Mithuna Rasi 2024 Horoscope: ಮಿಥುನ ರಾಶಿಗೆ 2024ರಲ್ಲೀ ಅದೃಷ್ಟ ಬದಲಾಗಲಿದೆ ! ಹೇಗಿರತ್ತೆ ಗೊತ್ತಾ ನಿಮ್ಮ ಭವಿಷ್ಯ?
ಮಿಥುನ ರಾಶಿ ಭವಿಷ್ಯ 2024 ರ ಪ್ರಕಾರ, ಈಗಾಗಲೇ ಜೋಡಣೆ ಆಗಿರುವ ಗ್ರಹಗಳ ಪ್ರಕಾರ ನಿಮ್ಮ ಮುಂದಿನ ವರ್ಷದ ದಿನಗಳು ಬಹಳ ಅನುಕೂಲಕರವಾಗಿ ಶುರುವನ್ನ ಪಡೆದುಕೊಳ್ಳುತ್ತದೆ. ಇನ್ನೂ ಈ ರಾಶಿಯ ಹನ್ನೊಂದನೇ ಮನೆಯಲ್ಲಿ ಗುರುವಿನ ಉಪಸ್ಥಿತಿ ಇರುವ ಕಾರಣದಿಂದ ಈ ರಾಶಿಯ ಜನರು ಮಾಡಿದ ಕೆಲ್ಸಕ್ಕೆ ಯಶಸ್ಸನ್ನು ಪಡೆದುಕೊಳ್ಳಬಹುದು. ಹಾಗೆಯೇ ಮುಂದಿನ ವರ್ಷದಲ್ಲಿ ನಿಮ್ಮ ಆರ್ಥಿಕ ಸ್ಥಿತಿಯನ್ನು ಮೊದಲಿಗಿಂತಲೂ ಹೆಚ್ಚಿಸುತ್ತದೆ. ಹಾಗೆಯೇ ಪ್ರೀತಿಯ ವಿಷಯಗಳಲ್ಲಿ ನಿಮ್ಮ ಪ್ರಯತ್ನಗಳು ಪ್ರವರ್ಧಮಾನಕ್ಕೆ ಬರುವುದು. ಇನ್ನೂ ಮುಂದಿನ ವರ್ಷದಲ್ಲಿ ವೈವಾಹಿಕ ಸಂಬಂಧಗಳಲ್ಲಿ ಮೂಡಿರುವ ಸಮಸ್ಯೆಗಳು ಕೂಡ ಕಡಿಮೆಯಾಗುವ ಎಲ್ಲಾ ಸಾಧ್ಯತೆಗಳೂ ಕೊಡ ಇದೆ.
ಇನ್ನೂ ಈ ರಾಶಿಯ ಅದೃಷ್ಟಅಧಿಪತಿ ಶನಿ ಆಗಿರುವ ಕಾರಣದಿಂದ ಆಯಕಟ್ಟಿನ ಸ್ಥಾನವು ನಿಮಗೆ ಅನುಕೂಲ ಆಗುವಂತೆ ಬದಲಾಗುವುದು. ನಿಮ್ಮ ಹತ್ತನೇ ಮತ್ತು ನಾಲ್ಕನೇ ಮನೆಗಯಲ್ಲಿ ರಾಹು ಮತ್ತು ಕೇತುಗಳ ಉಪಸ್ಥಿತಿಯ ಕಾರಣದಿಂದ ನಿಮ್ಮ ದೇಹದಲ್ಲಿ ಮೂಡಿರುವ ದೈಹಿಕ ಸಮಸ್ಯೆಯನ್ನು ನೀವು ಯೆದುರಿಸಿಯಾಬೇಕಾಗಿತ್ತು.ಹಾಗೆಯೇ ಕೌಟುಂಬಿಕ ಜೀವನವು ಏರಿಳಿತಗಳನ್ನು ಕಾಣಲಿದೆ.
ವರ್ಷದ ಆರಂಭದಲ್ಲಿ ಸೂರ್ಯ ಮತ್ತು ಮಂಗಳವು ಏಳನೇ ಮನೆಯ ಆಗಮನದಿಂದ, ವೈವಾಹಿಕ ಸಂಬಂಧಗಳಲ್ಲಿ ನಿಮಗೆ ಕಿರಿ ಕಿರಿ ಉಂಟುಮಾಡಿ ಒತ್ತಡವನ್ನು ಏರುತ್ತದೆ. ನಿಮ್ಮ ವ್ಯಾಪಾರ ಹಾಗೂ ವ್ಯವಹಾರದ ಕೆಲಸಗಳಲ್ಲಿ ಏರಿಳಿತಗಳನ್ನು ಅನುಭವಿಸಬೇಕು. ಇನ್ನೂ ಈ ವರ್ಷದ ಆರಂಭದಲ್ಲಿ ಆರನೇ ಮನೆಯಲ್ಲಿ ಬುಧ ಮತ್ತು ಶುಕ್ರನ ಪ್ರಭಾವವು ಹೆಚ್ಚಾಗಿರುವುದರಿಂದ ನೀವು ಲಾಭಕ್ಕಿಂತ ಮಿಶ್ರ ಫಲವನ್ನು ಪಡೆದುಕೊಳ್ಳುವುದು ಹೆಚ್ಚು. ಆದರೆ ಮುಂದಿನ ವರ್ಷದ ಒಟ್ಟಾರೆ ಪ್ರಗತಿಗೆ ನಿಮ್ಮ ಆರೋಗ್ಯಕ್ಕೆ ಆದ್ಯತೆ ನೀಡುವುದು ಕಡ್ಡಾಯ.