ಕಟ್ಟಿಗೆ ಹಾಡುತ್ತಿದೆ, ಕಬ್ಬಿಣ ಓಡುತ್ತಿದೆ, ಗಾಳಿ ಮಾತನಾಡುತ್ತಿದೆ..! ನೂರು ವರ್ಷದ ಭವಿಷ್ಯ ನಿಜವಾಯಿತು ಎಂದ ಕೋಡಿಶ್ರೀ..!

ಕಟ್ಟಿಗೆ ಹಾಡುತ್ತಿದೆ, ಕಬ್ಬಿಣ ಓಡುತ್ತಿದೆ, ಗಾಳಿ ಮಾತನಾಡುತ್ತಿದೆ..! ನೂರು ವರ್ಷದ ಭವಿಷ್ಯ ನಿಜವಾಯಿತು ಎಂದ ಕೋಡಿಶ್ರೀ..!

ಕರ್ನಾಟಕ ರಾಜ್ಯದಲ್ಲಿ ಕೋಡಿಮಠದ ಗುರೂಜಿಗಳಾದ ಡಾ. ಶಿವಾನಂದ ಶಿವಯೋಗಿ ಸ್ವಾಮೀಜಿಗಳು ಇದೀಗ ಮತ್ತೆ ಸುದ್ದಿಗೆ ಬಂದಿದ್ದಾರೆ..ಇಂದು ಸೆಪ್ಟೆಂಬರ್ 14 ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಪಟ್ಟಣದ ಒಬ್ಬ ಭಕ್ತಾದಿಯ ಮನೆಗೆ ಶ್ರೀಗಳು ಆಗಮಿಸಿದ್ದರು. ಬಳಿಕ ಶ್ರೀಗಳು ಸುದ್ದಿಗಾರರೊಂದಿಗೆ ಮಾತನಾಡಿದ್ದು ರಾಜ್ಯದ ಕುರಿತು ಮಾತನಾಡಿದ್ದಾರೆ. ಸ್ವಾಮೀಜಿಗಳು ಕೆಲವೊಂದಿಷ್ಟು ಅಚ್ಚರಿ ವಿಷಯಗಳನ್ನು ಪ್ರಸ್ತಾಪ ಮಾಡಿ ಹೋಗಿದ್ದಾರೆ. ಅವುಗಳು ಏನೆಂದರೆ ಅಂದಿನ ಕಾಲಜ್ಞಾನದ ಪ್ರಕಾರ ಕಾಲಜ್ಞಾನ ಗುರುಗಳು ಹೇಳಿದ ಪ್ರಕಾರವೇ ಎಲ್ಲವೂ ಕೂಡ ಇದೀಗ ನಿಜ ಆಗಿದೆಯಂತೆ. ನೂರು ವರ್ಷ ಹಿಂದೆಯೇ ನುಡಿದ ಸತ್ಯಾಂಶದ ಭವಿಷ್ಯಗಳು ಇದೀಗ ನಿಜವಾಗಿವೆ ಎಂದು ಹೇಳಿದರು.

ಹೌದು ಕಟ್ಟಿಗೆ ಹಾಡುತ್ತಿದೆ, ಕಬ್ಬಿಣ ಓಡುತ್ತಿದೆ, ಜೊತೆಗೆ ಗಾಳಿ ಮಾತನಾಡುತ್ತಿದೆ ಎನ್ನುವ ಭವಿಷ್ಯ ನಿಜವಾಗಿದೆ ಎಂದರು ಶ್ರೀಗಳು. ಇದರ ಒಳ ಅರ್ಥ ತಿಳಿಸಿದ್ದು, ಕಟ್ಟಿಗೆ ಹಾಡುತ್ತಿದೆ ಎಂದರೆ ಕೊಳಲಿನ ಮೂಲಕ ಕಟ್ಟಿಗೆ ಸಂಗೀತಕ್ಕೆ ಮಾರ್ಪಾಡು ಆಗಿದೆ,,ನಂತರ ಕಬ್ಬಿಣ ಓಡುತ್ತಿದೆ ಎಂದರೆ ಇಂದಿನ ರೈಲುಗಳು ಎಂದರ್ಥ ಎಂದರು,,ಜೊತೆಗೆ ಗಾಳಿ ಮಾತನಾಡುತ್ತಿದೆ ಎಂದರೆ ಇಂದಿನ ಮೊಬೈಲ್ ಎಂದು ಹೇಳಿ ಗಮನ ಸೆಳೆದರು. ಜೊತೆಗೆ ಕೋಡಿಶ್ರೀ ಅವರು ಕಲ್ಲಿನ ಕೋಳಿ ಕೂಗುತಿದೆ ಎಂದಿದ್ದು, ಇದರರ್ಥ ಮೊಬೈಲ್ಗಾಗಿ ಮೊಬೈಲ್ ನಲ್ಲಿ ಬಳಸುವ ಸಿಮ್ ಗಳು ಕಲ್ಲಿನ ಖನಿಜ ಲೋಹಗಳಿಂದ ಆ ಸಿಮ್ ಗಳು ತಯಾರು ಆಗುತ್ತಿವೆ, ಅವುಗಳ ಮೂಲಕವೇ ನಾವೆಲ್ಲಲ್ಲರೂ ಮಾತನಾಡುತ್ತಿದ್ದೇವೆ ಅಲ್ಲವೇ ಎಂದರು. ಹಾಗಾಗಿ ಕಲ್ಲಿನ ಕೋಳಿ ಕೂಗುತಿದೆ ಎಂಬ ನುಡಿ ಬಗ್ಗೆ ಹೇಳಿ ಶ್ರೀಗಳು ಗಮನ ಸೆಳೆದರು. 

ಜೊತೆಗೆ ರೈತರ ಬಗ್ಗೆ ಮಾತನಾಡಿದ ಕೋಡಿ ಶ್ರೀಗಳು ಅಮಾವಾಸ್ಯೆ ಬಳಿಕ ಮಳೆ ಆಗುತ್ತದೆ, ಯಾವುದೇ ತೊಂದರೆ ಇಲ್ಲ ಎಂದು ಹೇಳಿದ್ದು. ಜೊತೆಗೆ ಕಾರ್ತಿಕ ಮತ್ತು ಸಂಕ್ರಾಂತಿ ಹೊತ್ತಿಗೆ ಕೆಲವು ಅವಗಡಗಳು ಕೂಡ ನಡೆಯಲಿವೆಯಂತೆ. ಮನುಷ್ಯ ಜಲ, ನೆಲ, ಮತ್ತು ಪ್ರಕೃತಿಗೆ ಹೆಚ್ಚು ತೊಂದರೆ ಮಾಡುತ್ತಿದ್ದಾನೆ. ಅವುಗಳನ್ನು ಸದ್ಬಳಕೆ ಮಾಡಿಕೊಳ್ಳುತ್ತಿಲ್ಲ, ಹೆಚ್ಚಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾನೆ. ತಪ್ಪು ಮಾಡುತ್ತಿದ್ದೇನೆ ಎಂದು ಗೊತ್ತಿದ್ದರೂ ಕೂಡ ಆತನು ಯಾವುದೇ ಹೆದರಿಕೆ ಇಲ್ಲದೆ ಮಾಡುತ್ತಿದ್ದಾನೆ, ಹಾಗಾಗಿ ಪ್ರಕೃತಿಯಿಂದ ವಿಕೋಪಗಳು ಸಂಕ್ರಾಂತಿ ಹೊತ್ತಿಗೆ ಬರಬಹುದೆಂದರು ಕೋಡಿಶ್ರೀಗಳು. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ,, ಹಾಗೇನೆ ಕಾಲಜ್ಞಾನ ಗುರುಗಳ ಪ್ರಕಾರ ಈಗ ಕಟ್ಟಿಗೆ ಹಾಡುತ್ತಿದೆ, ಕಬ್ಬಿಣ ಓಡುತ್ತಿದೆ, ಹಾಗೆ ಗಾಳಿ ಮಾತನಾಡುತ್ತಿದೆ ಎನ್ನುವ ಭವಿಷ್ಯ ನಿಜವಾಗಿದೆ ಹೌದು ಎಂದು ನಿಮಗೂ ಕೂಡ ಅನಿಸಿದರೆ ನಿಮ್ಮ ಅನಿಸಿಕೆಯ ಕಮೆಂಟ್ ಮಾಡಿ ತಿಳಿಸಿ, ಮತ್ತು ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು. ( video credit : kannada thare tv )