ದೊಡ್ಡ ಮನೆಗೆ ಕಾಲಿಟ್ಟ ಪ್ರದೀಪ್ ಈಶ್ವರ್! ಈ ಹೊಸ ಟ್ವಿಸ್ಟ್ ನ ಕಾರಣ ಏನೂ ಗೊತ್ತಾ?

ದೊಡ್ಡ ಮನೆಗೆ ಕಾಲಿಟ್ಟ ಪ್ರದೀಪ್ ಈಶ್ವರ್! ಈ ಹೊಸ ಟ್ವಿಸ್ಟ್ ನ ಕಾರಣ ಏನೂ ಗೊತ್ತಾ?

ನಮ್ಮ ಕನ್ನಡ ಕಿರುತೆರೆಯ ದೊಡ್ಡ ಹಬ್ಬ ಎಂದರೆ ಅದು ಬಿಗ್ ಬಾಸ್. ಇನ್ನೂ ಕನ್ನಡ ಕಿರುತೆರೆಯಲ್ಲಿ ಅದ್ರಲ್ಲೂ ರಿಯಾಲಿಟಿ ಶೋ ಗಳ ಪೈಕಿ ಈ ಶೋ ದೊಡ್ಡ ಹೆಸರನ್ನೇ ಮಾಡಿದೆ. ಇನ್ನೂ ಈ ಶೋ ಹಿಂದಿ ಅವತರಣಿಕೆಯಲ್ಲಿ ಮೂಡಿ ಬಂದರು ಕೊಡ ಎಲ್ಲಾ ಭಾಷೆಯಲ್ಲಿ ಹಿಟ್ ಎನ್ನುವ ಮುದ್ರೆ ಹೊತ್ತಿದೆ. ಅದ್ರಲ್ಲೂ ನಮ್ಮ ಕನ್ನಡ ಬಿಗ್ ಬಾಸ್ ನಲ್ಲಿ ಇಡೀ ಹತ್ತು ಸೀಸನ್ ಕೊಡ ಕಿಚ್ಚ ಸುದೀಪ್ ಎನ್ನುವ ಒಬ್ಬ ಸಾರಥಿ ಜೊತೆಗೆ ಈ s ಹತ್ತು ಸೀಸನ್ ಒಳಗೊಂಡಿರುವುದು ಬೇರೆ ಭಾಷೆಯಲ್ಲಿ ಎರಡರಿಂದ ಮೂರು ನಿರೂಪಕರು ಬದಲಾಗಿದ್ದು ಆದ್ರೆ ನಮ್ಮ ಕನ್ನಡದಲ್ಲಿ ಏಕೈಕ ಸಾರಥಿ ಯಿಂದ ಸೀಸನ್ ಗಳು ಮೂಡಿ ಬರುತ್ತಿರುವುದು ಬಹಳಷ್ಟು ಹೆಮ್ಮೆಗೆ ಕಾರಣವಾಗಿದೆ.  

ಎಂದಿನಂತೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ನೆನ್ನೆಯಷ್ಟೇ ಸಂಜೆ ಆರಕ್ಕೆ ತನ್ನ ಗ್ರ್ಯಾಂಡ್ ಪ್ರೀಮಿಯರ್ ಶುರುಮಾಡಿತ್ತು. "ಕಿಚ್ಚ ಸುದೀಪ್" ಕೊಡ ಗ್ರಾಂಡ್ ಎಂಟ್ರಿ ಕೊಟ್ಟು ಈ ಬಾರಿಯ ಬಿಗ್ ಬಾಸ್ ಸೀಸನ್ ಹತ್ತರ ದೊಡ್ಡ ಮನೆಯನ್ನು ಪರಿಚಯ ಮಾಡಿಕೊಟ್ಟರು. ಅದಾದ ಬಳಿಕ ಈ ಹಿಂದಿನ ಸೀಸನ್ ಗಳಲ್ಲಿ ಗೆದಿದ್ದ "ಚಂದನ್ ಶೆಟ್ಟಿ, ಪ್ರಥಮ್ , ಶೃತಿ ಹಾಗೂ ಮಂಜ ಪವಾಗಡ" ಅವರನ್ನು ಕೊಡ ಅತಿಥಿಯಾಗಿ ಆಹ್ವಾನ ಮಾಡಲಾಗಿತ್ತು. ಹಲವಾರು ದಿನಗಳಿಂದಲೂ ಬಿಗ್ ಬಾಸ್ ಸ್ಪರ್ಧಿಗಳು ಯಾರಿರಬಹುದು ಎಂದು ಕಾತುರತೆ ಇಂದ ಕುಳಿತಿದ್ದ ವೀಕ್ಷಕರಿಗೆ ನಿನ್ನೆ ಎಲ್ಲಾ ಸ್ಪರ್ಧಿಗಳ ಪರಿಚಯ ಮಾಡಿ ಎಲ್ಲಾ ಗೊಂದಲಕ್ಕೆ ಅಂತ್ಯ ಮಾಡಲಾಗಿದೆ. 

ಇನ್ನೂ ಈ ಬಾರಿ ಸೀಸನ್ ಹತ್ತು ಆಗಿರುವ ಕಾರಣ ದಶಕದ ಸಂಭ್ರಮದಲ್ಲಿ "ಹ್ಯಾಪೀ ಬಿಗ್ ಬಾಸ್" ಎಂದು ವಿಭಿನ್ನತೆ ಮೂಲಕ ಮುಂದಿನ ದಿನಗಳಲ್ಲಿ ಕೊಡ ಇನ್ನಷ್ಟು ಹೆಚ್ಚಿನ ವಿಭಿನ್ನತೆಯನ್ನು ತೋರಿಸಲಾಗುವುದು ಎಂದು ತಿಳಿಸಿದ್ದಾರೆ. ಈಗಾಗಲೇ ಶುರುವಿನಲ್ಲಿ ಮನೆ ಪ್ರವೇಶದಲ್ಲಿ ವಿಭಿನ್ನತೆಯನ್ನು ತೋರಿಸಿ ಜನರಿಂದ ಆಯ್ಕೆ ಆದ ವ್ಯಕ್ತಿಗಳನ್ನು ಮಾತ್ರ ಮನೆ ಒಳಗೆ ಪ್ರವೇಶ ಮಾಡಲಾಗಿತ್ತು. ಇನ್ನೂ ಅತಿ ಕಡಿಮೆ ವೋಟ್ ಪಡೆದುಕೊಂಡಿರುವ ಕಾರಣ "ಡ್ರೋನ್ ಪ್ರತಾಪ್ , ರಕ್ಷಕ್ ಬುಲೆಟ್, ಸಂಗೀತಾ ಹಾಗೂ ಕಾರ್ತಿಕ್" ಅವರನ್ನು ಒಂದು ವಾರದ ಮಟ್ಟಿಗೆ ಮನೆಯ ಒಳಗೆ ಬಿಡಲಾಗಿದೆ. ಅದಾದ ಬಳಿಕ ಅವರ ಹಾಗೂ ಹೋಗುಗಳನ್ನು ಗಮನಿಸಿ ಮುಂದಿನ ವಾರ ಉಳಿವು ಅಳಿವಿನ ಬಗ್ಗೆ ತಿಳಿಸಲಾಗುವುದು. ಇದೀಗ ಇಂದು ಕಲರ್ಸ್ ಕನ್ನಡ ಅವರು ಹಂಚಿಕೊಂಡಿರುವ ಪ್ರೋಮೋ ಪ್ರಕಾರ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗಿ MLA ಆಗಿ ಕಾರ್ಯ ನಿರ್ವಹಿಸುತ್ತಿರುವ "ಪ್ರದೀಪ್ ಈಶ್ವರ್" ಕೊಡ ದೊಡ್ಡ ಮನೆಯನ್ನು ಪ್ರವೇಶ ಮಾಡಿದ್ದಾರೆ.