ಕುಂಭ ರಾಶಿಯ ಜನರಿಗೆ 2024ರಲ್ಲೀ ಅದೃಷ್ಟ ಬದಲಾಗಲಿದೆ ; ಈ ವರ್ಷ ಭರ್ಜರಿ ಲಾಭ

ಕುಂಭ ರಾಶಿಯ  ಜನರಿಗೆ  2024ರಲ್ಲೀ ಅದೃಷ್ಟ ಬದಲಾಗಲಿದೆ ; ಈ ವರ್ಷ ಭರ್ಜರಿ ಲಾಭ

ಕುಂಭ ರಾಶಿ ಭವಿಷ್ಯ 2024ರ ಕುಂಭ ರಾಶಿಯಲ್ಲಿ ಸಂಬಂಧ ಪಟ್ಟ ವ್ಯಕ್ತಿಗಳಿಗೆ ಮುಂದಿನ ವರ್ಷ ಹೆಚ್ಚಿನ ಮಹತ್ವವನ್ನ ಪಡೆದುಕೊಳ್ಳುವ ಸಾದ್ಯತೆ ಇದೇ. ಇನ್ನೂ ಹೆಚ್ಚಾಗಿ ಲಾಭವನ್ನು ಪಡೆಯುವ  ಭರವಸೆಯನ್ನು ಮುಂದಿನ ವರ್ಷ ಹೊಂದಿದೆ. ನಿಮ್ಮ ರಾಶಿಚಕ್ರದ ಅಧಿಪತಿ ಶನಿಯ ಪ್ರಭಾವವನ್ನು ಹೆಚ್ಚಿಸಿ ನಿಮಗೆ ಲಾಭವನ್ನು ನೀಡುತ್ತಾನೆ,ಇನ್ನೂ  ನಿಮ್ಮ ವಯಕ್ತಿಕ ಸಂಬಂಧಿತ ವಿವಿಧ ಅಂಶಗಳಲ್ಲಿ ನಿಮಗೆ ಅನುಕೂಲಕರ ಫಲಿತಾಂಶಗಳನ್ನು ನೀವು ನಿರೀಕ್ಷೆ ಮಾಡಬಹುದು.  ನಿಮ್ಮ ವೃತ್ತಿಪರ ಕ್ಷೇತ್ರದಲ್ಲಿ ಕೂಡ ನೀವಿರುವ ಸ್ಥಾನವನ್ನು ದೃಢ ಮಾಡಿಕೊಳ್ಳುವುದು ಅಲ್ಲದೆ ಅದರಿಂದ ಪ್ರಶಂಸೆಗೆ ಕೂಡ ಪಾತ್ರರಾಗುತ್ತಿರಾ ಮತ್ತು ನಿಮ್ಮ ಜೀವನದಲ್ಲಿ ಮಾಡುವ ಎಲ್ಲಾ ಕೆಲಸಗಳಿಗೂ ಕೊಡ ಶಿಸ್ತಿನ ಪ್ರಜ್ಞೆಯನ್ನು ಇಟ್ಟುಕೊಂಡರೆ ಯಶಸ್ಸು ಕಟ್ಟಿಟ್ಟಬುತ್ತಿ.

ಮೇ ತಿಂಗಳ ನಂತರ, ನಿಮ್ಮ ರಾಶಿಯ ಮೂರನೇ ಮನೆಯಲ್ಲಿ ಗುರುವಿನ ಆಗಮನ ಆಗುವುದರಿಂದ ಹೆಚ್ಚಿನ ಲಾಭಕ್ಕೆ ಹಾಗೂ ನಿಮ್ಮ ವೈವಾಹಿಕ ಜೀವನಕ್ಕೆ ನಿಮಗೆ ಬೇಕಾದ ರೀತಿಯಲ್ಲಿ  ಅನುಕೂಲಕರ ವಾತಾವರಣವನ್ನು ಸೃಷ್ಟಿ ಮಾಡುತ್ತದೆ. ನಿಮ್ಮ ವ್ಯಾಪಾರಗಳ ವಿಚಾರದಲ್ಲಿ ಅದೃಷ್ಟದೊಂದಿಗೆ ನಿಮ್ಮ ಅನ್ವೇಷಣೆಗಳಲ್ಲಿ ಕೊಡ ನೀವು ಯಶಸ್ಸನ್ನು ಪಡೆಯುವಿರಿ. ಮೇ ತಿಂಗಳಲ್ಲಿ, ನಿಮ್ಮ ರಾಶಿಯಲ್ಲಿ ಗುರು  ನಾಲ್ಕನೇ ಮನೆಗೆ ಪಯಣ ಬೆಳೆಸಿದಾಗ, ನಿಮ್ಮ ಸಾಮರಸ್ಯದ ಕುಟುಂಬ ಸಂಬಂಧಗಳನ್ನು ಮತ್ತಷ್ಟು ಒಗ್ಗಟ್ಟಾಗಿ ಬಲಿಷ್ಠ ಪಡೆದುಕೊಳ್ಳುವುದು. ವರ್ಷದ ಪ್ರಾರಂಭವು ಸೂರ್ಯ ಮತ್ತು ಮಂಗಳನ ಪ್ರಭಾವಗಳಿಂದ ಪ್ರಣಯ ಸಂಬಂಧಗಳಲ್ಲಿ ಸ್ವಲ್ಪ ಒತ್ತಡವನ್ನು ನೀವು ಮದ್ಯಮ ವರ್ಷದಲ್ಲಿ ಕಾಣುತ್ತಿರಾ.   

 ವರ್ಷದ ಕೊನೆಯ ಭಾಗದಲ್ಲಿ ಧನಾತ್ಮಕ ಕೊಂಚ ಕೈ ಕೊಡಲಿದೆ.  ಆದರೆ ನಿಮ್ಮ ಪ್ರಯತ್ನಗಳು ನಿರಂತರ ಆಗಿದ್ದರು ಕೂಡ ಲಾಭವನ್ನು ನೀವು ಪಡೆಯಬಹುದು.  ನಿಮ್ಮ ವೃತ್ತಿ ಜೀವನ ಕ್ರಮೇಣವಾಗಿ ಗಣನೀಯ ಯಶಸ್ಸನ್ನು ಪಡೆಯಲಿದೆ, ಶನಿಯ ಪ್ರಭಾವದಿಂದ ನಿಮ್ಮ ಉದ್ಯೋಗ ಮತ್ತು ವ್ಯಾಪಾರ ಪ್ರಯತ್ನಗಳಲ್ಲಿ ಕೂಡ ಲಾಭದ ಜೊತೆಗೆ ಪ್ರಗತಿಯನ್ನು ಪಡೆಯುತ್ತೀರಿ. ಇತ್ತಾ ವಿದ್ಯಾರ್ಥಿಗಳು ಆರಂಭದಲ್ಲಿ ಆಸಕ್ತಿ ಹೊಂದದೆ ಇದ್ದರೂ ಕೊಡ ಅಂತ್ಯದ ಸಮಯದಲ್ಲಿ ಅವ್ರ ಗಮನ ಹೆಚ್ಚಾಗಿ ಉತ್ತಮ ಫಲಿತಾಂಶವನ್ನು ಪಡೆಯುತ್ತೀರಿ . ನೀವು ಆರ್ಥಿಕವಾಗಿ, ಏರಿಳಿತಗಳನ್ನು ಕೂಡ ಕಾಣುತ್ತಿರ ಆದರೆ ಉಪಾಯದಿಂದ ಕರ್ಚು ವೆಚ್ಚವನ್ನು ನೋಡಿಕೊಂಡರೆ ನಿಮ್ಮ ನಷ್ಟದ ಸಂಖ್ಯೆ ಕೊಡ ಕಡಿಮೆ ಆಗಲಿದೆ.  ಹೀಗಾಗಿ, ವಿವೇಕಯುತ ವೆಚ್ಚ ನಿರ್ವಹಣೆಗೆ ಹೆಚ್ಚಾಗಿ ಗಮನ ಹರಿಸಿರಿ.ಅದ್ರಲ್ಲೂ ವರ್ಷದ ಅಂತ್ಯದಲ್ಲಿ ಕೌಟುಂಬಿಕ ಜೀವನವು ನಿಮಗೆ ಬೇಕಾದ ರೀತಿಯ ಅನುಕೂಲಕರವಾಗಿ ತೆರೆದುಕೊಳ್ಳಲಿದೆ, ಆದರೆ ವೈವಾಹಿಕ ಸಂಬಂಧಗಳು ನಡುವೆ ಏರಿಳಿತಗಳನ್ನು ನೀವು ಕಾಣುವುದು ಹೆಚ್ಚಾಗಿದೆ.

( video credit : Be Happy GOLD )