ಎಲ್ಲೆಡೆ ಸದ್ದು ಮಾಡುತ್ತಿರುವ ಪವಿತ್ರ ಗೌಡ ಅವರ ಲೈಫ್ ಸ್ಟೋರಿ ಏನು ಗೊತ್ತಾ? ಇಲ್ಲಿದೆ ಫುಲ್ ಡೀಟೇಲ್ಸ್?

ಎಲ್ಲೆಡೆ ಸದ್ದು ಮಾಡುತ್ತಿರುವ ಪವಿತ್ರ ಗೌಡ ಅವರ ಲೈಫ್ ಸ್ಟೋರಿ ಏನು ಗೊತ್ತಾ? ಇಲ್ಲಿದೆ ಫುಲ್ ಡೀಟೇಲ್ಸ್?

ನಮ್ಮ ಸ್ಯಾಂಡಲ್ ವುಡ್ ನಲ್ಲಿ ಕಳೆದ 12ದಿನಗಳಿಂದಲೂ ಸಾಕಷ್ಟು ಅಚ್ಚರಿ ಪಡುವ ಸುದ್ದಿಗಳು ಹೋರ ಬೀಳುತ್ತಲೇ ಇದೆ ಎಂದು ಹೇಳಬಹುದು. ದಿನಕ್ಕೆ ಒಂದೊಂದು ಪ್ರಕರಣಗಳು ಸ್ಯಾಂಡಲ್ ವುಡ್ ನ ಸುತ್ತಾ ತಿರುಗುತಿದ್ದು ಇದು ಎಲ್ಲೆಡೆ ಗೌರವ ಪಡೆಯುತ್ತಿದ್ದ ಚಿತ್ರ ರಂಗ ಈಗ ತಲೆ ತಗ್ಗಿಸುವಂತೆ ಮಾಡುತ್ತಾ ಬಂದಿದೆ ಎಂದು ಹೇಳಬಹುದು. ಈಗ ಎಲ್ಲದಕ್ಕಿಂತ ಹೆಚ್ಚು ಬೇಸರ ತಂದ ವಿಚಾರ ಎಂದ್ರೆ ಸ್ಯಾಂಡಲ್ ವುಡ್ ನಲ್ಲಿ ಬಾಕ್ಸ್ ಆಫೀಸ ಸುಲ್ತಾನ್ ಎಂದು ಹೆಸರು ಮಾಡಿದ್ದ ದರ್ಶನ್ ಅವರು ಕೊಲೆಯ ಆರೋಪದಲ್ಲಿ ಈಗ ಜೈಲು ಪಾಲಾಗಿದ್ದಾರೆ. ಇನ್ನೂ ಇದಕ್ಕೆ ಕಾರಣ ಅವರ ಎರಡನೇ ಹೆಂಡತಿ ಪವಿತ್ರ ಗೌಡ ಎಂದು ಆರೋಪದ ಮೇಲೆ ಒಬ್ಬರನ್ನು ಕೊಡ ಪೊಲೀಸ್ ಬಂಧನದಲ್ಲಿ ಇರಿಸಿಕೊಂಡಿದ್ದಾರೆ. 

ಇನ್ನೂ ದರ್ಶನ್ ಅವರು ಪವಿತ್ರಾ ಗೌಡ ಅವರ ಜೊತೆ ಸುಮಾರು 10ವರ್ಷಗಳಿಂದ ಇದ್ದಾರೆ ಎಂದು ಹೇಳಲಾಗುತ್ತಿದೆ. ಇವರಿಬ್ಬರೂ ಬಹಿರಂಗವಾಗಿ ಎಲ್ಲಿಯೂ ಹೇಳಿಕೊಳ್ಳದೆ ಇದ್ದರೂ ಪವಿತ್ರ ಗೌಡ ಅವರು ಆಗಾಗ ಹಂಚಿಕೊಳ್ಳುವ ವಿಡಿಯೋ ಫೋಟೋಗಳ ಮೂಲಕ ಎಲ್ಲರಿಗೂ ಈಗ ದರ್ಶನ್ ಅವರ ಎರಡನೇ ಪತ್ನಿ ಪವಿತ್ರ ಗೌಡ ಎಂದು ಮನದಟ್ಟು ಆಗಿದೆ. ಇನ್ನೂ 2015ರ ವೇಳೆಯಲ್ಲಿ ಪವಿತ್ರ ಅವರು ದರ್ಶನ್ ಒಟ್ಟಿಗೆ ಇದ್ದ ಫೋಟೋ ಹಂಚಿಕೊಂಡಾಗ ದರ್ಶನ್ ಅಭಿಮಾನಿಗಳು ಹಾಗೂ ಅವರ ಮೊದಲನೇ ಪತ್ನಿ ವಿಜಯಲಕ್ಷ್ಮಿ ಅವರು ಎಚ್ಚರಿಕೆ ನೀಡಿದ್ದರು. 2019ನಲ್ಲಿ ದರ್ಶನ್ ಅಮ್ಮ ಹಾಗೂ ಅಕ್ಕನ ಜೊತೆ ಇರುವ ಫೋಟೋ ಹಂಚಿಕೊಂಡಿದ್ದರು. ಇನ್ನೂ 2023ರ ದರ್ಶನ್ ಹುಟ್ಟು ಹಬ್ಬದ ಹಾಗೂ ಪವಿತ್ರ ಗೌಡ ಅವರ ಫೋಟೋಗಳನ್ನು ನಟಿ ಮೇಘಾ ಶೆಟ್ಟಿ ಹಂಚಿಕೊಂಡಾಗ ಕಾನೂನು ಬದ್ಧವಾಗಿ ವಿಜಯ ಲಕ್ಷ್ಮಿ ಅವರಿಗೆ ಎಚ್ಚರಿಕೆ ಕೊಡ ನೀಡಿದ್ದು ಉಂಟು. 

ಇನ್ನೂ 2024ನಲ್ಲಿ ಒಂದಿಷ್ಟು ಫೋಟೋ ಹಾಗೂ ವಿಡಿಯೋಗಳನ್ನು ಹಾಕಿದ್ದ ಪವಿತ್ರ ಗೌಡ ಅವರು ನಮ್ಮ ಸಂಭಂದಕ್ಕೆ 10ವರ್ಷ ಎಂದು ಬರೆದಿದ್ದಕ್ಕೆ ದೊಡ್ಡ ವಿವಾದವೇ ಸೃಷ್ಟಿ ಮಾಡಿ ಕೊನೆಗೆ ತೆಗೆದಿದ್ದರು. ಇಷ್ಟೆಲ್ಲಾ ಸದ್ದು ಮಾಡುತ್ತಿರುವ ಪವಿತ್ರ ಅವರು ಸಾಕಷ್ಟು ಸಿನಿಮಾದಲ್ಲಿ ನಟಿಸಿ ನಟನೆಯಲ್ಲಿ ಯಶಸ್ಸು ಸಿಗದೇ ಇದ್ದಕ್ಕೆ ಫ್ಯಾಶನ್ ಡಿಸೈನರ್ ಆಗಿ ಈಗ ಬ್ಯುಸಿನೆಸ್ ಮಾಡುತ್ತಾ ಇದ್ದಾರೆ. ಇನ್ನೂ ಇವರಿಗೆ 18ವರ್ಷ ಇದ್ದಾಗಲೇ ಸಂಜಯ್ ಸಿಂಗ್  ಎಂಬುವವರ ಜೊತೆ  ಮದುವೆಯಾಗಿ ಒಂದು ಹೆಣ್ಣು ಮಗು ಆದ ನಂತರ ವಿಚ್ಛೇದನ ಪಡೆದು ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಈಗ ಪವಿತ್ರ ಗೌಡ ಅವರ ಫೋಟೋ ವಿಡಿಯೋ ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದ ರೇಣುಕಾ ಸ್ವಾಮಿ ಅವ್ರ ಕೊಲೆಯ ಆರೋಪದಲ್ಲಿ ದರ್ಶನ್ ಹಾಗೂ ಪವಿತ್ರ ಗೌಡ ಈಗ ಪರಪ್ಪನ ಅಗ್ರಹಾರ ಜೈಲಿಗೆ ಸೇರಿದ್ದಾರೆ.