ಮದುವೆ ಆದವರು ಹೆಚ್ಚು ಅಕ್ರಮ ಸಂಭಂದ ಹೊಂದಿರುತ್ತಾರೆ ಯಾಕೆ? ಇಲ್ಲಿದೆ ಕಾರಣಗಳು!

ಮದುವೆ ಆದವರು ಹೆಚ್ಚು ಅಕ್ರಮ ಸಂಭಂದ ಹೊಂದಿರುತ್ತಾರೆ ಯಾಕೆ? ಇಲ್ಲಿದೆ ಕಾರಣಗಳು!

ಮದುವೆ ಎಂಬ ಶಬ್ದವು ನಮ್ಮ ಹಿಂದು ಸನಾತನ     ಧರ್ಮದಲ್ಲಿ ಬಹಳ ಪವಿತ್ರತೆಯನ್ನು ಹೊಂದಿದೆ ಎಂದು ಹೇಳಬಹುದು. ಆದರೆ ಈಗ ಕಾಲ ಬದಲಾಗಿ ಹೋಗಿದೆ ಸೋಲುವುದು ಎಂಬ ಪದಕ್ಕೆ ಅರ್ಥವೇ ಇಲ್ಲದಂತೆ ಆಗಿದೆ. ಏಕೆಂದರೆ ಮದುವೆಯ ನಂತರವೂ ಇತರರ ಜೊತೆ ಆಸಕ್ತಿ ತೋರಿಸು ಸಂಬಂಧ ಬೆಳೆಸುವವರ ಸಂಖ್ಯೆ ಹೆಚ್ಚಾಗಿಯೇ ಕಂಡು ಬರುತ್ತಿದೆ ಎಂದು ಹೇಳಬಹುದು.  ಇನ್ನೂ ಮದುವೆಯ ನಂತರ    ಇತರರ ಜೊತೆ ಅನೈತಿಕವಾಗಿ ಸಂಬಂಧ ಬೆಳೆಸುವುದು     ನೈತಿಕವಾಗಿ ತಪ್ಪು ಎಂದು ಬದ್ಧರಿಸಿದ ಸಂಬಂಧಗಳಲ್ಲಿ ಎಲ್ಲರೂ ಒಪ್ಪುತ್ತಾರೆ. ಪ್ರಾಮಾಣಿಕತೆ, ನಿಷ್ಠೆ, ಮತ್ತು ಸಂವಹನವು ಗಟ್ಟಿಯಾದ ಸಂಬಂಧದ ಮೂಲ ಅಂಶಗಳಾಗಿವೆ. ಈ ಅಂಶಗಳನ್ನು ಲಂಘಿಸುವುದರಿಂದ ಪಾರಸ್ಪರಿಕ ನಂಬಿಕೆ ಕುಗ್ಗುತ್ತದೆ ಮತ್ತು ಸಂಬಂಧದಲ್ಲಿ ತೊಂದರೆ ಉಂಟಾಗುತ್ತದೆ.

ಮದುವೆಯ ನಂತರ ಇತರರ  ಮನಸೆಳೆಯುವುದು  ತಪ್ಪಾಗಿರುವ ಪ್ರಮುಖ ಕಾರಣಗಳು ಮತ್ತು ಅದರಿಂದ ಹೊರಬರುವ ವಿಧಾನಗಳು ಕೊಡ ಬರಬಹುದು ಆದರೆ ಅದೆಲ್ಲವನ್ನೂ ಬದಿಗಿಟ್ಟು ಸಂಬಂಧಗಳಿಗೆ ಬೆಲೆ ಕೊಟ್ಟಾಗ ಮಾತ್ರ ನಿಮ್ಮನ್ನು ನಂಬಿದವರ ಅಥವಾ ನಂಬಿ ಜೊತೆ ಬಂದವರ ಜೊತೆ ಸಂತೋಷದಿಂದ ಇರಲು ಸಾಧ್ಯವಾಗುವುದು. ಮದುವೆಯು ಆಪ್ತ ಸಂಬಂಧಕ್ಕೆ ನಿಷ್ಠೆಯ ಪ್ರತಿಜ್ಞೆಯನ್ನು ಒಳಗೊಂಡಿರುತ್ತದೆ. ಈ ನಿಷ್ಠೆಯು ನಿಮ್ಮ ಸಂಗಾತಿಗೆ ಪ್ರಾಮಾಣಿಕವಾಗಿರಬೇಕು. ಇತರರ ಜೊತೆಗಿನ ಮನಸೂಳಿಕೆಯಿಂದ ನಿಮ್ಮ ಸಂಗಾತಿಯ ನಂಬಿಕೆ ಕೆಡುತ್ತದೆ, ಇದು ಸಂಬಂಧವನ್ನು ದುರಸ್ಥಿತಿಗೆ ತರುವ ಸಾಧ್ಯತೆ ಇದೆ. ಇದು ಸಂಗಾತಿಗೆ ಭಾವನಾತ್ಮಕವಾಗಿ ತುಂಬಾ ನೋವು ಉಂಟುಮಾಡುತ್ತದೆ ಮತ್ತು ಅವರ ಆತ್ಮವಿಶ್ವಾಸಕ್ಕೆ ಹೊಡೆತ ನೀಡಬಹುದು. ಇಂತಹ ಘಟನೆಗಳು ಕುಟುಂಬದ ಸ್ಥಿರತೆಯನ್ನು ಹಾಳುಮಾಡಬಹುದು, ವಿಶೇಷವಾಗಿ ಮಕ್ಕಳ ಮೇಲೆ ದುಷ್ಪರಿಣಾಮ ಉಂಟುಮಾಡಬಹುದು.   

ಕೆಲವೊಮ್ಮೆ ದಾಂಪತ್ಯದಲ್ಲಿ ಸಣ್ಣ ಸಣ್ಣ ಬಿರುಕುಗಳು ಬಂದಾಗ  ಗಂಡಸರು  ತಮ್ಮ ಮಾಜಿ ಪ್ರೇಯಸಿಯ ನೆನಪಿನಲ್ಲಿ ಇದ್ದು ಬಿಡುತ್ತಾರೆ. ಮತ್ತೆ ಅವರ ಜೊತೆಗೆ ಸಂಬಂಧ ಮುಮದುವರೆಸುವ ಬಗ್ಗೆ ಯೋಚಿಸುತ್ತಾರೆ. ಲೈಂಗಿಕ ಬಯಕೆ ಅಥವಾ ಭಾವನಾತ್ಮಕ ಸಂಪರ್ಕಕ್ಕಾಗಿ ಪುರುಷರು ಈ ವಿವಾಹೇತರ ಸಂಬಂಧವನ್ನು ಮುಂದುವರಿಸಬಹುದು.ತಮ್ಮ ಪತ್ನಿಗೆ ಮೋಸ ಮಾಡುವ ಮುನ್ನ ವಿವಾಹಿತ ವ್ಯಕ್ತಿಯಾಗಿದ್ದರೆ, ಪರಿಣಾಮಗಳ ಬಗ್ಗೆ ಎಚ್ಚರಿಕೆಯಿಂದ ಯೋಚಿಸಬೇಕು. ಮೋಸವು ನಿಮ್ಮ ಮದುವೆ, ನಿಮ್ಮ ಮಕ್ಕಳು ಮತ್ತು ನಿಮ್ಮ ಗೌರವದ ಮೇಲೆ ವಿನಾಶಕಾರಿ ಪರಿಣಾಮವನ್ನು ಬೀರುತ್ತದೆ. ಇದು ಸಂಬಂಧಗಳು ಹಾಳಾಗಲು ಕಾರಣವಾಗಿ, ನಿಮ್ಮ ಹೆಂಡತಿ ಮತ್ತು ಮಕ್ಕಳು ನಿಮ್ಮ ಮೇಲೆ ಇಟ್ಟ ನಂಬಿಕೆಯನ್ನು ಮುರಿಯಬಹುದು

ಆದರೆ ಕೆಲವೊಮ್ಮೆ ಈ ರೀತಿ ತಪ್ಪು ಮಾಡಿ ಅದರಿಂದ ಎಚ್ಚೆತ್ತುಕೊಂಡು ಸಹ ನೀವು ಹೊರಗೆ ಬರಬಹುದು ಹೇಗೇಂದ್ರೇ ನೀವು ಒಳ್ಳೆಯ ಸಂಬಂಧಕ್ಕೆ ಬಯಸಿದರೆ, ನಿಷ್ಕಪಟವಾಗಿರಿ ಮತ್ತು ನಿಮ್ಮ ಸಂಗಾತಿಗೆ ಪ್ರಾಮಾಣಿಕವಾಗಿರಿ. ನಿಮ್ಮ ಭಾವನೆಗಳನ್ನು ಮತ್ತು ಕಷ್ಟಗಳನ್ನು ನಿಮ್ಮ ಸಂಗಾತಿಯೊಂದಿಗೆ ತೆರೆದಂತೆ ಚರ್ಚಿಸಿ. ಸಮಾನವಾದ ಸಂವಹನವು ಸುಧಾರಣೆಗೂ ಮತ್ತು ಸಂಬಂಧವನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಸಂಬಂಧದಲ್ಲಿ ತೊಂದರೆಗಳಿದ್ದರೆ, ಮದುವೆ ಸಲಹೆಗಾರರ ಸಹಾಯವನ್ನು ಪಡೆಯಿರಿ. ಅವರು ನಿಮಗೆ ಸರಿಯಾದ ಮಾರ್ಗದರ್ಶನ ನೀಡಬಹುದು. ನಿಮ್ಮ ಭಾವನೆಗಳನ್ನು ಮತ್ತು ಕ್ರಿಯೆಗಳನ್ನು ಪರಿಶೀಲಿಸಿ. ನಿಮ್ಮನ್ನು ಬದಲಾಗಿಸುವ ಕಠಿಣ ಪರಿಶ್ರಮಕ್ಕೆ ಸಿದ್ಧರಿರಬೇಕು. ನಿಮ್ಮ ಸಂಗಾತಿಯೊಂದಿಗೆ ಸಮಯ ಕಳೆಯುವ ಮೂಲಕ, ಹವ್ಯಾಸಗಳನ್ನು ಹಂಚಿಕೊಳ್ಳುವ ಮೂಲಕ ಮತ್ತು ಆಪ್ತತೆಯನ್ನು ಮರುಸ್ಥಾಪಿಸುವ ಮೂಲಕ ನಿಮ್ಮ ಸಂಬಂಧವನ್ನು ಪುನರುಜ್ಜೀವನಗೊಳಿಸಿ.  ( video credit : PLAY KANNADA (