ಲೀಲಾವತಿ ಅವರ ಮನೆಗೆ ದೌಡಾಯಿಸುತ್ತಿರುವ ಚಿತ್ರರಂಗದ ಗಣ್ಯರು..! ಅವರ ಆರೋಗ್ಯ ಸ್ಥಿತಿ ಗಂಭೀರ

ಲೀಲಾವತಿ ಅವರ ಮನೆಗೆ ದೌಡಾಯಿಸುತ್ತಿರುವ ಚಿತ್ರರಂಗದ ಗಣ್ಯರು..! ಅವರ ಆರೋಗ್ಯ ಸ್ಥಿತಿ ಗಂಭೀರ

ಚಂದನವನದ 70ರ ದಶಕದ ಖ್ಯಾತ ನಟಿ ಲೀಲಾವತಿ ಅಮ್ಮನವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಕನ್ನಡ ಚಿತ್ರರಂಗದಲ್ಲಿ ಅವರದೇ ಆದ ನಟನೆ ಮೂಲಕ ಅತಿ ಹೆಚ್ಚು ಪ್ರಖ್ಯಾತಿ ಪಡೆದವರ ಪಟ್ಟಿಯಲ್ಲಿ ಇವರು ಕೂಡ ಬರುತ್ತಾರೆ..ನಟಿ ಲೀಲಾವತಿ ಅವರು ಇದೀಗ ಅವರ ಮಗನಾದ ವಿನೋದ್ ರಾಜ್ ಅವರೊಟ್ಟಿಗೆ ಸಿಟಿಯ ಬಿಟ್ಟು ನೆಲಮಂಗಲದ ಒಂದು ಹಳ್ಳಿಯಲ್ಲಿ ಜೀವನ ಮಾಡುತ್ತಿದ್ದಾರೆ ಎನ್ನಲಾಗಿದೆ. ಹೌದು ನಟ ವಿನೋದ್ ರಾಜ್ ಹಾಗೂ ಲೀಲಾವತಿ ಅಮ್ಮನವರ ಹೃದಯ ಸದಾ ಕಷ್ಟ ಅಂದವರಿಗೆ ಮಿಡಿಯುವ ಜೀವಗಳು.

ಅವರ ಸುತ್ತಮುತ್ತಲಿನ ಅವರ ಊರಿನ ಜನರ ಕಷ್ಟ ಹಾಗೂ ನೋವುಗಳಿಗೆ ನಟಿ ಲೀಲಾವತಿ ಅಮ್ಮ ಸದಾ ಸ್ಪಂದಿಸುತ್ತಲೇ ಬಂದಿರುವಂತ ಒಳ್ಳೆಯ ಗುಣದವರು. ಜೊತೆಗೆ ಅವರ ಮಗನೊಟ್ಟಿಗೆ ನಿಂತುಕೊಂಡು ಜನರಿಗೆ ಸಹಾಯ ಮಾಡುತ್ತಾ , ಅವರ ಊರಿನ ಜನತೆಗೆ ಹೆಲ್ಪ್ ಆಗಲೆಂದು ಒಂದು ಆಸ್ಪತ್ರೆಯನ್ನು ಕೂಡ ಇತ್ತೀಚಿಗೆ ಕಟ್ಟಿಸಿದ್ದು ನೀವು ನೋಡಿದಿರಿ. ಲೀಲಾವತಿ ಅವರು ಕಷ್ಟದಲ್ಲಿ ಇರುವವರಿಗೆ ಸದಾ ನೆರವಾಗುತ್ತಲೆ ಬಂದಿರುವ ನಟಿ. ಜೊತೆಗೆ ಉತ್ತರ ಕರ್ನಾಟಕದಲ್ಲಿ ಹೆಚ್ಚು ಮಳೆ ಆಗಿ ಜನರು ಕಷ್ಟಕ್ಕೆ ಸಿಲುಕಿದ ವೇಳೆಯೂ ಕೂಡ ಲೀಲಾವತಿ ಮತ್ತು ವಿನೋದ್ ರಾಜ್ ಅವರು ಅವರ ಕೈಲಾದ ಸಹಾಯ ಮಾಡಿ ಎಲ್ಲರಿಗೂ ಮಾದರಿ ಆಗಿದ್ದಂತವರು. 

ಇದೀಗ ಲೀಲಾವತಿ ಅಮ್ಮನವರ ಆರೋಗ್ಯ ಹದಗಟ್ಟಿದೆ ಗೆಳೆಯರೇ..ದಿನದಿಂದ ದಿನಕ್ಕೆ ಅವರ ಆರೋಗ್ಯದಲ್ಲಿ ಏರು ಪೇರು ಕಾಣುತ್ತಿದೆ ಎನ್ನಲಾಗಿ ಸೋಶಿಯಲ್ ಮೀಡಿಯಾದಲ್ಲಿ ಕೆಲವು ವಿಡಿಯೋಗಳ ಮೂಲಕ ಕಂಡುಬಂದಿದೆ ಸ್ನೇಹಿತರೆ. ಹೌದು ಲೀಲಾವತಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ಈಗ ಮಾತನಾಡಲು ಆಗುತ್ತಿಲ್ಲವಂತೆ..ಅವರಿಗೆ ಎಲ್ಲಾ ಕೇಳಿಸುತ್ತಿದೆ, ಎಲ್ಲಾ ಅರ್ಥ ಮಾಡಿಕೊಳ್ಳುತ್ತಾರೆ, ಆದ್ರೆ ಮಾತನಾಡಲು ಆಗುತ್ತಿಲ್ಲ ಎಂದು ಸ್ವತಃ ಅವರ ಮಗನಾದ ವಿನೋದ್ ರಾಜ್ ಅವರು ಇತ್ತೀಚಿಗೆ ಲೀಲಾವತಿ ಅಮ್ಮನವರನ್ನು ನೋಡಲು ಬಂದಿದ್ದ ಅರ್ಜುನ್ ಸರ್ಜಾ ಅವರೊಟ್ಟಿಗೆ ಮಾತನಾಡಿದ್ದರು.

ಹೌದು ಲೀಲಾವತಿ ಅವರು ಬಹಳಷ್ಟು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿರುವ ವಿಷಯ ಎಲ್ಲರಿಗೂ ಗೊತ್ತು. ಆ ಕಾರಣಕ್ಕೆ ಅವರ ಸ್ನೇಹಿತರು, ಕನ್ನಡ ಚಿತ್ರರಂಗದ ಕೆಲವು ಗಣ್ಯರು, ಕೆಲವು ನಟ ನಟಿಯರು ಕೂಡ ಲೀಲಾವತಿ ಅಮ್ಮನವರನ್ನು ನೋಡಿಕೊಂಡು, ಮಾತನಾಡಿಸಿ ಆರೋಗ್ಯ ವಿಚಾರಿಸಿ ಇನ್ನಷ್ಟು ದಿನ ಅವರು ನಮ್ಮೊಟ್ಟಿಗೆ ಇರಲಿ ಎಂದು ಹರಸಿ ಬರುತ್ತಿದ್ದಾರೆ..ಅವರ ಆರೋಗ್ಯ ಸ್ಥಿತಿ ಈಗ ಹೇಗಿದೆ ಗೊತ್ತಾ..? ಇಲ್ಲಿದೆ ನೋಡಿ ವಿಡಿಯೋ ಸ್ನೇಹಿತರೆ. ಪೂರ್ತಿ ನೋಡಿ ಮತ್ತು ಅವರು ಇನ್ನಷ್ಟು ದಿನ ಚೆನ್ನಾಗಿ ಇರಲಿ ಎಂದು ಆ ದೇವರಲ್ಲಿ ನಾವು ನೀವು ಎಲ್ಲರೂ ಪ್ರಾರ್ಥಿಸೋಣ, ಧನ್ಯವಾದಗಳು. ( video credit : Express Newsin)