ಕುದುರೆ ಮುಖದ ಒಂದು ಜಾಗಕ್ಕೆ ಗೋಷ್ಟ್ ಟೌನ್ ಎನ್ನಲಾಗುವುದು! ಅಸಲಿ ಕಾರಣ ಏನು ಗೊತ್ತಾ?

ಕುದುರೆ ಮುಖದ ಒಂದು ಜಾಗಕ್ಕೆ ಗೋಷ್ಟ್ ಟೌನ್ ಎನ್ನಲಾಗುವುದು! ಅಸಲಿ ಕಾರಣ ಏನು ಗೊತ್ತಾ?

ಚಿಕ್ಕಮಗಳೂರಿನ ಪ್ರಾಮುಖ್ಯ ಆಕರ್ಷಿತ ಜಾಗ ಎಂದ್ರೆ ಅದು ಕುದುರೆ ಮುಖ ಎಂದೇ ಹೇಳಬಹುದು. ಇನ್ನೂ ಇಲ್ಲಿನ ಜಾಗಕ್ಕೆ ಬಂದರೆ ನೀವು ಪ್ರಕೃತಿಯ ಮಡಿಲಿನಲ್ಲಿ ಕಳೆದುಹಿವಷ್ಟು ಸೌಂದರ್ಯ ಆ ಜಾಗಕ್ಕೆ ಇದೆ ಎಂದು ಹೇಳಬಹುದು. ಇನ್ನೂ ಈ ಪರ್ವತ ಶ್ರೇಣಿಯಲ್ಲಿ ಒಂದು ಭಾಗ ಕುದುರೆ ಮುಖದ ಆಕಾರದಲ್ಲಿ ಇರುವ ಕಾರಣದಿಂದ ಇಲ್ಲೆಗೆ ಕುದುರೆ ಮುಖ ಎಂಬ ಹೆಸರು ಬಂದಿದೆ. ಇದು ಕಳಸ ಹಾಗೂ ಚಿಕ್ಕ ಮಂಗಳೂರಿನಿಂದ ಕೇವಲ  25ಕಿಲೋಮೀಟರ್ ಅಂತರದಲ್ಲಿ ಇದ್ದರೇ ಮಂಗಳೂರಿನಿಂದ 100ಕಿಲೋಮೀಟರ್ ಅಂತರದಲ್ಲಿ ಇದೆ. ಇಲ್ಲಿ ಪ್ರತಿ ವರ್ಷ 100ಮಿಲಿ ಮೀಟರ್ ಮಳೆಯಾಗಲಿದ್ದು ಇದರ ಫಲವತ್ತಾದ ಇದಕ್ಕೆ ಮುಖ್ಯ ಕಾರಣವೆಂದರೆ ತಪ್ಪಾಗಲಾರದು .

1987ರಲ್ಲಿ  ಕುದುರೆ ಮುಖದ ಸಂಭೃದ್ಧಿಯನ್ನು ನೋಡಿ ಮೈನಿಂಗ್ ಕೋರ್ ಬಗ್ಗೆ ವಿದೇಶಿಗರು ಚರ್ಚೆ ಮಾಡಲು ಶುರು ಮಾಡುತ್ತಾರೆ. 1969 ನಲ್ಲಿ ಆರಂಭವಾದ KIOL ಸಂಸ್ಥೆಯ ಸ್ಥಾಪನೆ ಮಾಡಿದ ಸಂಪತ್ ಐಯ್ಯಂಗಾರ್ ಅವರು ಕುದುರೆ ಮುಖದ ಉಕ್ಕಿನ ಸಂಶೋಧನೆ ಮಾಡಿದ ಹರಿಕಾರ ಎಂಬ ಹೆಸರನ್ನು ಕೊಡ ಪಡೆದುಕೊಂಡಿದ್ದಾರೆ. ಇವರು ತಯಾರಿ ಮಾಡಿದ ನಕ್ಷೆಯ ಪ್ರಕಾರ ಇಲ್ಲಿ ಉಕ್ಕು ಐರನ್ ಹಾಗೂ ಸಾಕಷ್ಟು ನಿಧಿಯನ್ನು ಕೊಡ ಪತ್ತೆ ಹಚ್ಚಿದರು. ಅದಾದ ಬಳಿಕ ಬ್ರಿಟಿಷರ ಜೊತೆಗೆ 1900ಕೈ ಜೋಡಿಸಿ ನಕ್ಷೆಯ ಸಹಾಯದಿಂದ ಸಾಕಷ್ಟು ವಿದೇಶಿ ಕಂಪನಿಯ ಸಹಾಯದಿಂದ ಪ್ರಕೃತಿಗೆ ಹಾನಿ ಮಾಡದಂತೆ ತೆರೆಯಲು ಆರಂಭ ಮಾಡುತ್ತಾರೆ.   

ಕೇವಲ 100ಮೀಟರ್ ಅಂತರದಲ್ಲಿ ಇವರಿಗೆ ಸಾಕಷ್ಟು ಒರ್ ಸಿಗುತ್ತಿದ್ದ ಕಾರಣ  ಇನ್ನಷ್ಟು ಆಳಕ್ಕೆ ಆಸೆ ಪಡುತ್ತಿರಲಿಲ್ಲ. ಇನ್ನೂ ಇದಕ್ಕೆ ಬೇಕಾದ ಮಾರ್ಗಗಳನ್ನು ಹಾಗೂ ಮುಶನ್ ಗಳನ್ನು ಸ್ಥಾಪನೆ ಮಾಡಿದ ಇವರು ಮಂಗಳೂರಿನ ಮಾರ್ಗವಾಗಿ ಇರಾನ್ ಹಾಗು ಸೌದಿ ದೇಶಗಳಿಗೆ ಇದನ್ನು ಸಾಗಿಸಿಕೊಳ್ಳುತ್ತಾ ಇದ್ದರೂ. 1970ನಲ್ಲಿ KIOCL ಅಧಿಕೃತವಾಗಿ ಸ್ಟೀಲ್ ಹಾಗೂ ಮೈನಿಂಗ್ ಮಿನಿಸ್ಟ್ರಿ ಅಡಿಯಲ್ಲಿ ಕೆಲಸ ಶುರು ಮಾಡಿತ್ತು. ಅವ್ರ ಈ ಕೆಲಸ ಕೇವಲ 2005ವರೆಗೂ ಮಾತ್ರ ನೆರವೇರಿತ್ತು. ಆದ್ರೆ ಇದರಿಂದ ಅಲ್ಲಿಯ ಸೌಂದರ್ಯ ನಿಸರ್ಗ ಹಾಗೂ ಜಲಚರ ಜೀವಚರಗಳಿಗೆ ಕುತ್ತು ತರಲಿದೆ ಎಂದು ಸಾಕಷ್ಟು NGO ಗಳು ವಿರುದ್ಧ ದ್ವನಿ ಎತ್ತಿತ್ತು. ಸಾಕಷ್ಟು ವಿರೋಧ ಆದ ಬಳಿಕ ಹೈ ಕೋರ್ಟ್ ತನ್ನ ಕೆಲಸವನ್ನು ನಿಲ್ಲಿಸುವುದಾಗಿ KIOCL ಗೆ ಆದೇಶ ಹೊರಡಿಸಿತು. ಈ ಕಾರಣಕ್ಕೆ ಅಲ್ಲಿಯ ಬಾಗವನ್ನು ಸಂಪೂರ್ಣ ಬಂದ್ ಮಾಡಲಿಯಾಗಿದ್ದು ಇದನ್ನು ನಂಬಿ ಕೆಲ್ಸ ಮಾಡುತ್ತಿದ್ದ ಲಕ್ಷ ಗಟ್ಟಲೆ ಜನರ ಉದ್ಯೋಗ ಕೊಡ ಹೋಗಿತ್ತು . ನಿಷ್ಕ್ರಿಯತೆ ಹೊಂದಿರುವ ಈ ಜಾಗವನ್ನು ಗೋಸ್ಟ್ ಟೌನ್ ಎಂದು ನಾಮಕರಣ ಮಾಡಲಾಗಿದೆ. ( video credit ; kannada tech for you )