ಆಸ್ಪತ್ರೆಗೆ ದಾಖಲಾದ ಮಾಳವಿಕಾ: ಇಷ್ಟು ಚಿಕ್ಕವಯಸ್ಸಿಗೆ ಬರಬಾರದಿತ್ತು ಈ ಖಾಯಿಲೆ ;ಯಾವದು ಅದು ನೋಡಿ
ನಟಿ ಹಾಗೂ ರಾಜಕಾರಣಿ ಮಾಳವಿಕಾ ಅವಿನಾಶ್ ಅವರು ಇದ್ದಕ್ಕಿದ್ದ ಹಾಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಯಲ್ಲಿ ಮಲಗಿಕೊಂಡು ಸೆಲ್ಫಿ ಅನ್ನು ತೆಗೆದುಕೊಂಡಿರುವ ಮಾಳವಿಕಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತಮಗೆ ಆದಂತೆ ಮತ್ಯಾರಿಗೂ ಆರೋಗ್ಯ ಸಮಸ್ಯೆ ಆಗಬಾರದು ಎಂದು ಬಯಸಿದ್ದಾರೆ. ಮೈಗ್ರೇನ್ ಬಂದರೆ, ತಲೆ ನೋವು ಎಂದು ನಿರ್ಲಕ್ಷಿಸಬೇಡಿ. ಆಗ ನೀವು ಕೂಡ ನನ್ನಂತೆ ಆಸ್ಪತ್ರೆಗೆ ದಾಖಲಾಗಬೇಕಾದೀತು ಎಂದು ಹೇಳಿದ್ದಾರೆ.
ಮಾಳವಿಕಾ ಅವರು ಹಲವು ವರ್ಷಗಳಿಂದ ಮೈಗ್ರೇನ್ ಸಮಸ್ಯೆಯಿಂದ ಬಳಲುತ್ತಿದ್ದಾರಂತೆ. ಇದರ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಕ್ಕೆ ತಮ್ಮ ಮುಖ ಶೇಪ್ ಕೂಡ ಬದಲಾಗಿದೆ ಎಂದು ಹೇಳಿದ್ದಾರೆ. ಇದನ್ನು ಯಾರೂ ಹಗುರವಾಗಿ ತೆಗೆದುಕೊಳ್ಳಬೇಡಿ. ಕೇವಲ ತಲೆನೋವು ಅಂದುಕೊಂಡು ತಾತ್ಸಾರ ಮಾಡಬೇಡಿ. ವಿವಿಧ ಪಾನಡೋಲ್ಗಳು, ನೆಪ್ರೊಸಿಮ್, ಸಾಂಪ್ರದಾಯಿಕ ಔಷಧ ಇತ್ಯಾದಿಗಳನ್ನು ಪಾಪಿಂಗ್ ಮಾಡುತ್ತಿರಿ. ಇದರಿಂದ ನನ್ನ ರೀತಿಯಲ್ಲೇ ನೀವು ಆಸ್ಪತ್ರೆಯಲ್ಲಿ ಮಲಗಬೇಕಾಗುತ್ತದೆ ಎಂದು ನೋವಿನಿಂದ ಹೇಳಿದ್ದಾರೆ.
ಇನ್ನು ಮಾಳವಿಕಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹಾಕಿರುವ ಫೋಟೋ ನೋಡಿದರೆ, ಇದು ಅವರೇನಾ ಎಂದು ಅನುಮಾನ ಬರುತ್ತದೆ. ಮೈಗ್ರೇನ್ ಎಂಬ ಸಣ್ಣ ತಲೆನೋವು ಮುಂದೊಂದು ದಿನ ಹೇಗೆಲ್ಲಾ ಪರಿಣಾಮ ಬೀರಬಹುದು ಎಂಬುದನ್ನು ಮಾಳವಿಕಾ ಅವರನ್ನು ನೋಡಿ ತಿಳಿಯಬೇಕು. ಎಲ್ಲರೂ ತಮಗೆ ಮೈಗ್ರೇನ್ ಇದ್ದಲ್ಲಿ ಕೊಂಚ ಹೆಚ್ಚು ಕಾಳಜಿಯನ್ನು ತೋರಿಸುವುದು ಬಳ ಮುಖ್ಯವಾಗುತ್ತದೆ.
ಈ ಬಗ್ಗೆ ಸ್ವತಃ ಮಾಳವಿಕಾ ಅವರೇ ಆಸ್ಪತ್ರೆಯಲ್ಲಿರುವಾಗ ತಮ್ಮ ಪರೀಸ್ಥಿತಿಯನ್ನು ಹೇಳಿಕೊಂಡಿದ್ದಾರೆ. ಅಭಿಮಾನಿಗಳು ಮಾಳವಿಕಾ ಅವರಿಗೆ ಆದಷ್ಟು ಬೇಗ ಹುಷಾರಗಲಿ ಎಂದು ಹಾರೈಸಿದ್ದಾರೆ.