ಕುಮಾರಸ್ವಾಮಿ ಅವರ ಆರೋಗ್ಯದ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ನಿಖಿಲ್ ಕುಮಾರಸ್ವಾಮಿ! ಆ ಅಪ್ಡೇಟ್ ಏನು ಗೊತ್ತಾ?

ಕುಮಾರಸ್ವಾಮಿ ಅವರ ಆರೋಗ್ಯದ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ನಿಖಿಲ್ ಕುಮಾರಸ್ವಾಮಿ! ಆ ಅಪ್ಡೇಟ್ ಏನು ಗೊತ್ತಾ?

"ಜೆಡಿಎಸ್" ಪಕ್ಷದ ಬೆನ್ನೆಲುಬಾಗಿ ದಶಕಗಳಿಗೂ ಹೆಚ್ಚಿನ ಕಾಲದಿಂದಲೂ ಸೇವೆ ಸಲ್ಲಿಸಿಕೊಂಡು ಬರುತ್ತಿರುವ "ಕುಮಾರಸ್ವಾಮಿ" ಅವರ ಆರೋಗ್ಯದಲ್ಲಿ ಏರು ಪೇರು ಆಗಿರುವ ವಿಚಾರ ನಿಮಗೆಲ್ಲರಿಗೂ ತಿಳಿದೇ ಇದೆ. ಇನ್ನೂ ಕುಮಾರಸ್ವಾಮಿ ಅವರ ತಂದೆ "ದೇವೆ ಗೌಡರು" ತಮ್ಮ ಸ್ವಂತಿಕೆಯಲ್ಲಿ ಕಟ್ಟಿದ ಪಕ್ಷ ಎಂದರೆ ಅದು ಜೆಡಿಎಸ್ ಪಕ್ಷ. ಇನ್ನೂ ಈ ಪಕ್ಷದಿಂದ ಅದೆಷ್ಟೋ ಯೋಜನೆಗಳು ಜಾರಿಗೆ ಬಂದು ಕರ್ನಾಟಕದ ಮಂದಿ ಈ ಯೋಜನೆಗಳಿಂದ ತಮ್ಮ ಜೀವನವನ್ನ ಸುಧಾರಿಸಿಕೊಂಡು ಬಂದಿದ್ದಾರೆ ಎಂದ್ರೆ ತಪ್ಪಾಗಲಾರದು. ಇದೀಗ ಈ ಪಕ್ಷದ ಸದಸ್ಯರು ಕೊಡ ತಮ್ಮ ಚುನಾವಣೆಯಲ್ಲಿ ದೊಡ್ಡ ಸೋಲನ್ನು ಅನುಭವಿಸಿದ್ದರು ಕೂಡ ತಾವು ಪಕ್ಷಕ್ಕಾಗಿ ಹಾಗೂ ಜನರ ಒಳಿತಿಗಾಗಿ ಕೆಲ್ಸ ಮಾಡುವುದನ್ನು ಇಂದಿಗೂ ನಿಲ್ಲಿಸಿಲ್ಲ.

ಇದೀಗ ದೇವೇಗೌಡರು ಕಟ್ಟಿದ ಜೆಡಿಎಸ್ ಪಕ್ಷದ ಆಳ್ವಿಕೆಗೆ ಮೂರನೇ ತಲೆಮಾರು ಕೂಡ ಕಾಲಿಟ್ಟಿದೆ. ಕುಮಾರಸ್ವಾಮಿ ಹಾಗೂ ರೇವಣ್ಣ ಅವರ ಮಕ್ಕಳು ಕೂಡ ಈ ಪಕ್ಷದ ಕಾರ್ಯ ಸದಸ್ಯರಾಗಿ ನಿರ್ವಹಿಸುತ್ತಿದ್ದಾರೆ. ಇನ್ನೂ ನೆನ್ನೆ ಬೆಂಗಳೂರಿನ "ಅಪೋಲು ಆಸ್ಪತ್ರೆಯ" 'ಹೆಲ್ತ್ ಬುಲೆಟ್'  ನಲ್ಲಿ ಕುಮಾರಸ್ವಾಮಿ ಅವರ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿತ್ತು. ಇನ್ನೂ ಈ ವರದಿಯ ಪ್ರಕಾರ ಕುಮಾರಸ್ವಾಮಿ ಅವರ ಎಡಬಾಗಕ್ಕೆ "ಮೈಲ್ಡ್ ಸ್ಟ್ರೋಕ್" ಆಗಿದ್ದು ಈಗ ಚೇತರಿಸಿಕೊಂಡಿದ್ದಾರೆ ಎಂದು ಅವರಿಗೆ ಶೃಶುಷೆ ಮಾಡಿದ ಅಪೋಲೋ ಆಸ್ಪತ್ರೆಯ ವೈದ್ಯ" ಡಾ.ಸತೀಶ್ ಚಂದ್ರ" ಅವರು ಮಾಹಿತಿ ನೀಡಿದ್ದಾರೆ.

 ಇವರು ಹೇಳಿರುವ ಪ್ರಕಾರ ಕುಮಾರಸ್ವಾಮಿ ಅವರಿಗೆ ಮೈಲ್ಡ್ ಸ್ಟ್ರೋಕ್ ಆಗಿರುವ ಕಾರಣ ಅವರನ್ನು ಬೇಗ ಆಸ್ಪತ್ರೆಗೆ ಕರೆದುಕೊಂಡು ಬಂದ ಕಾರಣದಿಂದ ನಾವು ಸಂಪೂರ್ಣವಾಗಿ ಗುಣಮುಖರಾಗಿ ಮಾಡಲು ಸಾಧ್ಯವಾಯಿತು. ಯಾರಾದರೂ ಸರಿ ಸ್ಟ್ರೋಕ್ ಸಂಭವಿಸಿದಲ್ಲಿ ಮೂರು ತಾಸಿನ ಒಳಗೆ ಆಸ್ಪತ್ರೆಗೆ ಬಂದರೆ ಅವರನ್ನು ನಾವು ಸಂಪೂರ್ಣವಾಗಿ ಗುಣಮುಖರಾಗಿ ಮಾಡಬಹುದು.

ಈ ಚಿಕಿತ್ಸೆಯನ್ನು ನಾವು "ವಿಡೂ ಟೈಮ್" ಎನ್ನುತ್ತೇವೆ. ಈ ಚಿಕಿತ್ಸೆಯಿಂದ ಕುಮಾರಣ್ಣ ಸಂಪೂರ್ಣ ಗುಣಮುಖ ಆಗಿ ಒಂದು ತಾಸಿನಲ್ಲಿ ಚೇತರಿಸಿಕೊಂಡರು. ಅವರು ನಾಳೆಯಿಂದಲೇ ತಮ್ಮ ಕೆಲಸಗಳಲ್ಲಿ ತೊಡಗಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ. ಇದೀಗ ಕುಮಾರಣ್ಣ ಅವರ ಮಗ "ನಿಖಿಲ್ ಕುಮಾರಸ್ವಾಮಿ" ಕೂಡ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಕುಮಾರಣ್ಣ ಅವರ ಆರೋಗ್ಯ ವಿಚಾರಿಸಿಕೊಂಡು "ಅಭಿಮಾನಿಗಳಿಗೆ, ಪಕ್ಷದ ಕಾರ್ಯಕರ್ತರಿಗೆ ಹಾಗೂ ಮಠದ ಸ್ವಾಮೀಜಿಗಳಿಗೆ"  ಧನ್ಯವಾದ ತಿಳಿಸಿದ್ದಾರೆ.

VIDEO CREDIT : TV 9 KANNADA