ಶಕ್ತಿ ಯೋಜನೆಗೆ ಹೊಸ ರೂಲ್ಸ್ ತಂದ ರಾಜ್ಯ ಸರ್ಕಾರ!ಆ ಹೊಸ ರೂಲ್ಸ್ ಏನು ಗೊತ್ತಾ?

ಶಕ್ತಿ ಯೋಜನೆಗೆ ಹೊಸ ರೂಲ್ಸ್ ತಂದ ರಾಜ್ಯ ಸರ್ಕಾರ!ಆ ಹೊಸ ರೂಲ್ಸ್ ಏನು ಗೊತ್ತಾ?

ಈ ಬಾರಿಯ ಕಾಂಗ್ರೆಸ್ ಸರ್ಕಾರಕ್ಕೆ ಮಿಶ್ರ ಅಭಿಪ್ರಾಯ ಪಡೆದುಕೊಳ್ಳುತ್ತಿದೆ ಎಂದರೆ ತಪ್ಪಾಗಲಾರದು. ಹೌದು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎಂಟನೇ ಮಾಹೆಯನ್ನ ಕೂಡ ತುಂಬಿಸುತ್ತಾ ಬಂದಿದೆ. ಇನ್ನೂ ಈ ಎಂಟು ತಿಂಗಳ ಅವಧಿಯಲ್ಲಿ ಚುನಾವಣೆಯ ಸಂಧರ್ಭದಲ್ಲಿ ಈ ಕಾಂಗ್ರೆಸ್ ಸರ್ಕಾರ ನೀಡಿದ್ದ ಭರವಸೆಯ ಆ ಐದು ಗ್ಯಾರೆಂಟಿ ಯೋಜನೆಗಳನ್ನ ಒಂದೊಂದಾಗಿ ಜಾರಿಗೆ ಬರುತ್ತಿದೆ. ಈಗಾಗಲೇ ಹೆಣ್ಣು ಮಕ್ಕಳಿಗಾಗಿ ಮಾಡಿರುವ ಇಡೀ ಕರ್ನಾಟಕಾದ್ಯಂತ ಉಚಿತ ಬಸ್ ಪ್ರಯಾಣ ಹಾಗೋ ಮನೆಯ ಜವಾಬ್ದಾರಿ ಹೊತ್ತಿರುವ ಹೆಣ್ಣು ಮಕ್ಕಳಿಗೆ ಪ್ರತಿ ತಿಂಗಳು ಸರ್ಕಾರದ ವತಿಯಿಂದ ಎರಡು ಸಾವಿರ ಹಣ ನೀಡುವ ಪ್ರಕ್ರಿಯೆ ಈಗಾಗಲೇ ಶುರುವಾಗಿದೆ.

ಆದ್ರೆ ಈ ಗೃಹ ಲಕ್ಷ್ಮಿ ಅರ್ಜಿ ಸಲ್ಲಿಸಲು ಹಲವಾರು ಲೋಪದೋಷಗಳನ್ನು ಎದುರಿಸುತ್ತಾ ಬಂದಿದೆ. ಹೌದು ಇದೇ ತಿಂಗಳ 17ರಲ್ಲಿ ಅಧಿಕೃತವಾಗಿ ಜಾರಿಗೆ ಬಂದಿರುವ ಗೃಹ ಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಇಂದಿಗೂ ಘೋಷಣೆ ಮಾಡಿಲ್ಲ. ಆದರೆ ಸಾಕಷ್ಟು ಲಕ್ಷ ಕ್ಕೂ ಹೆಚ್ಚು ಅರ್ಜಿ ಸಲ್ಲಿಸಲು ಶುರುವಾಗಿದೆ. ಅರ್ಜಿ ಸಲ್ಲಿಸಿದವರು ಖಾತೆಗೆ ಸರ್ಕಾರ ಎರಡು ಬಾರಿ 2000 ಮೊತ್ತವನ್ನು ಕೊಡ ಬಿಡುಗಡೆ ಮಾಡಿದೆ. ಇನ್ನೂ ಮೂರನೇ ಕಂತಿಗೆ ನಾರಿಯರು ಕಾಯ್ದು ಕುಳಿತಿದ್ದಾರೆ ಎಂದ್ರೆ ತಪ್ಪಾಗಲಾರದು. ಇನ್ನೂ ತಾವು ಅಧಿಕಾರಕ್ಕೆ ಬಂದ ಮರು ದಿನದಿಂದಲೇ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಅಂದಿನಿಂದ ಇಂದಿನ ವರೆಗೂ ಜಾರಿಯಲ್ಲಿ ಇದೆ.  

ಇನ್ನೂ ಇಡೀ ಕರ್ನಾಟಕದಾದ್ಯಂತ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಮಾಡಬಹುದು ಎಂದು ಘೋಷಣೆ ಮಾಡಿರುವ ರಾಜ್ಯ ಸರ್ಕಾರ ಪಯಣ ಮಾಡಲು ಪುರಾವೆ ಆಗಿ ಆ ಹೆಣ್ಣು ಮಗುವಿನ ಆಧಾರ್ ಕಾರ್ಡ್ ಅಥವಾ ವೋಟರ್ ಐಡಿ ಕಾರ್ಡ್ ತೋರಿಸಬೇಕು ಎಂದು ನಿಯಮ ಮಾಡಿದ್ದರು. ಆದ್ರೆ ಈಗ ರಾಜ್ಯ ಸರ್ಕಾರ ನಿಯಮವನ್ನು ಬದಲಾವಣೆ ಮಾಡಿದೆ. ಈಗ ಹೆಣ್ಣು ಮಕ್ಕಳು ಉಚಿತ ಬಸ್ ಪ್ರಯಾಣ ಮಾಡಲು ಯಾವ ಪುರಾವೆಯನ್ನು ತೋರಿಸುವ ಅಗತ್ಯವಿಲ್ಲ. ಇನ್ನೂ ಎಲ್ಲರ ಕೈಯಲ್ಲಿ ಕೊಡ ಸ್ಮಾರ್ಟ್ ಫೋನ್ ಇರುವ ಕಾರಣದಿಂದ ತಮ್ಮ ಫೋನ್ ಮುಖಾಂತರ ಪುರಾವೆಯನ್ನು ತೋರಿಸಿದರೆ ಸಾಕು ಎಂಬ ನಿಯಮವನ್ನು ಬಿಡುಗಡೆ ಮಾಡಿದೆ.