ಸಿದ್ದರಾಮಯ್ಯ ಭವಿಷ್ಯದ ಬಗ್ಗೆ ಕೋಡಿಮಠದ ಶ್ರೀಗಳು ಹೇಳಿದ್ದೇನು ; ಕೇಳಿ ಎಲ್ಲರೂ ಶಾಕ್ ?
ಈ ಹಿಂದೆ ಕೋಡಿ ಸ್ವಾಮೀಜಿಗಳು, " ರಾಜನ ಹಾದಿಗೆ ಭಂಗ ಬೀಳುತ್ತದೆ " ಎಂದು ಭವಿಷ್ಯ ನುಡಿದಿದ್ದರು. ಸದ್ಯ ಸಿಎಂ ಸಿದ್ದರಾಮಯ್ಯ ಅವರಿಗೆ ಮೂಡ ಹಗರಣದಲ್ಲಿ ಕೋರ್ಟ್‌ನಲ್ಲಿ ಹಿನ್ನಡೆಯಾಗಿದೆ. ಅವರ ವಿರುದ್ಧ ತನಿಖೆ ಆರಂಭವಾಗಲಿದೆ. ಈ ಮೂಲಕ 40 ವರ್ಷ ಯಾವುದೇ ಕಪ್ಪುಚುಕ್ಕೆ ಇರಲಿಲ್ಲ. ಸದ್ಯ ಮುಡಾ ಹಗರಣದ ಮೂಲಕ ಅವರ ರಾಜಕೀಯ ಹಾದಿಗೆ ಭಂಗ (ಅಡ್ಡಿ) ಆಗಿದೆ.
ಧಾರವಾಡ ನಗರದಲ್ಲಿ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಪ್ರಚಲಿತ ವಿದ್ಯಮಾನಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ." ತಿರುಪತಿಯಲ್ಲಿ ಕೃಷ್ಣ-ವೆಂಕಟೇಶ್ವರ ಇದ್ದ. ಈಗ ಸ್ಥಳ ಸ್ವಚ್ಛತೆ ಮಾಡುತ್ತಿದ್ದಾರೆ. ಸ್ಥಳ ಸ್ವಚ್ಛತೆ ಮಾಡುವುದು ಧರ್ಮಶಾಸ್ತ್ರ. ಆದರೆ, ತಿಂದವರ ಹೊಟ್ಟೆಗೆ ಏನು ಮಾಡುವವರು ಈಗ? ನಾಲ್ಕು ವರ್ಷ ಲಡ್ಡು ತಿಂದು ಬಿಟ್ಟಿದಾರಲ್ಲ? ಅದರ ಬಗ್ಗೆ ಸರ್ಕಾರವೇ ಹೇಳಬೇಕು " ಎಂದರು.
ವಿಷ ವಾಯು ಬೀಸಿತು, ಭೂಮಿಯಿಂದ ವಿಷ ಜಂತುಗಳು, ಕಾಡಿಂದ ಪ್ರಾಣಿಗಳು ಊರಿಗೆ ನುಗ್ಗಿತು, ಯುದ್ಧ ಭೀತಿ ಇದೆ, ದೊಡ್ಡ ದೊಡ್ಡ ನಗರಗಳಿಗೆ ಅಪಾಯ, ಆಕಾಶ ಮತ್ತು ಭೂಮಿಯಿಂದ , ಆರೋಗ್ಯದ ಮೇಲೆ ಭಾರಿ ಪ್ರಭಾವ ಬೀರುತ್ತದೆ. ಅನೈತಿಕತೆ ಹೆಚ್ಚಾಗುತ್ತದೆ'' ಎಂದು ಹೇಳಿದರು.
ರಾಜ್ಯದಲ್ಲಿ ಮಳೆ ಇನ್ನು ಮುಗಿದಿಲ್ಲ. ಇನ್ನಷ್ಟು ದಿನ ಮಳೆಯಾಗಲಿದೆ ಎಂದು ಸ್ವಾಮೀಜಿ ಹೇಳಿದ್ದಾರೆ. ಈ ವರ್ಷ ಉತ್ತಮ ಮಳೆಯಾಗುತ್ತೆ ಎಂದು ಹೇಳಿದ್ದೆ. ಅದೇ ರೀತಿ ಮಳೆಯಾಗಿದೆ ಎಂದು ತಮ್ಮ ಹಿಂದಿನ ಹೇಳಿಕೆಯನ್ನು ಉಲ್ಲೇಖಿಸಿದರು.
ಕೊನೆಯಲ್ಲಿ ಸಿದ್ದರಾಮಯ್ಯ ಗೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ
( video credit : News18Kannada )