ಜೈಲಿನಿಂದ ಹೊರ ಬಂದ್ರ ರವೀಂದ್ರ? ಇಬ್ಬರ ನಡುವಿನ ಸಂಬಂಧದ ಬಗ್ಗೆ ಮಹಾಲಕ್ಷ್ಮಿ ಹೇಳಿದ್ದೇನು ನೋಡಿ

ಕಳೆದ ಒಂದು ವರ್ಷದಿಂದಲೂ ವಿವಾಹದ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದ ನಿರ್ಮಾಪಕ "ರವೀಂದ್ರ" ಹಾಗೂ ನಿರೂಪಕಿ ಮತ್ತು ಮತ್ತು ನಟಿ ಎಂದು ಟಾಲಿವುಡ್ ನಲ್ಲಿ ಪ್ರಸಿದ್ದಿ ಪಡೆದಿರುವ ರವೀಂದ್ರ ಹಾಗೂ "ಮಹಾಲಕ್ಷ್ಮಿ" ಅವರ ಜೀವನದಲ್ಲಿ ನಡೆಯುತ್ತಿರುವ ಏರು ಪೇರಿನ ಬಗ್ಗೆ ನಾವು ಹೊಸದಾಗಿ ಹೇಳಬೇಕಿಲ್ಲ. ಇನ್ನೂ ರವೀಂದ್ರ ಹಾಗೂ ಮಹಾಲಕ್ಷ್ಮಿ ಅವರು ಒಂದು ಸಿನಿಮಾ ವಿಚಾರವಾಗಿ ಭೇಟಿ ಆದವರು. ಇನ್ನೂ ಆ ಸಿನಿಮಾದ ಕುರಿತಾಗಿ ಸ್ನೇಹಿತರಾದ ಇವರಿಬ್ಬರು ಸಮಯ ಕಳೆಯುತ್ತಾ ಹೆಚ್ಚಿನ ಕಲಾ ಒಟ್ಟಾಗಿ ಸಮಯ ಕಳೆಯಲು ಶುರು ಮಾಡುತ್ತಾರೆ. ಇನ್ನೂ ಆ ಸಮಯದಲ್ಲಿ ತಾವು ಇಬ್ಬರು ಕೂಡ ವಿಚ್ಛೇದನ ತೆಗೆದುಕೊಂಡು ದೂರಾಗಿ ಒಬ್ಬಂಟಿಯಾಗಿ ಇದ್ದೇವೆ ಎನ್ನುವ ವಿಚಾರ ಮರೆಸುವಷ್ಟು ಸ್ನೇಹಿತರಾಗುತ್ತಾರೆ.
ಇನ್ನೂ ಸಮಯ ಕಳೆದ ಹಾಗೆ ಅವರಿಬ್ಬರ ಸ್ನೇಹ ಹೆಚ್ಚಿನ ಸಲಿಗೆಗೆ ತಿರುಗಿ ತಾವಿಬ್ಬರೂ ಮದುವೆ ಆಗುವ ನಿರ್ಧಾರ ಮಾಡುತ್ತಾರೆ. ಇನ್ನೂ ಕಳೆದ ಒಂದು ವರ್ಷದ ಹಿಂದೆ ತಿರುಪತಿಯಲ್ಲಿ ಇವರಿಬ್ಬರೂ ದಾಂಪತ್ಯದ ಜೀವನಕ್ಕೇ ಕಾಲಿಟ್ಟರು. ಅಂದು ಶುರುವಾದ ಇವರಿಬ್ಬರ ಟ್ರೊಲ್ ಪ್ರಕರಣ ಇಂದಿಗೂ ನಿಂತಿಲ್ಲ. ಆದರೆ ಇವರಿಬ್ಬರೂ ಕೊಡ ಸಾಕಷ್ಟು ಬಾರಿ ತಮ್ಮಿಬ್ಬರ ಸಂಭಂದದ ಬಗ್ಗೆ ವಿವರಣೆ ಕೊಡಲು ಪ್ರಯತ್ನ ಮಾಡುತ್ತಾರೆ. ಆದರೆ ಪ್ರಪಂಚ ಒಪ್ಪಿಕೊಳ್ಳಲು ಸಿದ್ಧರಿಲ್ಲ. ಹಾಗಾಗಿ ತಮ್ಮ ಪಾಡಿಗೆ ತಾವು ಇರಲು ಪ್ರಾರಂಭ ಮಾಡುತ್ತಾರೆ. ಇನ್ನೂ ಇವರಿಬ್ಬರೂ ಪ್ರತಿ ತಿಂಗಳು ಕೂಡ ಇಬ್ಬರ ಒಟ್ಟಾಗಿನ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾ ಬರುತ್ತಿದ್ದರು.
ಈ ಮುಂಚೆ ರವೀಂದರ್ ಜೈಲಿನಲ್ಲಿರುವಾಗ ತನಗೂ ಮೋಸವಾಗಿದೆ ಎಂದು ಮಹಾಲಕ್ಷ್ಮಿ ತನ್ನ ಸ್ನೇಹಿತರಿಗೆ ಹೇಳಿದ್ದರು ಕಾಲಿವುಡ್ ಮಾಧ್ಯಮಗಳು ವರದಿ ಮಾಡಿತ್ತು. ನನ್ನ ಪತಿ ತನ್ನಿಂದ ಹಣಕಾಸಿನ ವಹಿವಾಟುಗಳನ್ನು ಮರೆಮಾಚಿದ್ದಾರೆ ಎಂದು ಮಹಾಲಕ್ಷ್ಮಿ ಹೇಳಿಕೊಂಡಿದ್ದರಂತೆ.
ಈಗ ರವೀಂದ್ರ ಅವರು ಸ್ನೇಹಿತನ ಖಾಸಗಿ ಪ್ರಾಜೆಕ್ಟ್ ಸಂಭಂದವಾಗಿ ಹಣ ಕಾಸಿನ ವಿಚಾರದಲ್ಲಿ ಮೋಸ ಮಾಡಿದ್ದಾರೆ ಎಂದು ಗಾಬ ಎನ್ನುವ ವ್ಯಕ್ತಿ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ರವೀಂದ್ರ ಅವರು ಜೈಲಿನಲ್ಲಿ ಇರಬೇಕಾಗಿತ್ತು. ಹಾಗೆಯೇ ಕಳೆದ ವಾರ ಬೇಲ್ ಸಿಕ್ಕಿರುವುದಾಗಿ ಗಾಳಿ ಸುದ್ದಿ ಹಬ್ಬಿತ್ತು ಆದರೆ ಆ ವಿಚಾರ ಖಾತರಿ ಆಗಿರಲಿಲ್ಲ. ಇದೀಗ ಇಷ್ಟು ದಿನ ಸುಮ್ಮನಿದ್ದ ಮಹಾಲಕ್ಷ್ಮಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಪತಿಯೊಂದಿಗೆ ಇರುವ ಫೋಟೋ ಹಂಚಿಕೊಂಡು ನನ್ನ ಖುಷಿಗೆ ನನ್ನ ಪತಿಯೇ ಕಾರಣ ಎಂದು ಕ್ಯಾಪ್ಶನ್ ನೀಡಿದ್ದಾರೆ. ಇನ್ನೂ ಈ ಫೋಟೋ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಜೈಲಿನಿಂದ ಬೆಲ್ ಮೂಲಕ ಹೊರಗೆ ಬಂದಿದ್ದಾರೆ ಎಂದು ಎಲ್ಲರೂ ತಮ್ಮ ಅಭಿಪ್ರಾಯ ಹೊರಹಾಕುತ್ತಾ ಇದ್ದಾರೆ.