ಬಿಕಿನಿಯಲ್ಲಿ ಮಿಂಚಿದ ನಮ್ರತಾ ಗೌಡ , ಯಾವ ಹೀರೋಯಿನ್​​ಗೂ ಕಡಿಮೆ ಇಲ್ಲ ! ವೈರಲ್ ವಿಡಿಯೋ

ಬಿಕಿನಿಯಲ್ಲಿ ಮಿಂಚಿದ ನಮ್ರತಾ ಗೌಡ , ಯಾವ ಹೀರೋಯಿನ್​​ಗೂ ಕಡಿಮೆ ಇಲ್ಲ ! ವೈರಲ್ ವಿಡಿಯೋ

ಕಿರುತೆರೆಯ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಮ್ರತಾ ಗೌಡ, ಅನೇಕ ಸೀರಿಯಲ್​ಗಳಲ್ಲಿ ನಟಿಸಿ ಮನೆ ಮಾತಾಗಿದ್ದಾರೆ. ಇದೀಗ ನಟಿ ವಿದೇಶಿ ಪ್ರವಾಸದಲ್ಲಿ ಬ್ಯುಸಿ ಆಗಿದ್ದಾರೆ.  ಕಿರುತೆರೆಯ ಉದಯೋನ್ಮುಖ ನಟಿ ನಮ್ರತಾ ಗೌಡ ಕಿರುತೆರೆಯಲ್ಲಿ ಅಭಿಮಾನಯಿಸುತ್ತಾ ಅನೇಕ ಫ್ಯಾನ್ ಫಾಲೋವರ್ಸ್ ಹೊಂದಿದ್ದಾರೆ. ಸಖತ್ ಸ್ಟೈಲಿಶ್ ಆಗಿರುವ ನಮ್ರತಾ ಫಾರಿನ್ ಟ್ರಿಪ್ ಮಾಡ್ತಿದ್ದಾರೆ.

ನಟಿ ನಮ್ರತಾ ಗೌಡ ಫಾರಿನ್​ ಫೋಟೋಶೂಟ್ ಇದೀಗ ಭಾರೀ ವೈರಲ್ ಆಗಿದೆ. ಬೋಲ್ಡ್ ಲುಕ್ ಫೋಟೋವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ನಟಿ ನಮ್ರತಾ ಗೌಡ ಹಂಚಿಕೊಂಡಿದ್ದಾರೆ. ಬಿಕಿನಿಯಲ್ಲಿ ನಾಗಿಣಿ ಅವತಾರ ಕಂಡು ಫ್ಯಾನ್ಸ್ ​ ಖುಷ್​ ಆಗಿದ್ದಾರೆ. ಇಂಡೋನೇಷ್ಯಾದಲ್ಲಿ ನಟಿ ನಮ್ರತಾ ಗೌಡ ಓಡಾಡುತ್ತಿದ್ದಾರೆ. ನಟಿ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನೆಟ್ಟಿಗರು ನಾನಾ ಕಮೆಂಟ್ ಮಾಡಿದ್ದಾರೆ. ಅಭಿಮಾನಿಗಳು ಸೂಪರ್ ನಮ್ಮೂ ಎಂದು ಕಮೆಂಟ್ ಮಾಡಿದ್ರೆ. 

ಕನ್ನಡ ಕಿರುತೆರೆಯಲ್ಲಿ ಕೆಲ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿರುವ ನಮ್ರತಾ ಗೌಡ, ಜೀ ಕನ್ನಡದಲ್ಲಿ ಪ್ರಸಾರವಾಗುವ ನಾಗಿಣಿ 2 ಸೀರಿಯಲ್ ಮೂಲಕ ಹೆಚ್ಚು ಜನಪ್ರಿಯತೆಯನ್ನು ಪಡೆದಿದ್ದಾರೆ. ತಮ್ಮ ಉತ್ತಮ ನಟಿಯಿಂದ ಮನೆ ಮಾತಾಗಿದ್ದಾರೆ. ನಾಗಿಣಿ 2 ಧಾರಾವಾಹಿಯಲ್ಲಿ ಶಿವಾನಿ ಪಾತ್ರದ ಮೂಲಕ ನಮ್ರತಾ ಎಲ್ಲರ ಗಮನ ಸೆಳೆದಿದ್ದಾರೆ. ನಾಗಣಿ 2 ಜನಪ್ರಿಯ ಸೀರಿಯಲ್ ಆಗಿದ್ದು ನಟಿ ನಮ್ರತಾಗೆ ಒಳ್ಳೆಯ ಹೆಸರು ತಂದುಕೊಟ್ಟಿದೆ.


ಗಟ್ಟಿಮೇಳ ನಟ ರಕ್ಷ್ ಜೊತೆ 'ಪುಟ್ಟಗೌರಿ ಮದುವೆ'ಯಲ್ಲಿ ನಮ್ರತಾ ಗೌಡ ನಟಿಸಿದ್ದಾರೆ. ಹಾಗೇ ನಟಿ ಐಶ್ವರ್ಯಾ ಸಿಂಧೋಗಿ ಜೊತೆ ನಾಗಿಣಿ 2 ಸೀರಿಯಲ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ನಟಿ ನಮ್ರತಾ ಗೌಡ ಆಗಾಗ ಫೋಟೋಶೂಟ್​ಗಳನ್ನು ಹಂಚಿಕೊಳ್ತಾರೆ.