ಕೋರೋನ ಗಿಂತ 7ಪಟ್ಟು ಪ್ರಭಾವ ಇರುವ ಮತ್ತೊಂದು ವೈರಸ್ ಎಂಟ್ರಿ! ಯಾವ ವೈರಸ್ ಹಾಗೂ ಮುನ್ನೆಚ್ಚರಿಕೆ ಕ್ರಮ ಏನು ಗೊತ್ತಾ

ಕೋರೋನ ಗಿಂತ 7ಪಟ್ಟು ಪ್ರಭಾವ ಇರುವ ಮತ್ತೊಂದು ವೈರಸ್ ಎಂಟ್ರಿ! ಯಾವ ವೈರಸ್ ಹಾಗೂ ಮುನ್ನೆಚ್ಚರಿಕೆ ಕ್ರಮ ಏನು ಗೊತ್ತಾ

020 ಎಂದ ಕೂಡಲೇ ತಟ್ಟನೆ ನೆನಪಾಗುವ ಹೆಸರು ಎಂದರೆ ಅದು ಕರೋನ ವೈರಸ್. ಇನ್ನೂ ಈ ಸಾಂಕ್ರಾಮಿಕ ರೋಗ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಎಷ್ಟರ ಮಟ್ಟಿಗೆ ಎಂದರೆ ಇಡೀ ದೇಶವನ್ನೇ ಸ್ತಬ್ಧ ಮಾಡಿ ಎಲ್ಲರನ್ನೂ ಮನೆಯಲ್ಲಿ ಬಂದಿ ಮಾಡಿ ಜನರ ಒಳಿತಿಗಾಗಿ ಅವರಿಗೆ ಬೇಕಾದ ಅಗತ್ಯ ವಸ್ತುಗಳನ್ನು ಕೂಡ ತಮ್ಮ ಮನೆಯ ಬಾಗಿಲಿಗೆ ತಲುಪಿಸುತ್ತಿದ್ದ ಕಾಲ ಅದಾಗಿತ್ತು. ನಿಮಗೆಲ್ಲರಿಗೂ ಸಾಂಕ್ರಾಮಿಕ ರೋಗದ ಬಗ್ಗೆ ತಿಳಿದೇ ಇರುತ್ತದೆ. ಪ್ರತಿ 100ವರ್ಷಕ್ಕೊಮ್ಮೆ ಬರುವ ರೋಗ ಅದೆಷ್ಟೋ ಮಂದಿಯನ್ನು ಬಲಿ ತೆಗೆದುಕೊಳ್ಳುತ್ತದೆ. ಕರೋನ ಮುಂಚೆ ಈ ಮಲೇರಿಯಾ ಹಾಗೂ  ಟೈಫ್ಯಾಡ್ ನಂತರ ರೋಗಗಳು ಕೂಡ ಚಾಲ್ತಿಯಲ್ಲಿ ಇತ್ತು. ಆದರೆ ಈ ರೋಗಕ್ಕೆ ಮದ್ದು ಕೂಡ ಕಂಡುಹಿಡಿದು ಜನರನ್ನು ಗುಣಮುಖ ಮಾಡಬಹುದಿತ್ತು. ಆದರೆ ಕರೋನ ತಮ್ಮ ಮನೆಯವರ ಜೊತೆಗೆ ಸೇರದಂತೆ ಮಾಡಿದ ರೋಗ ಇದಾಗಿತ್ತು.

ಈ ಸಾಂಕ್ರಾಮಿಕ ರೋಗದ ಬೀತಿಯಿಂದ ನಾಲ್ಕು ವರ್ಷಗಳು ಕಳೆದಿದ್ದರೂ ಕೂಡ ನಾವಿನ್ನೂ  ಹೊರಬಂದಿಲ್ಲ ಹೀಗಿರುವಾಗ ಕರೋನ ಗಿಂತ 7 ಪಟ್ಟು ವಿಷಕಾರಿ ಆಗಿರುವ ಮತ್ತೊಂದು ಸಾಂಕ್ರಾಮಿಕ ರೋಗ ಮತ್ತೆ ಜಗತ್ತಿನಾದ್ಯಂತ ಹರಡುತ್ತಿದೆ. ಹೌದು ಸ್ನೇಹಿತರೇ ಇದೊಂದು ಹೊಸ ಸಾಂಕ್ರಾಮಿಕ ರೋಗ ಎಂದು ಸಾಕಷ್ಟು ಸೈನ್ಟಿಸ್ಟ್ ವರದಿ ಮಾಡಿದ್ದು ಅವರು ತಿಳಿಸಿರುವ ಪ್ರಕಾರ ಮೊದಲೆಲ್ಲಾ ಕರೂನಾ ಸಮಸ್ಯೆ ಬಳಲಿರುವ ಜನ ಮತ್ತೊಂದು ಬಲಿಷ್ಟವಾದ ವೈರಸ್ ಜೊತೆ ಹೊರಡುವ ಪ್ರಸಂಗ ಎದುರಾಗಲಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನೂ ವೈರಸ್ ಬಗ್ಗೆ ಇನ್ನಷ್ಟು ಮಾಹಿತಿ ಲಭ್ಯವಾದ ಬಳಿಕ ಇದಕ್ಕೆ ಬೇಕಾಗುವ ಮದ್ದನ್ನು ಕೂಡ ಕಂಡುಹಿಡಿಯಬಹುದು ಎಂದು ತಿಳಿಸಿದ್ದಾರೆ. 

ವಿಶ್ವ ಆರೋಗ್ಯ ಸಂಸ್ಥೆ ಅಂದರೆ  (WHO) ಇದೀಗ  ಹೊಸ ಸಾಂಕ್ರಾಮಿಕದ ಬಗ್ಗೆ ಹೊಸ ಅಪ್ಡೇಟ್ ನೀಡಿದೆ. ಇನ್ನೂ ಇವರು ವರದಿ ಮಾಡಿರುವ ಪ್ರಕಾರ ಈ ಹೊಸ ಸಾಂಕ್ರಾಮಿಕ ರೋಗವು ಹಳೆಯ ಸಾಂಕ್ರಾಮಿಕ ರೂಗವಾದ ಕೋವಿಡ್ -19 ಗಿಂತ ದುಪ್ಪಟ್ಟು ಮಾರಕವಾಗಿ ಪರಿಣಮಿಸಬಹುದು ಎಂದು ತಿಳಿಸಿದ್ದಾರೆ. ಇನ್ನೂ ಈ ವರದಿಯಿಂದ ಮತ್ತೆ ಜನತೆ  ಆತಂಕಕ್ಕೇ ಒಳಗಾಗಿದ್ದಾರೆ. ಇನ್ನೂ WHO ವರದಿ ಮಾಡಿರುವ ಪ್ರಕಾರ, ತಜ್ಞರು Disease X ಬಗ್ಗೆ ಜನತೆ ತೆಗೆದುಕೊಳ್ಳಬೇಕಾದ ಎಚ್ಚರಿಕೆ ಬಗ್ಗೆ ತಿಳಿಸಿದ್ದಾರೆ. ಇನ್ನೂ  ಬ್ರಿಟನ್‌ನ ತಜ್ಞರ ಲಸಿಕೆ ಕಾರ್ಯಪಡೆಯ ಮುಖ್ಯಸ್ಥ "ಡೇಮ್ ಕೇಟ್ ಬಿಂಗ್‌ಹ್ಯಾಮ್"ಅವರು ,ಈ ಹೊಸ ಸಾಂಕ್ರಾಮಿಕ ರೋಗವು ಕರೋನ ತರಹದ ಹೊಸ ರೂಪವನ್ನು ಪಡೆದುಕೊಂಡರೆ ಅದರಿಂದ ಕನಿಷ್ಠ 5 ಕೋಟಿ ಜನರು ಅದರಿಂದ ಸಾವಿಗಿಡಾಗಬಹುದು  ಎಂದು ಜನರಿಗೆ ಎಚ್ಚರಿಸಿಕೆ ನೀಡಿದ್ದಾರೆ. ಇನ್ನೂ ಈ ಹೊಸ ಸಾಂಕ್ರಾಮಿಕ ರೋಗದಿಂದ, ಅದನ್ನು ಬಗೆಹರಿಸುವುದು ದೊಡ್ಡ ವೈದ್ಯರ ತಂಡಕ್ಕೆ ಸವಾಲಾಗಿದೆ. ಏಕೆಂದರೆ ಇದು ಕೋವಿಡ್ -19 ಗಿಂತ ಹೆಚ್ಚು ಮಾರಕವಾಗಿದೆ ಎಂದು ಅವರು ಹೇಳಿದರು.