ಚಿರುನೇ ಧ್ರುವ ಸರ್ಜಾ ಮಗನಾಗಿ ಹುಟ್ಟಿ ಬಂದರ..? ಮೇಘನಾ, ಧ್ರುವ ಮಗನ ನೋಡಿ ಎಂಥಹ ಮಾತು ಆಡಿದ್ದಾರೆ ನೋಡಿ

ಚಿರುನೇ ಧ್ರುವ ಸರ್ಜಾ ಮಗನಾಗಿ ಹುಟ್ಟಿ ಬಂದರ..? ಮೇಘನಾ, ಧ್ರುವ ಮಗನ ನೋಡಿ ಎಂಥಹ ಮಾತು ಆಡಿದ್ದಾರೆ ನೋಡಿ

ನಟ ಧ್ರುವ ಸರ್ಜಾ ಹಾಗೂ ಪ್ರೇರಣ ದಂಪತಿಗೆ ನಿನ್ನೆ ಗಂಡು ಮಗು ಆಗಿರುವ ವಿಷಯ ನಿಮಗೆ ಗೊತ್ತಿದೆ. ನಿನ್ನೆ  ಬೆಂಗಳೂರಿನ ಬಸವನಗುಡಿ ಖಾಸಗಿ ಆಸ್ಪತ್ರೆ ಒಂದರಲ್ಲಿ ಪ್ರೇರಣ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಮೂಲಕ ಧ್ರುವ ಸರ್ಜಾ ಅವರು ತಂದೆ ಆಗಿದ್ದು, ಅತ್ತ ಪ್ರೇರಣಾ ಅವರು ಎರಡನೇ ಮಗುವಿನ ತಾಯಿ ಆಗಿದ್ದಾರೆ.. ಈಗಾಗಲೇ ಈ ದಂಪತಿಗೆ ಒಂದು ಹೆಣ್ಣು ಮಗು ಇತ್ತು, ಅದಕ್ಕೆ ಇನ್ನೂ ಕೂಡ ಹೆಸರಿಟ್ಟಿರಲಿಲ್ಲ. ಅಷ್ಟರಲ್ಲಾಗಲೇ ಇದೀಗ ಇನ್ನೊಂದು ಗಂಡು ಮಗುವಿನ ಆಗಮನದಲ್ಲಿ ಅವರ ಇಡೀ ಕುಟುಂಬ ಖುಷಿಯಲ್ಲಿ ತೇಲಾಡುತ್ತಿದೆ ಎನ್ನಬಹುದು.. 

ಮಗುವನ್ನು ಈಗಾಗಲೇ ಮೇಘನ ರಾಜ್ ಅವರ ಇಡೀ ಕುಟುಂಬ ಬಂದು ನೋಡಿಕೊಂಡು ಹೋಗಿದೆ. ನಟ ಸುಂದರ್ ರಾಜ್ ಅವರು ಕೂಡ ಮಗುವಿನ ಜಾತಕ ಮತ್ತು ಮಗುವಿನ ಆಗಮನದ ಸಂತಸದ ಕ್ಷಣದ ಬಗ್ಗೆ ಮಾತನಾಡಿ ಹೋದರು.. ಮೇಘನಾ ರಾಜ್ ಕೂಡ ಮಗುವಿನ ಬಗ್ಗೆ ಮಾತನಾಡಿದ್ದು, ಆಡಿದ ಮಾತುಗಳು ನಿಜಕ್ಕೂ ಎಲ್ಲರು ಮೆಚ್ಚುವ ಹಾಗೆಯೇ ಇದ್ದವು. ಈ ಮಗುವನ್ನು ನೋಡಿ ಧ್ರುವ ಸರ್ಜಾ ಅಭಿಮಾನಿಗಳು ಮತ್ತು ನೆಟ್ಟಿಗರು ಹೇಳಿದ ಹಾಗೆ, ಚಿರಂಜೀವಿ ಸರ್ಜಾ ಅವರನ್ನು ದ್ರುವ ಸರ್ಜಾ ತುಂಬಾನೇ ಹಚ್ಚಿಕೊಂಡಿದ್ದರು. ಅಣ್ಣನ ಅಗಲಿಕೆಯಿಂದ ಧ್ರುವ ತುಂಬಾನೇ ನೊಂದು ಹೋಗಿದ್ದರು. ಅವರ ಅಗಲಿಕೆ ನೋವ ಬರಿಸುತ್ತಿದ್ದರು.     

ಅದನ್ನು ನೋಡಿ ಚಿರಂಜೀವಿ ಸರ್ಜಾ ಅವರೇ ಮತ್ತೆ ಧ್ರುವ ಸರ್ಜಾ ಮಗನಾಗಿ ಹುಟ್ಟಿ ಬಂದಿದ್ದಾರೆಯೇ ಎಂದು ನಮಗೆ ಅನ್ಸುತ್ತೆ ಎಂದು ಮಗು ನೋಡಿ ಖುಷಿ ವ್ಯಕ್ತಪಡಿಸುತ್ತಿದ್ದಾರೆ.

ಇನ್ನೊಂದು ಕಡೆ ಮೇಘನ ರಾಜ್ ಅವರು ಮಗುವನ್ನ ನೋಡಿ, 'ನಮಗೆ ತುಂಬಾನೇ ಖುಷಿ ಆಗುತ್ತಿದೆ, ಸರ್ಜಾ ಕುಟುಂಬದಲ್ಲಿ ಈಗಾಗಲೇ ಒಂದು ಗಂಡು, ಒಂದು ಹೆಣ್ಣು ಮಗುವಿತ್ತು. ಇದೀಗ ಧ್ರುವ ಗೆ ಇನ್ನೊಂದು ಗಂಡು ಮಗು ಆಗಿದೆ, ರಾಯನ್ ಗೆ ಆಟ ಆಡಲು ತಮ್ಮ ತಂಗಿ ಸಿಕ್ಕರು.. ಪ್ರೇರಣಾ ಗೆ ನಾರ್ಮಲ್ ಡೆಲಿವರಿ ಆಗಿದ್ದು ಎಲ್ಲರಿಗೂ ಖುಷಿಯಾಗಿದೆ.. ತಾಯಿ ಮಗು ಆರೋಗ್ಯ ಇದ್ದಾರೆ. ನೀವು ಕೂಡ ಮಗುವಿಗೆ ಆಶೀರ್ವದಿಸಿ' ಎಂದು ಮೇಘನಾ ರಾಜ್ ಅವರು ಹೇಳಿಕೊಂಡಿದ್ದಾರಂತೆ.. ಇಲ್ಲಿದೆ ನೋಡಿ ಆ ವಿಡಿಯೋ. ವಿಡಿಯೋ ಒಮ್ಮೆ ನೋಡಿ, ಮತ್ತು ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು.. ( video credit : karunada suddi )