ಮತ್ತೊಮ್ಮೆ ಕೋಡಿಶ್ರೀ ಬಿಚ್ಚಿಟ್ಟ ಸ್ಪೋಟಕ ಭವಿಷ್ಯ ಜಗತ್ತಿನ ಎರಡು ದೇಶಗಳು ಮುಳುಗಿ ಹೋಗುತ್ತದೆ ದೊಡ್ಡ ನಗರಗಳಿಗೆ ಆಪತ್ತು ?
ನಮ್ಮ ಹಿಂದೂ ಸನಾತನ ಧರ್ಮದಲ್ಲಿ ನಮ್ಮ ಸಂಸ್ಕೃತಿ ಎಲ್ಲದಕ್ಕೂ ಅದರದ್ದೇ ಆದ ಪ್ರಾಮುಖ್ಯತೆ ಇದೆ ಎಂದರೆ ತಪ್ಪಾಗಲಾರದು. ಅದ್ರಲ್ಲೂ ನಮ್ಮ ಕಾಲ ಎಷ್ಟೇ ಬದಲಾದರೂ ಕೂಡ ಈ ಶಾಸ್ತ್ರ ಹಾಗೂ ಭವಿಷ್ಯವಾಣಿಯನ್ನು ಕೇಳುವ ಪ್ರಕ್ರಿಯೆ ಇಂದಿಗೂ ಕೂಡ ಕುಗ್ಗಿಲ್ಲ. ಅದ್ರಲ್ಲೂ ತಾವು ಮಾಡುವ ಒಳ್ಳೆಯ ಕೆಲ್ಸಗಳಲ್ಲಿ ಸೂಕ್ತವಾದ ಸಮಯವನ್ನು ಗೊತ್ತು ಮಾಡಿಕೊಂಡು ಅದೇ ಸಮಯದಲ್ಲಿ ಅವರು ಅಂದುಕೊಂಡ ಕೆಲ್ಸಗಳಲ್ಲಿ ಭಾಗಿ ಆಗುವ ಪ್ರಕ್ರಿಯೆ ಇಂದಿಗೂ ಕೂಡ ಸಕ್ರಿಯೇ ಆಗಿದೆ. ಇನ್ನೂ ಭವಿಷ್ಯದ ಮಾತು ಎಂದ ಕೂಡಲೇ ನಮ್ಮ ಕರ್ನಾಟಕ ಮಂದಿಗೆ ನೆನಪಾಗುವ ಹೆಸರು ಎಂದ್ರೆ ಅದು ಕೋಡಿಮಠದ "ಶಿವಾನಂದ ಶಿವಯೋಗಿ ರಾಜೇಂದ್ರ" ಸ್ವಾಮೀಜಿಗಳು.
ಏಕೆಂದರೆ ಇವರು ಹೇಳುವ ಅದೆಷ್ಟು ಭವಿಷ್ಯವಾಣಿ ಇಲ್ಲಿ ನೈಜತೆಯ ರೂಪ ಪಡೆದುಕೊಂಡಿರುವುದು ನಮ್ಮಲ್ಲಿ ಅದೆಷ್ಟು ಉದಾಹರಣೆಗಳು ನಮ್ಮಲ್ಲಿ ಸಾಕಷ್ಟಿದೆ. ಈ ಹಿಂದೆ ಕೂಡ ನಮ್ಮ ಪ್ರಪಂಚಕ್ಕೆ ಒಂದು ಸಾಂಕ್ರಾಮಿಕ ರೋಗ ತಗುಲಿ ಅದೆಷ್ಟು ಸಾವು ನೋವು ಸಂಭವಿಸುವುದು ಎಂದು ತಿಳಿಸಿದ್ದರು. ಅವರು ಹೇಳಿದ ಹಾಗೆ ಕರೋನ ಕಾರಣದಿಂದ ಅದೆಷ್ಟೋ ಜನರ ಪ್ರಾಣ ಪಕ್ಷಿ ಹಾರಿಹೋಗಿ ಇಡೀ ಪ್ರಪಂಚವೇ ಸಂಕಷ್ಟಕ್ಕೆ ಸಿಲುಕಿತ್ತು . ಇದೀಗ ಕೊಡಿ ಮಠದ ಸ್ವಾಮೀಜಿ ಅವರು ಮತ್ತೆ ನಮ್ಮ ರಾಜ್ಯ ಹಾಗೂ ರಾಷ್ಟ್ರ ಗಳ ಸರ್ಕಾರದ ಮೇಲೆ ಹೊಸ ಭವಿಷ್ಯವನ್ನು ಕೂಡ ನುಡಿದಿದ್ದಾರೆ. ಇನ್ನೂ ಇವರು ಹೇಳಿರುವ ಪ್ರಕಾರ ರಾಜ್ಯ ಹಾಗೂ ರಾಷ್ಟ್ರಗಳ ಸರ್ಕಾರದ ನಡುವೆ ಗುದ್ದಾಟ ಆಗಿ ಒಬ್ಬ ಮಹಿಳೆಯ ಕಾರಣದಿಂದ ಇಡೀ ಸರ್ಕಾರವೇ ಸಂಕಷ್ಟಕ್ಕೆ ಸಿಲುಕುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಇತ್ತೀಚಿನ ಸುದ್ದಿಯಂತೆ ಸಿಕ್ಕಿಂ ರಾಜ್ಯದಲ್ಲಿ ಜಲ ಪ್ರವಾಹ ಉಂಟಾಗಿ ಅನೇಕ ಜನರು ಪ್ರಾಣ ಕಳೆದು ಕೊಂಡಿದ್ದಾರೆ ಮತ್ತು ಡೆಲ್ಲಿ ಯಲ್ಲಿ ಸಹ ಭೂಕಂಪ ಉಂಟಾಗಿದೆ
ಇದೀಗ ಇವರು ಹೇಳಿರುವ ಹಾಗೆ ರಾಜ್ಯ ಸರ್ಕಾರ ಚುನಾವಣೆಯಲ್ಲಿ ಮಹಿಳಾ ಮೀಸಲಾತಿ ಕೂಡ ಘೋಷಣೆ ಮಾಡಿದ್ದು ಇದು ಕೊಡಿ ಮಠದ ಸ್ವಾಮೀಜಿ ಹೇಳಿರುವ ಭವಿಷ್ಯಕ್ಕೆ ಪರಮಾವಧಿಯ ಎನ್ನುವ ಪ್ರಶ್ನೆ ಎಲ್ಲರಲ್ಲೂ ಕಾದಿದೆ. ಇತ್ತ ಮೊನ್ನೆ ಕೂಡ ತಮಿಳು ನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಅವರು ಜಾತಿ ಹಾಗೂ ಧರ್ಮದ ಬಗ್ಗೆ ಹಾಗೂ ಸನಾತನದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಈ ವಿಚಾರಕ್ಕೆ ಕೊಡಿ ಮಠದ ಸ್ವಾಮೀಜಿ ಕೂಡ ಎಲ್ಲಾ ಧರ್ಮದವರು ಒಂದೇ ಅವ್ರ ಧರ್ಮಕ್ಕೆ ತಕ್ಕಂತೆ ಅವರ ಒಳ ನೋವು ಇರುತ್ತದೆ ಹಾಗೆಂದು ನೀವು ಮತ್ತೊಬ್ಬರ ಧರ್ಮ ಹಾಗೂ ಜಾತಿಯನ್ನು ನಿಂದಿಸುವ ಅವಶ್ಯಕತೆ ಇಲ್ಲ ಎಂದಿದ್ದರು. ಇದಾದ ಬಳಿಕ ಈ ಯುಗಾದಿ ಹಬ್ಬದ ವರೆಗೂ ಮಾತ್ರ ನಮಗೆ ಉಳಿಗಾಲ ಅದಾದ ಬಳಿಕ ದೊಡ್ಡ ದೊಡ್ಡ ಸಂಕಷ್ಟಗಳನ್ನು ನಾವು ಎದುರಿಸಬೇಕಾಗುತ್ತದೆ. ನಮ್ಮ ರಾಜ್ಯದ ಮುಖ್ಯ ಭಾಗದ ಊರುಗಳು ತೊಂದರೆಗಳು ಹಾಗೂ ಅಪಾಯಕ್ಕೆ ಸಿಲುಕುತ್ತದೆ. ಶ್ರಾವಣ ಆದ ಬಳಿಕ ದೊಡ್ಡ ಪ್ರಮಾಣದ ಮಳೆ ಸಂಭವ ಆಗುವ ಸಾದ್ಯತೆ ಹೆಚ್ಚಿದೆ ಎಂದು ತಿಳಿಸಿದ್ದಾರೆ.