಮಾಡಿಕೊಂಡು ವಿಡಿಯೋ ಒಂದನ್ನ ಶೇರ್ ಮಾಡಿಕೊಂಡಿದ್ದಾರೆ ಪವಿತ್ರ ಗೌಡ..

ಇದು ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗುತ್ತಿದ್ದಂತೆಯೆ, ಅತ್ತ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು ಆಕ್ರೋಶ ಹೊರಹಾಕಿದ್ದು ತಮ್ಮ ಆಕ್ಷೇಪವನ್ನು ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ. ಪವಿತ್ರ ಗೌಡ ಮತ್ತೊಬ್ಬರ ಪತಿಯ ಫೋಟೋವನ್ನು ಹಾಕಿಕೊಂಡು ಈ ರೀತಿ ವಿಡಿಯೋ ಶೇರ್ ಮಾಡುವುದು ತುಂಬಾನೇ ತಪ್ಪು , ನಟ ದರ್ಶನ್ ಅವರು ಈಗಾಗಲೇ ಇನ್ನೊಬ್ಬರ ಪತಿ ಎನ್ನುವುದು ಆಕೆ ಗಮನದಲ್ಲಿರಬೇಕು. ನಟಿ ಪವಿತ್ರ ಅವರನ್ನ ನಾನು ಇಲ್ಲಿಗೆ ಸುಮ್ಮನೆ ಬಿಡುವುದಿಲ್ಲ, ಇದರ ವಿರುದ್ಧ ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇನೆ, ಅಥ್ವಾ ಲೀಗಲ್ ಆಕ್ಷನ್ ತೆಗೆದುಕೊಳ್ಳುತ್ತೇನೆ ಎಂದು ಪವಿತ್ರ ಗೌಡ ಮೇಲೆ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ ದರ್ಶನ್ ಪತ್ನಿ ವಿಜಯಲಕ್ಷ್ಮಿ. ಹಾಗೆ ನಟಿ ಪವಿತ್ರ ಗೌಡ, ಆಕೆಯ ಪತಿ ಮತ್ತು ಮಗಳ ಫೋಟೋವನ್ನು ಶೇರ್ ಮಾಡಿಕೊಂಡು ವಿಜಯಲಕ್ಷ್ಮಿ ಅವರು ಇನ್ನೂ ಏನೆಲ್ಲಾ ಹೇಳಿದ್ದಾರೆ ಎಂದು ಲೇಖನದ ಕೊನೆಯಲ್ಲಿರುವ ವಿಡಿಯೋದಲ್ಲಿ ನೋಡಿ.    

ಅಸಲಿಗೆ ಪವಿತ್ರ ಗೌಡ ಶೇರ್ ಮಾಡಿಕೊಂಡಿರುವ ವಿಡಿಯೋದಲ್ಲಿ ಅಂತದ್ದೇನಿದೆ ಗೊತ್ತಾ, ನೀವೇ ಒಂದು ಬಾರಿ ಈ ವಿಡಿಯೋ ನೋಡಿ, ಜೊತೆಗೆ 10 ವರ್ಷಗಳ ರಿಲೇಷನ್ಶಿಪ್ ಎಂದು ಬರೆದು ಕೊಂಡಿರುವ ಪವಿತ್ರ ಗೌಡ ಯಾವ ರಿಲೇಷನ್ಶಿಪ್ ಎಂದು ಸಂಕ್ಷಿಪ್ತವಾಗಿ ಏನನ್ನು ಸಹ ಹೇಳಿಲ್ಲ ಎಂದು ಕಂಡು ಬಂದಿದೆ. ಒಂದು ವೇಳೆ ಕಾನೂನಾತ್ಮಕವಾಗಿ ಹೋರಾಟ ನಡೆಸಿದರೆ ಇದಕ್ಕೆ ಯಾವ ರೀತಿಯೂ ಈ ಪೋಸ್ಟ್ ಅಡ್ಡಿ ಆಗದು ಎಂದು ಕೆಲವರ ಅಭಿಪ್ರಾಯ. ಈ ವಿಚಾರದ ಕುರಿತು ಪವಿತ್ರ ಗೌಡ ಅವರು ವಿವರಣೆ ನೀಡಬೇಕು, ಅಥವಾ ದರ್ಶನ್ ಅವರು ಈ ವಿಚಾರವಾಗಿ ಅಭಿಪ್ರಾಯ ವ್ಯಕ್ತಪಡಿಸಬೇಕು, 

ಈ ರೀತಿ ನಡೆಯುತ್ತಿರುವುದು ಇದು ಮೊದಲೇನು ಅಲ್ಲ. ವಿಜಯಲಕ್ಷ್ಮಿ ಅವರು ಕೂಡ ಈ ಹಿಂದೆ ಪರೋಕ್ಷವಾಗಿ ಇದೆ ವಿಚಾರವಾಗಿ ಪವಿತ್ರ ಅವರಿಗೆ ಹೇಳುತ್ತಲೇ ಬಂದಿದ್ದರು. ಆದರೆ ಈ ಬಾರಿ ತಮ್ಮ ಗಂಡನ ಕೆಲವು ಫೋಟೋಸ್ ಗಳ ಪವಿತ್ರ ಗೌಡ ಜೊತೆ ನೋಡಿ ಹೆಚ್ಚು ಕೆಂಡಾಮಂಡಲ ಆಗಿದ್ದಾರೆ. ಅಸಲಿಗೆ ಅವರು ಯಾವ ಯಾಕ್ಷನ್ ತೆಗೆದುಕೊಳ್ಳುತ್ತಾರೆ ಎಂದಿದ್ದಾರೆ ಎಂದು ಈ ವಿಡಿಯೋದಲ್ಲಿ ನೋಡಿ..ಈ ವಿಚಾರವಾಗಿ ನೀವೂ ಏನು ಹೇಳುತ್ತೀರೆಂದು ಕಮೆಂಟ್ ಮಾಡಿ...

( video credit :Ramesh Filmy duniya )