ನಿಮಗೆ ಬೀಳುವ ಕನಸುಗಳು ಕೂಡ ನಿಮ್ಮ ಭವಿಷ್ಯದ ಮುನ್ಸೂಚನೆ ನೀಡಲಿದೆ! ಯಾವ ರೀತಿಯ ಕನಸಿಗೆ ಯಾವ ಅರ್ಥ ಗೊತ್ತಾ?

ನಿಮಗೆ ಬೀಳುವ ಕನಸುಗಳು ಕೂಡ ನಿಮ್ಮ ಭವಿಷ್ಯದ ಮುನ್ಸೂಚನೆ ನೀಡಲಿದೆ! ಯಾವ ರೀತಿಯ ಕನಸಿಗೆ ಯಾವ ಅರ್ಥ ಗೊತ್ತಾ?

ಕನಸಿನ ಶಾಸ್ತ್ರ ಅಥವಾ ಸ್ವಪ್ನ ಶಾಸ್ತ್ರ ಒಂದು ಪ್ರಾಚೀನ ಜ್ಯೋತಿಷ್ಯ ವಿದ್ಯೆಯಾಗಿದೆ ಮತ್ತು ಮಾನಸಿಕ ವಿಜ್ಞಾನದ ಒಂದು ಶಾಖೆಯಾಗಿದೆ. ಇದು ಸ್ವಪ್ನಗಳ ಅರ್ಥಗಳ ಅಧ್ಯಯನದ ಮೂಲಕ ಮಾನವ ಅನುಭವಗಳ ಅಂತರ್ದೃಷ್ಟಿಯನ್ನು ಅರ್ಥಗೊಳಿಸುತ್ತದೆ. ಇದು ಅನೇಕ ಧರ್ಮಗಳಲ್ಲಿ ಹಾಗೂ ಸಂಸ್ಕೃತಿಗಳಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದೆ. ಈ ಕನಸಿನ ಶಾಸ್ತ್ರ ಕೇವಲ ಒಂದು ವೈಜ್ಞಾನಿಕ ಅಧ್ಯಯನವಲ್ಲ, ಬದಲಾಗಿ, ಅದು ಬೌದ್ಧಿಕ ಮತ್ತು ಆಧ್ಯಾತ್ಮಿಕ ಸ್ವರೂಪವನ್ನು ಹೊಂದಿದೆ. ಸ್ವಪ್ನಗಳು ಹಾಗೂ ಅವುಗಳ ಅರ್ಥಗಳ ವಿಶ್ಲೇಷಣೆಯ ಮೂಲಕ ಜೀವನದ ಅಂಶಗಳ ಅಧ್ಯಯನವನ್ನು ನಡೆಸುವುದು ಅದರ ಮುಖ್ಯ ಉದ್ದೇಶ. ಇದು ಮಾನಸಿಕ ಅನುಭವಗಳ ವಿವರಣೆಗಳು, ಭವಿಷ್ಯದ ಘಟನೆಗಳ ಅನುಮಾನಗಳು ಹಾಗೂ ಮತ್ತಿತರ ಆಂತರಿಕ ಪ್ರಕ್ರಿಯೆಗಳ ಅಧ್ಯಯನದ ಮೂಲಕ ನಡೆಸಲ್ಪಡುತ್ತದೆ.

ಮಾನವನಿಗೆ ಸಿಕ್ಕಿರುವ ಒಂದು ಅದ್ಬುತ ಶಕ್ತಿ ಎಂದ್ರೆ ಕನಸುಕಾಣುವುದು ಎಂದು ಹೇಳಬಹುದು. ಏಕೆಂದ್ರೆ ತನ್ನ ಬದುಕಿನ ಬಗ್ಗೆ ಅವನು ಕೂತಲ್ಲಿಯೇ  ಎಲ್ಲವನ್ನೂ ಸೃಷ್ಟಿ ಮಾಡಿಕೊಳ್ಳುವ ರೀತಿಯ ಕನಸು ಕೊಡ ಈತ ಕಾಣಬಹುದು. ಈ ಕನಸುಗಳು ಮುಂಬರುವ ಸನ್ನಿವೇಶಗಳ ಎಚ್ಚರಿಕೆಯನ್ನು ಹೇಳುವುದು ಕೆಲವೊಮ್ಮೆ ಅದ್ಭುತವಾಗಿ ಕಾಣಿಸುತ್ತದೆ ಏಕೆಂದರೆ ಅವು ಆದರ್ಶಗಳ, ಭವಿಷ್ಯದ ಸಂಗತಿಗಳ ಗುರುತುಹಾಕುವುದು ಅಥವಾ ಅನುಭವಗಳ ಸಂಬಂಧಗಳನ್ನು ಪ್ರಕಟಗೊಳಿಸಲು ಸಾಮರ್ಥ್ಯ ಇರುತ್ತದೆ ಎಂದು ಹೇಳಲಾಗುವುದು. ಮಾನಸಿಕ ಶಾಸ್ತ್ರದಲ್ಲಿ ಸತ್ತವರು ಕನಸಿನಲ್ಲಿ ಬರುವುದು ಕೇವಲ ಮಾನಸಿಕ ಪ್ರಕ್ರಿಯೆಗಳ ಒಂದು ರೂಪ. ಇದು ಆತ್ಮಾತ್ಮೀಯ ಹಾಗೂ ಮಾನಸಿಕ ಅನುಭವಗಳ ಅಂತರ್ದೃಷ್ಟಿಯನ್ನು ಬೆಳಗುತ್ತದೆ. ಇದು ಅವರ ಪರಿಚಯವಾದರೂ ಸತ್ತವರು ಅಥವಾ ಆತ್ಮಗಳ ಸಂಬಂಧವಾಗಿ ಮಾತನಾಡುವ ಸಾಮಾನ್ಯ ವಿಶ್ಲೇಷಣೆಗಳು ಇರಬಹುದು. ಆದ್ರೆ ಇನ್ನೂ ಕೆಲವೆಡೆ ಸತ್ತವರು ಯಾರಾದ್ರೂ ಕನಸಿನಲ್ಲಿ ಕಾಣಿಸಿಕೊಂಡಾಗ ಅವರು ತಮ್ಮ ಬಳಿ ಏನನ್ನು ಹೇಳಲು ಬಯಸುತ್ತಿದ್ದಾರೆ ಎಂದು ಕೊಡ ಉಲ್ಲೇಖ ಮಾಡಲಾಗಿದೆ.   

ಜ್ಯೋತಿಷ್ಯದ ಪ್ರಕಾರ ನಿಮ್ಮ ಹಿರಿಯರು ಹಣ್ಣು ಅಥವಾ ತಿಂಡಿಗಳನ್ನು ಕೊಟ್ಟರೆ ಅದು ಶುಭ ಎಂದು ಪರಿಗಣನೆ ಮಾಡಲಾಗುವುದು. ಹಿರಿಯರು ನಿಮ್ಮ ಕನಸಿನಲ್ಲಿ ಅಳುವ ರೀತಿಯಲ್ಲಿ ಕಂಡಾಗ ನಿಮ್ಮ ಜೀವನದಲ್ಲಿ ಯಾವುದೋ ದೊಡ್ಡ ಕೆಡಕು ನಿಮ್ಮನ್ನು ಕಾಡುತ್ತದೆ ಎಂಬ ಸೂಚನೆ ಆಗಿರಬಹುದು. ನಿಮ್ಮ ಕನಸಿನಲ್ಲಿ ಕೆಂಪು ವಸ್ತ್ರ ಧರಿಸಿದ ವಧು ನೋಡಿದಾಗ ನಿಮ್ಮ ಮನೆಗೆ ಯಾವುದೋ ರೂಪದಲ್ಲಿ ಲಕ್ಷ್ಮಿ ಆಗಮಿಸುತ್ತಾಳೆ ಎಂದು ಸೂಚನೆ ಕೊಟ್ಟಿದೆ. ನಿಮ್ಮ ಕನಸಿನಲ್ಲಿ ಮಗು ಹಾಲು ಕುಡಿಯುತ್ತಿದ್ದಂತೆ ಕಂಡಾಗ ನಿಮ್ಮ ಕೋರಿಕೆಯಲ್ಲ ಆದಷ್ಟು ಬೇಗ ನೆರವೇರಲಿದೆ ಎಂದರ್ಥ ನೀಡಲಾಗುವುದು. ಇನ್ನೂ ನೀವು ಕನಸಿನ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಬೇಕೆಂದ್ರೇ ನಾವು ನಮ್ಮ ಲೇಖನದಲ್ಲಿ ಜೋಡಣೆ ಮಾಡಿರುವ ವಿಡಿಯೋ ಮೂಲಕ ಸಂಪೂರ್ಣವಾಗಿ ತಿಳಿದುಕೊಳ್ಳಿ.

( video credit : Kurukshetra )