ದಂಪತಿಗಳ ಮೇಲೆ ಕಾರ್ ಹತ್ತಿಸಿದ ಟಗರು ಪಲ್ಯ ನಟ ನಾಗಭೂಷಣ್ ಅರೆಸ್ಟ್..! ಓರ್ವ ಮಹಿಳೆ ಸಾವು

ದಂಪತಿಗಳ ಮೇಲೆ ಕಾರ್ ಹತ್ತಿಸಿದ ಟಗರು ಪಲ್ಯ ನಟ ನಾಗಭೂಷಣ್ ಅರೆಸ್ಟ್..! ಓರ್ವ ಮಹಿಳೆ ಸಾವು

ನಾವು ಕ್ಷಣಿಕವಾಗಿ ಈ ಭೂಮಿ ಮೇಲೆ ಜೀವನ ಮಾಡುತ್ತಿದ್ದೇವೆ ಎನ್ನುವುದನ್ನು ಯಾರು ಕೂಡ ಮರೆಯಬಾರದು. ಯಾವ ಸಂದರ್ಭದಲ್ಲಿ ಯಾವ ರೀತಿ ಸಮಸ್ಯೆ ಎದುರಾಗುತ್ತವೆ, ಯಾವ ರೀತಿ ನಮ್ಮ ಕ್ಷಣಿಕ ದುಡುಕುತನ ಹಾಗೆ ಅತಿಯಾದ ಸ್ಪೀಡ್ ಕೆಲವೊಂದು ಬಾರಿ ನಮಗೆ ಹೇಗೆ ಸಮಸ್ಯೆ ಉಂಟುಮಾಡುತ್ತವೆ, ನಾವು ಮಾಡಿದ ತಪ್ಪಿನಿಂದ ಅಮಾಯಕ ಬೇರೆಯ ಕುಟುಂಬಗಳು ಸಹ ಕಣ್ಣೀರು ಸುರಿಸುವ ಸಂದರ್ಭ ಎದುರು ಬರಬಹುದು. ಹೌದು ಕನ್ನಡದ ಖ್ಯಾತ ನಟ ಆಗಿ ಕಾಮಿಡಿ ನಟ ಆಗಿ ಇಷ್ಟು ದಿನ ಮಿಂಚಿದಂತಹ ಹಾಗೂ ಇನ್ನೂ ಮುಂದೆಯೂ ಕೂಡ ಮಿಂಚುತ್ತಾ ಸದಾ ಮುನ್ನೆಲೆಗೆ ಬರುತ್ತಿದ್ದ ನಟ ನಾಗಭೂಷಣ್ ಅವರು ನಿನ್ನೆ ತಡರಾತ್ರಿ ದಂಪತಿಗಳ ಮೇಲೆ ಕಾರು ಹತ್ತಿಸಿದ್ದಾರೆ.

ಸಸ್ಥಳದಲ್ಲೇ ಆ ಮಹಿಳೆ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ. ಆಕೆಯ ಪತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಸಲಿಗೆ ಏನೆಲ್ಲಾ ಆಯ್ತು ಅಂದರೆ, ನಿನ್ನೆ ಅವರ ಕಿಯಾ ಕಾರನ್ನು ಚಲಾಯಿಸುತ್ತಿದ್ದ ನಟ ನಾಗಭೂಷಣ್ ಅವರು ಆರ್ ಆರ್ ನಗರಕ್ಕೆ ಗೆಳೆಯನ ಮನೆಗೆ ಹೋಗಿದ್ದಾರೆ. ನಂತರ ಅಲ್ಲಿಂದ ಬರುವಾಗ ಸುಮಾರು 10 ಗಂಟೆ ಆಗಿದ್ದು, ಆ ಸುಮಾರಿಗೆ ಉತ್ತರಹಳ್ಳಿ ಕೋಣನಕುಂಟೆ ರಸ್ತೆ ಮಾರ್ಗದಲ್ಲಿ ಒಂದು ದಂಪತಿ ಊಟ ಆದ ಬಳಿಕ ವಾಕಿಂಗ್ ಗೆ ತೆರಳಿದ್ದಾರೆ..ಆಗ ಕತ್ತಲಲ್ಲಿ ತುಂಬಾನೇ ಸ್ಪೀಡ್ ಆಗಿ ಬಂದ ನಾಗಭೂಷಣ್ ಅವರು ಕಾರಿನಲ್ಲಿ ಹಿಡಿತ ಸಾಧಿಸಿಲ್ಲ. ಸೀದಾ ಆ ದಂಪತಿ ಮೇಲೆಯೆ ತಮ್ಮ ಕಾರನ್ನು ಹತ್ತಿಸಿಬಿಟ್ಟಿದ್ದಾರೆ.    

ವಸಂತಪುರದ ನಿವಾಸಿ ಆಗಿದ್ದ ಪ್ರೇಮ( 48 )ಎಂಬ ಈ ಮಹಿಳೆ ಸ್ಥಳದಲ್ಲಿ ಸಾವನ್ನಪ್ಪಿದ್ದು, ಗಂಡ ಶ್ರೀಕೃಷ್ಣ (58) ಅವರು ಸಹ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಗಭೂಷಣ್ ಅವರು ಏನಾದ್ರೂ ನಿನ್ನೆ ರಾತ್ರಿ ಕಾರು ಚಲಾಯಿಸುವ ವೇಳೆ ಆಲ್ಕೋಹಾಲ್ ಸೇವಿಸಿದ್ರ ಎಂಬ ಪ್ರಶ್ನೆ ಕೇಳಿ ಬಂದಿದ್ದು ಯಾವುದೇ ಆಲ್ಕೋಹಾಲ್ ಸೇವಿಸಿರಲಿಲ್ಲ ಎಂದು ವೈದ್ಯಕೀಯ ಪ್ರಾರ್ಥಮಿಕ ವಲಯದವರು ಹೇಳಿದ್ದಾರೆ.. ಜೊತೆಗೆ ಈ ದಂಪತಿಯ ಮೇಲೆ ಕಾರು ಹತ್ತಿಸಿದ ಬಳಿಕ, ನಾಗಭೂಷಣ್ ಕಾರು ಸೀದಾ ಒಂದು ಕರೆಂಟ್ ಕಂಬಕ್ಕೆ ಹೋಗಿ ಡಿಕ್ಕಿ ಹೊಡೆದಿದೆ. ನಂತರ ಅಲ್ಲಿಂದ ಇಳಿದು ಬಂದು ನಾಗಭೂಷಣ್ ಅವರು ಈ ದಂಪತಿಯನ್ನು ಆಸ್ಪತ್ರೆಗೆ ಸಾಗಿಸಲು ಸಹಾಯ ಮಾಡಿದ್ದಾರೆ.

ಆದರೆ ಇವರು ಮಾಡಿದ ತಪ್ಪು ತಪ್ಪೇ..ಇವರ ನಿರ್ಲಕ್ಷದಿಂದ ಒಂದು ಜೀವ ಹೋಗಿದೆ..ನಾಗಭೂಷಣ್  ಅವರನ್ನು ನಾವು ಸಮರ್ಥಿಸಿಕೊಳ್ಳಲು ಆಗುವುದಿಲ್ಲ. ಇದೀಗ ಪ್ರಕರಣ ಪೋಲಿಸ್ ಠಾಣೆಯಲ್ಲಿ ದಾಖಲಾಗಿದ್ದು ನಾಗಭೂಷಣ್' ರನ್ನ ಅರೆಸ್ಟ್ ಮಾಡಲಾಗಿದೆಯಂತೆ. ಇನ್ನಷ್ಟು ತನಿಖೆ ವಿಚಾರಣೆ ನಡೆಯಲಿದ್ದು ಯಾವ ರೀತಿ ಈ ಕೇಸ್ ನಡೆಯುತ್ತದೆ ಎಂದು ಕಾದು ನೋಡಬೇಕು. ಹಾಗೆ ನಾಗಭೂಷಣ ಅವರ ಈ ಒಂದು ತಪ್ಪಿಂದ ಅವರ ಮುಂದಿನ ಸಿನಿಮಾ ಜೀವನ ಸಹ ಕಷ್ಟ ಆಯ್ತು, ಹಾಗೆ ಆ ಕಡೆ ಏನು ತಪ್ಪು ಮಾಡದ ಒಂದು ಅಮಾಯಕ ಜೀವ ಹೋಯ್ತು.. ಅವರ ಕುಟುಂಬ ಇದನ್ನ ಹೇಗೆ ತೆಗೆದುಕೊಳ್ಳುತ್ತದೆಯೋ ದೇವರೇ ಬಲ್ಲ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ಅತಿಯಾದ ವೇಗ ಒಳ್ಳೆಯದು ಅಲ್ಲ, ಯಾವ ಸಂದರ್ಭದಲ್ಲಿ ಏನಾಗುತ್ತದೆ ಎಂದು ನಾವು ಏನು ಹೇಳೋಕೆ ಆಗೋಲ್ಲ ಎಂದು ಈ ಘಟನೆ ಮೂಲಕ ಅರ್ಥೈಸಿಕೊಳ್ಳಬಹುದು.. ಧನ್ಯವಾದಗಳು...( video crediy :Third eye )