ಅದೊಂದು ದೇವಸ್ಥಾನಕ್ಕೆ ಗಂಡಸರು ಹೆಣ್ಣಿನ ವೇಷದಲ್ಲಿ ಹೋಗುವುದೇಕೆ ಗೊತ್ತೇ..? ವಿಡಿಯೋ ನೋಡಿ

ಅದೊಂದು ದೇವಸ್ಥಾನಕ್ಕೆ ಗಂಡಸರು ಹೆಣ್ಣಿನ ವೇಷದಲ್ಲಿ ಹೋಗುವುದೇಕೆ ಗೊತ್ತೇ..?  ವಿಡಿಯೋ ನೋಡಿ

ಭಾರತದಲ್ಲಿ ದೇವರು ಎಂದರೆ, ಎಲ್ಲರಿಗು ಭಯ, ಭಕ್ತಿ ಇದೆ. ಭಾರತೀಯರೆಲ್ಲರೂ, ದೇವರನ್ನು ನಂಬುತ್ತಾರೆ. ನಿತ್ಯ ದೇವರಿಗೆ ಪೂಜೆ ಮಾಡಿ ಬಳಿಕವೇ ತಮ್ಮ ಕೆಲಸ ಕಾರ್ಯಗಳನ್ನು ಆರಂಭಿಸುತ್ತಾರೆ. ದೇಶದ ಪ್ರತಿಯೊಂದು ಊರುಗಳಲ್ಲೂ ಒಂದೊಂದು ದೇವರಿದೆ. ತೀರ್ಥಕ್ಷೇತ್ರಗಳಲ್ಲಿ ದೇವರ ಮಹಿಮೆ ಹೆಚ್ಚಿರುತ್ತದೆ. ಗ್ರಾಮದೇವತೆ, ಕುಲದೇವತೆ ಅಂತಲೇ ಜನರು ಭಕ್ತಿಯಿಂದ ಎಲ್ಲಾ ದೇವರಿಗೂ ಪೂಜೆ ಮಾಡುತ್ತಾರೆ. ವ್ರತಗಳನ್ನು ಮಾಡಿ ತಮ್ಮ ಹರಕೆಗಳನ್ನು ಕೂಡ ತೀರುಸತ್ತಾರೆ. ಒಂದೊಂದು ಕಡೆ ಒಂದೊಂದು ರೀತಿ ಪದ್ಧತಿಗಳಿವೆ. 

ಇನ್ನು ಕೆಲ ದೇವರಿಗೆ ಗಂಡಸರು ಪೂಜೆ ಮಾಡಬಾರದು, ಕೆಲ ದೇವಸ್ಥಾನಗಳಲ್ಲಿ ಹೆಂಗಸರಿಗೆ ಪ್ರವೇಶವಿರುವುದಿಲ್ಲ. ಹೀಗೆ ಒಂದೊಂದು ಕಡೆ ಒಂದೊಂದು ರೀತಿ ಇರುತ್ತದೆ. ಇಲ್ಲೊಂದು ದೇವರಿದ್ದಾರೆ. ಈ ದೇವರಿಗೆ ಪೂಜೆ ನಡೆದ ಬಳಿಕ ದೀಪವನ್ನು ಹಚ್ಚ ಬೇಕು. ಅಲ್ಲದೇ, ಈ ಊರಿನ ಗಂಡಸರು ವರ್ಷದಲ್ಲಿ ಒಂದು ದಿನ ಜಾತ್ರೆ ನಡೆಯುವಾಗ ಹೆಂಗಸರ ವೇಷವನ್ನು ಧರಿಸಿ ದೇವಾಲಯಕ್ಕೆ ಬರಬೇಕು. ಅಂತೆಯೇ ಹೆಂಗಸರು ಒಂದು ದಿನ ವಿಧವೆಯಾಗಬೇಕು.    

ಇಂತಹ ವಿಚಿತ್ರವಾದ ಪದ್ಧತಿಯ ಹಿಂದೆ ಕಥೆಯೂ ಇದೆ. ಈ ಊರಿನಲ್ಲಿದ್ದ ಅನಾಥ ಮಬಾಲಕನನ್ನು ಯಾರೂ ಹತ್ತಿರ ಸೇರಿಸುತ್ತಿರಲಿಲ್ಲವಂತೆ. ಊರಿಂದ ಆಚೆ ಹಾಕಿದ್ದರಂತೆ. ಯಾರೋ ಒಂದು ಹನಿ ನೀರು ಕೂಡ ಕೊಡುತ್ತಿರಲಿಲ್ಲವಂತೆ. ಹೀಗಾಗಿ ಆ ಬಾಲಕ ಸಾಯಲು ಯತ್ನಿಸಿದಾಗ ಪಾರ್ವತಿ ದೇವಿ ಪ್ರತ್ಯಕ್ಷಳಾದಳಂತೆ. ನಿನಗೆ ನಾನಿದ್ದೇನೆ ಎಂದು ಹೇಳಿದಳಂತೆ. ಬಾಳಿಕ ಆ ಬಾಲಕ ಊರಿನ ಜನರಿಗೆ ನಿರ್ದಿಷ್ಟದ ದಿನ ಗಂಡನರೆಲ್ಲಾ ಹೆಂಗಸರಂತೆ ಸಿಂಗಾರ ಮಾಡಿಕೊಂಡು ತನ್ನ ದೇವಾಲಯಕ್ಕೆ ಬರಬೇಕು. ಹೆಂಗಸರೆಲ್ಲಾ ಒಂದು ದಿನ ವಿಧವೆಯರಾಗಬೇಕು ಎಂದು ಷರತ್ತನ್ನು ವಿಧಿಸಿ, ಎಲ್ಲರ ಎದುರಿಗೂ ದೇವತೆ ಪಾರ್ವತಿ ರೂಪದಲ್ಲಿ ಕಲ್ಲಾದನಂತೆ. ಈ ವಿಗ್ರಹ ಇಂದಿಗೂ ಬೆಳೆಯುತ್ತಿದೆಯಂತೆ. 

ಹಾಗಾಗಿ ಈ ಊರಿನ ಜನ ಪ್ರತೀ ವರ್ಷ ಮಾರ್ಚ್ ತಿಂಗಳಿನಲ್ಲಿ ಜಾತ್ರೆ ಮಾಡಿ ಗಂಡಸರೆಲ್ಲಾ ಹೆಣ್ಣಿನ ವೇಷದಲ್ಲಿ ಬರುತ್ತಾರಂತೆ. ಅಷ್ಟಕ್ಕೂ ಈ ದೇವಾಯಲ ಇರುವುದು ದೇವರ ನಾಡು ಕೇರಳದಲ್ಲಿ. ಇಲ್ಲಿನ ರಾಜಧಾನಿ ತಿರುವನಂತಪುರಂನಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ 78 ಕಿಲೋಮೀಟರ್ ಸಾಗಿದರೆ, ಅಲ್ಲಿ ಕೋಟಂ ಕುಲನಗರ್ ಎಂಬ ಹಳ್ಳಿ ಸಿಗುತ್ತೆ. ಇದೇ ಹಳ್ಳಿಯಲ್ಲಿ ನಲಿಸಿರುವ 'ಕೋಟಂ ಕುಲನಗರ್ ದೇವ ದೇವಸ್ಥಾನ"ವಿದು. ( video credit : goli inside hit )