ಸೇಲ್ಸ್ ಗರ್ಲ್ ಆಗಿದ್ದ ನಿರ್ಮಲಾ ಸೀತಾರಾಮನ್ ಈಗ ದೇಶದ ಹಣಕಾಸಿನ ಮುಖ್ಯಮಂತ್ರಿ! ಅವ್ರ ಸಂಪೂರ್ಣ ಹಿನ್ನಲೆ ಏನು ಗೊತ್ತಾ?

ಸೇಲ್ಸ್ ಗರ್ಲ್ ಆಗಿದ್ದ ನಿರ್ಮಲಾ ಸೀತಾರಾಮನ್ ಈಗ ದೇಶದ ಹಣಕಾಸಿನ ಮುಖ್ಯಮಂತ್ರಿ! ಅವ್ರ ಸಂಪೂರ್ಣ ಹಿನ್ನಲೆ ಏನು ಗೊತ್ತಾ?


ನಿರ್ಮಲ ಸೀತಾರಾಮನ್ ಭಾರತೀಯ ರಾಜಕಾರಣಿ ಮತ್ತು ದೇಶದ ಪ್ರಸ್ತುತ ಹಣಕಾಸು ಮಂತ್ರಿಯಾಗಿದ್ದಾರೆ. ಅವರ ರಾಜಕೀಯದ ಬೆಳೆವಣಿಗೆಯ ಬಗ್ಗೆ ನಾವು ಹೊಸದಾಗಿ ಪರಿಚಯ ಮಾಡಿಕೊಡುವ ಅವಶ್ಯಕತೆಯೇ ಇಲ್ಲ. ಈಕೆ ಬಹಳ ಕಟ್ಟು ನಿಟ್ಟಿನ ರಾಜಕಾರಣಿ ಎಂದು ಗುರುತಿಸಿಕೊಂಡಿದ್ದಾರೆ. ಇನ್ನು ಈಗ ಹಣ ಕಾಸಿನ ವ್ಯವಹಾರವನ್ನು ನೋಡಿಕೊಳ್ಳುವ ಇವರು ಒಂದು ಕಾಲದಲ್ಲಿ ಸೆಲ್ಸ್ ಗರ್ಲ್ ಆಗಿ ಕೆಲ್ಸ ಮಾಡುತ್ತಿದ್ದರು ಎಂದ್ರೆ ಯಾರು ನಂಬುತ್ತಾರೆ. ಇನ್ನು ಈಕೆ ಹೊಮ್ ಡೆಕೋರ್ ಸ್ಟೋರ್ ನಲ್ಲಿ ಸೇಲ್ಸ್ ಗರ್ಲ್ ಆಗಿದ್ದ ಇವರು ಇಂದು ದೇಶದ ಲೆಕ್ಕಚಾರವನ್ನು ಹಾಗೂ ವಹಿವಾಟನ್ನು ನಿಭಾಯಿಸುವ ಎರಡನೇ ಮಹಿಳೆಯಾಗಿದ್ದಾರೇ ಮೊದಲಿಗೆ ಇಂದಿರಾ ಗಾಂಧಿ ಆಗಿದ್ದರು ಅದಾದ ಬಳಿಕ ಇವರು ಆ ಸ್ಥಾನ ಅಲಂಕಾರ ಮಾಡಿದ್ದಾರೆ.ಇದು ದೊಡ್ಡ ಮಟ್ಟದ ಸಾಧನೆ ಎಂದ್ರೆ ತಪ್ಪಾಗಲಾರದು.


ನಿರ್ಮಲಾ ಸೀತಾರಾಮನ್ 1959 ಜೂನ್ 18 ರಂದು ತಮಿಳುನಾಡಿನಲ್ಲಿ ಜನಿಸಿದರು.ಈಕೆ ಬಿಎ ಮತ್ತು ಎಂಎ ಪದವಿಧರರು ಆಗಿದ್ದಾರೆ. 1984ನಲ್ಲಿ ಬಿಎ ಏಕೋನಾಮಿಕ್ಸ್ ನಲ್ಲಿ, ಜೆಎನ್‌ಯು (ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ) ನಿಂದ ಎಂಎ ಮತ್ತು ಎಂಫಿಲ್ ಪದವಿಗಳು ಪಡೆದುಕೊಂಡಿದ್ದಾರೆ.ಅದಾದ ಬಳಿಕ ನಾನಾ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಇನ್ನು ಅವರ ಸಹಪಾರಿಯನ್ನು ಮದುವೆಯಾದ ಇವರು ತಮ್ಮ ಪತಿ ಪರ್ಜಿತ್ ಪಾರ್ಥಸಾರಥಿ, ಇಕನಾಮಿಸ್ಟ್ ಮತ್ತು ಅಂತರಾಷ್ಟ್ರೀಯ ಬೈಸ್ನೆಸ್ದಲ್ಲಿ ಪರಿಣಿತರಾಗಿದ್ದು ಇವರು 1986 ನಲ್ಲಿ ಮದುವೆಯಾಗಿ ಲಂಡನ್ ಗೆ ಶಿಫ್ಟ್ ಆದರೂ. ಅಲ್ಲಿ ನಿರ್ಮಲ ಅವರು ಲಂಡನ್ ಸ್ಕೂಲ್ ಆಫ್ ಏಜುಕೇಶನ್ ನಲ್ಲಿ Phd  ಕೊಡ ಪಡೆದುಕೊಂಡರು. 1991 ನಲ್ಲಿ ಭಾರತಕ್ಕೆ ಮರಳಿದ ಇವರು ತಮ್ಮ ಪತಿ ಓರ್ವ ಮಗಳ ಜೊತೆ ಭಾರತದಲ್ಲಿ ನೆಲೆಸಲು ನಿರ್ಧಾರ ಮಾಡುತ್ತಾರೆ. ಹೈದ್ರಾಬಾದ್ ನಲ್ಲಿ ನೆಲೆಸಿದ ಇವ್ರು ಸಮಾಜ ಕಾರ್ಯ ಕರ್ತ ಆಗಿ ಗುರುತಿಸಿಕೊಂಡು 2003ರಲ್ಲಿ NCW ನಲ್ಲಿ ಸದಸ್ಯೆ ಆಗಿ 2005ರ ವರೆಗೂ ಸೇವೆ ಸಲ್ಲಿಸಿದರು.

ಇನ್ನು  ನಿರ್ಮಲಾ ಸೀತಾರಾಮನ್ ಅವರು ರಾಜಕೀಯಕ್ಕೂ ಮುಂಚೆ ನಿರ್ಮಲಾ ಸೀತಾರಾಮನ್ ಹಲವು ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದರು, ಬಿಬಿಸಿ ವಾಲ್ಡ್ ಸರ್ವೀಸ್ ಹಾಗೂ ಪ್ರೈಸ್ವಾಟರ್‌ಹೌಸ್ ಕೂಪರ್ಸ್ ಸೇರಿದಂತೆ.ತಮ್ಮ ಅತ್ತೆ ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡಿದ್ದರು ಕೊಡ ನಿರ್ಮಲ ಸೀತಾರಾಮನ್ 2006ರಲ್ಲಿ ಭಾರತೀಯ ಜನತಾ ಪಾರ್ಟಿಗೆ ಸೇರ್ಪಡೆಯಾದರು ಮತ್ತು 2010ರಲ್ಲಿ ಪಕ್ಷದ ರಾಷ್ಟ್ರಿಯ ಕಾರ್ಯದರ್ಶಿಯಾಗಿ ನೇಮಕಗೊಂಡರು. 2014ರಲ್ಲಿ ನುಂಜಣ್ಮದಲ್ಲಿ ಸಚಿವೆ ಹಾಗೂ 2017ರಲ್ಲಿ ಭಾರತದ ಮೊದಲ ಮಹಿಳಾ ರಕ್ಷಣಾ ಸಚಿವೆ ಆಗಿ ನೇಮಕಗೊಂಡರು.
2019ರಲ್ಲಿ ಹಣಕಾಸು ಸಚಿವೆ ಆಗಿ ಆಯ್ಕೆಯಾದರು, ಮತ್ತು ಈ ಹೊಣೆಗಾರಿಕೆಯನ್ನು ನಿಭಾಯಿಸುತ್ತಿದ್ದಾರೆ.ನಿರ್ಮಲ ಸೀತಾರಾಮನ್ ಅವರ ಬಹುಮುಖವಂತಿಕೆಯ ಮತ್ತು ದೂರದೃಷ್ಟಿಯು ಅವರನ್ನು ಭಾರತೀಯ ರಾಜಕೀಯದ ಪ್ರಮುಖ ನಾಯಕಿಯನ್ನಾಗಿ ರೂಪಿಸಿದೆ.