ಜಗತ್ತಿನಲ್ಲಿ ಎಲ್ಲಾ ರೋಗಕ್ಕಿಂತ ಕಾಮದ ರೋಗ ಎಷ್ಟು ಅಪಾಯಕಾರಿ ಗೊತ್ತಾ..? ಇಲ್ನೋಡಿ ವಿಡಿಯೋ

ಜಗತ್ತಿನಲ್ಲಿ ಎಲ್ಲಾ ರೋಗಕ್ಕಿಂತ ಕಾಮದ ರೋಗ ಎಷ್ಟು ಅಪಾಯಕಾರಿ ಗೊತ್ತಾ..? ಇಲ್ನೋಡಿ ವಿಡಿಯೋ

ಚಾಣಕ್ಯನ ನೀತಿಗಳು ಬಹಳ ವರ್ಷಗಳಿಂದ ಮಾನವನ ಜೀವ ಹಾಗೂ ಜೀವನದ ಕುರಿತು ಹೆಚ್ಚಾಗಿಯೇ ಸಾರುತ ಬಂದಿವೆ. ನೀತಿ ತತ್ವಗಳ ಬಗ್ಗೆ ಸದಾ ಅವರ ಗ್ರಂಥಗಳು ಸಮಾಜಕ್ಕೆ ಒಳ್ಳೆ ಜೀವನ ಮಾಡಿ ಎಂದು ಹೇಳುತ್ತಲೆ ಬಂದಿವೆ. ಆದ್ರೆ ಅವುಗಳ ಮಾತ್ರ ಮನುಷ್ಯ ಆದವನು ಬಿಟ್ಟು ಬೇರೆ ರೀತಿಯಲ್ಲಿ ತನ್ನಿಷ್ಟದ ಜೀವನ ಮಾಡುತ್ತಾ ಬರುತ್ತಿದ್ದಾನೆ. ಈ ಲೇಖನದಲ್ಲಿ ಕೆಲವೊಂದಿಷ್ಟು ಆಚಾರ ವಿಚಾರಗಳ ಕುರಿತು , ಜೀವನದಲ್ಲಿ ಅರಿತು ನಡೆಯುವ ಅಂಶಗಳ ಬಗ್ಗೆ ತಿಳಿದುಕೊಳ್ಳೋಣ.

ಆದರ್ಶವಾಗುವ ಮೊದಲ ಮಾತು ಹೀಗಿದೆ ನೋಡಿ. ಈ ಮನುಷ್ಯನಾದವನು ತನ್ನ ಕಾರ್ಯಗಳಿಂದಲೆ ಹೆಚ್ಚಾಗಿ ಶ್ರೇಷ್ಠನಾಗುತ್ತಾನೆ ಹೊರತು, ಹುಟ್ಟಿನಿಂದಲ್ಲ..ಸಾಧಿಸುವ ಮುನ್ನ ಹಾಸ್ಯವಾಗಿ ನೋಡುತ್ತಾರೆ, ಸಾಧಿಸಿದ ಬಳಿಕ ವಿಶೇಷವಾಗಿ ನಿಮ್ಮನ್ನು ಕಾಣುತ್ತಾರೆ..ಪ್ರತಿ ಸ್ನೇಹದ ಹಿಂದೆ ಸ್ವಾರ್ಥ ಇದ್ದೇ ಇರುತ್ತದೆ, ಸ್ವಾರ್ಥ ರಹಿತ ಸ್ನೇಹ ಸಿಗುವುದಿಲ್ಲ, ಇದೊಂದು ಜೀವನದ ಅತಿ ದೊಡ್ಡ ಕಹಿ ಸತ್ಯ ಆಗಿದೆ. ಒಂದು ಕೆಲಸ ಹಿಡಿದ ಮೇಲೆ ಅದನ್ನು ಬೆನ್ನು ಹತ್ತಿ ಮುಗಿಸಬೇಕು, ಇಲ್ಲವಾದರೆ ನೀವು ನಿಮ್ಮ ಜೀವನದಲ್ಲಿ ವೈಫಲ್ಯ ಕಾಣುವಿರಿ..

ಜಗತ್ತಿನ ಅತ್ಯಂತ ದೊಡ್ಡ ಶಕ್ತಿಗಳು ಅಂದರೆ ಒಂದು ಯುವಶಕ್ತಿ, ಇನ್ನೊಂದು ಈ ಯುವತಿ ಸೌಂದರ್ಯದ ಶಕ್ತಿ ಎಂದು ಚಾಣಕ್ಯ ಹೇಳಿದ್ದಾರೆ. ಈ ಕಾಮಕ್ಕಿಂತ ವಿನಾಶಕಾರವಾದ ಮತ್ತೊಂದು ದೊಡ್ಡ ರೋಗವಿಲ್ಲ, ಇದಕ್ಕೆ ಅಡ್ಡದಾರಿ ಹಿಡಿದು ಅನೈತಿಕವಾಗಿ ಇದಕ್ಕೆ ಹೆಚ್ಚು ಆಸೆ ಪಟ್ಟರೆ, ತುಂಬಾ ಕೆಟ್ಟದಾಗಿ ಕಾಣಿಸಿಕೊಳ್ಳುತ್ತೀರಿ ಜೀವನದಲ್ಲಿ ಏರಿಕೆಯನ್ನು ಕಾಣದಂತೆ ಸದಾ ಅದರ ಹಿಂದೆ ಬಿದ್ದು ನಿಮ್ಮ ಏಳಿಗೆಯನ್ನ ಮರೆತುಬಿಡುತ್ತಿರಿ, ಇದು ತುಂಬಾನೇ ತಪ್ಪು ದಾರಿಯಾಗಿದೆ, ನೈತಿಕವಾಗಿ ಇದರ ಬೆನ್ನು ಹತ್ತಿದರೆ ಒಳ್ಳೆಯದು ಎಂದು ಚಾಣಕ್ಯ ಹೇಳಿದ್ದಾನೆ...  

ಬೇರೆಯವರ ತಪ್ಪುಗಳಿಂದ ಕಲಿತುಕೊಳ್ಳಿ, ಎಲ್ಲ ತಪ್ಪುಗಳನ್ನು ಮಾಡಲು ನಮಗೆ ಹೆಚ್ಚು ಆಯಸ್ಸು ಇರುವುದಿಲ್ಲ.. ಜೀವನದಲ್ಲಿ ನಿಮ್ಮ ಸಮೀಪ ಭಯ ಬರುತ್ತಿದೆ ಅಂದರೆ, ತಕ್ಷಣವೇ ಅದರ ಮೇಲೆ ಆಕ್ರಮಣ ಮಾಡಿ ಅದನ್ನು ಸಾಯಿಸಿ ಬಿಡಿ ಇಲ್ಲವಾದರೆ ನೀವೇ ಇರುವುದಿಲ್ಲ ಎಂದು ಹೇಳಲಾಗಿದೆ. ಅವಶ್ಯಕತೆಗಿಂತ ಹೆಚ್ಚಾಗಿ ಪ್ರಾಮಾಣಿಕತೆ ತೋರುವ ಅವಶ್ಯಕತೆ ಇಲ್ಲ..ಆತ್ಮ ವಿಶ್ವಾಸ ಒಂದಿದ್ದರೆ ಎಂತಹ ಪರಿಸ್ಥಿತಿಯಲ್ಲೂ ತಲೆಯೆತ್ತಿ ನಿಲ್ಲಬಹುದು..

ತುಂಬಾ ನಿಯತ್ತಾಗಿದ್ದರೆ ಒಳ್ಳೆಯದಲ್ಲ, ನಿಯತ್ತಾಗಿದ್ದರೆ ಅಂತಹವರನ್ನು ಹೆಚ್ಚಾಗಿ ಆಟ ಆಡಿಸುತ್ತೆ ಈ ಪ್ರಪಂಚ.ನೇರವಾಗಿ ಮಾತನಾಡುವವರಿಗೆ ಶತ್ರುಗಳು ಜಾಸ್ತಿ, ಹಾಗೆ ಸುಳ್ಳು ಹೇಳುವವರಿಗೆ ಮಿತ್ರರು ಜಾಸ್ತಿ, ನಿಸ್ವಾರ್ಥ ಮನಸ್ಸಿನವರಿಗೆ ನೋವು ಜಾಸ್ತಿ...ಹೂವಿನ ಪರಿಮಳ ಕೇವಲ ಗಾಳಿಯ ದಿಕ್ಕಿಗೆ ಮಾತ್ರ ಹರಡುತ್ತದೆ, ಆದರೆ ಮನುಷ್ಯನ ಒಳ್ಳೆಯತನ ಪ್ರತಿ ದಿಕ್ಕಿನಲ್ಲಿಯೂ ಕೂಡ ಕಂಡು ಬರುತ್ತದೆ. ಪ್ರತಿ ದಿಕ್ಕುಗಳಿಗೂ ಹರಡುವ ಶಕ್ತಿ ಒಳ್ಳೆಯತನ ಹೊಂದಿದೆ. ಸಂಪೂರ್ಣ ಮನಸ್ಸಿನಿಂದ ಪರಿಪೂರ್ಣ ಪ್ರಯತ್ನ ಮಾಡಿ, ಬೇಕಾಗಿರುವುದನ್ನ ಬೇಟೆಯಾಡಿ ಪಡೆದುಕೊಳ್ಳುವದನ್ನ ನಾವು ಸಿಂಹದಿಂದ ಕಲಿಯಬೇಕು... ಹೆಚ್ಚಿನ ಮಾಹಿತಿಗೆ ಈ ವಿಡಿಯೋ ನೋಡಿ ಇಷ್ಟ ಆದ್ರೆ ಶೇರ್ ಮಾಡಿ ಧನ್ಯವಾದ...

( video credit :Philosophy Guru )