ಈ ವರ್ಷ ಎಚ್ಚರಿಕೆಯಿಂದಿರಿ..! ಸಂತರ ಕೊಲೆ, ಇಬ್ಬರೂ ಪ್ರಧಾನಿಗಳ ಸಾವಿನ ಭವಿಷ್ಯ ನುಡಿದ ಕೋಡಿಶ್ರಿ..!

ಈ ವರ್ಷ ಎಚ್ಚರಿಕೆಯಿಂದಿರಿ..!  ಸಂತರ ಕೊಲೆ, ಇಬ್ಬರೂ ಪ್ರಧಾನಿಗಳ ಸಾವಿನ ಭವಿಷ್ಯ ನುಡಿದ ಕೋಡಿಶ್ರಿ..!

ಡಾ. ಶಿವಾನಂದ ಶಿವಯೋಗಿ ಗುರೂಜಿಗಳು ಭವಿಷ್ಯ ಹೇಳುತ್ತಿರುವುದು ಇದೇ ಮೊದಲನೆಲ್ಲ.. ಹಾಸನದ ಕೋಡಿಮಠದ ಕೊಡಿಶ್ರೀ ಎಂದೇ ಖ್ಯಾತಿ ಪಡೆಯುವ ಇವರು ಸದಾ ಒಂದಿಲ್ಲೊಂದು ಭವಿಷ್ಯ ನುಡಿಯುತ್ತಾ ಹೆಚ್ಚು ಪ್ರಸಿದ್ಧಿಯನ್ನು ಗಳಿಸಿದ್ದಾರೆ. ಹೌದು ರಾಜ್ಯದಲ್ಲಿ ಹಾಗೂ ದೇಶದಲ್ಲಿ ಆಗುವ ಮಳೆ, ಬೆಳೆ, ರಾಜಕೀಯ ಕುರಿತಾಗಿಯೂ  ಹೇಳಿಕೆ ಮೂಲಕ ಸದ್ದು ಮಾಡಿದ ಗುರೂಜಿ ಇವರು. ಇವರು ರಾಜ್ಯದಲ್ಲಿ ಆಗುವ ಬದಲಾವಣೆಗಳನ್ನು ಹಾಗೆ ಸಿಎಂ, ಪಿಎಂ ಕುರಿತಾಗಿ ಹೆಚ್ಚು ಆದೇಶಗಳನ್ನು ಭವಿಷ್ಯದ ಮೂಲಕ ಹೇಳುತ್ತಲೆ ಬಂದಿದ್ದಾರೆ.

ರಾಜ್ಯ ರಾಜಕೀಯ ವಲಯದಲ್ಲಿ ಆಗುವ ಮುಂದಿನ ರಾಜಕಾರಣಿಗಳ ನಡುವಿನ ಬಿಕ್ಕಟ್ಟನ್ನು ಕೂಡ ಸದಾ ಮುಂದಿನ ದಿನಗಳಲ್ಲಿ ನಡೆಯುವ ಕೆಲ ಸಂದರ್ಭವನ್ನು ಮುಂಚಿತವಾಗಿಯೇ ಭವಿಷ್ಯ ನುಡಿಯುತ್ತ ಬಂದಿರೋದು ವಿಶೇಷ. ಅವುಗಳಲ್ಲಿ ಕೆಲವು ನಿಜ ಆಗಿವೆ ಕೂಡ. ಹೌದು ಈ ವರ್ಷವೂ ಕೂಡ ದೊಡ್ಡ ಬಿರುಗಾಳಿ ಬೀಸಲಿದೆಯಂತೆ. 2024ರಲ್ಲಿ ಎಲ್ಲರೂ ಅಂದುಕೊಂಡ ರೀತಿ ಹೆಚ್ಚು ಒಳ್ಳೆ ದಿನಗಳು ಬರುವುದಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ. ಈ ವರ್ಷ ಕೆಟ್ಟ ದಿನಗಳು ಬರಲಿವೆ ಎಂದಿದ್ದಾರೆ.

ಶುಕ್ರವಾರ ಗದಗಿನಲ್ಲಿ ಮಾತನಾಡಿದ ಕೊಡಿಶ್ರೀಗಳು ಒಬ್ಬ ಸಂತರ ಕೊ+ಲೆಯಾಗುತ್ತದೆ, ಇಬ್ಬರು ಪ್ರಧಾನಿಗಳ ಸಾವಾಗುತ್ತದೆ ಎಂಬ ಭಯಾನಕ ಭವಿಷ್ಯ ನುಡಿದಿದ್ದಾರೆ ಎಂದು ಕೇಳಿ ಬಂದಿದೆ. ಈ ವರ್ಷವೂ ಸಹ ಅಕಾಲಕ್ಕೆ ಮಳೆಯಾಗಿ ಲಕ್ಷಾಂತರ ಜನರು ಹೆಚ್ಚು ತೊಂದರೆಗೆ ಈಡಾಗುತ್ತಾರೆ, ರೋಗಗಳು ಆಗಮಿಸಲಿದ್ದು ನೂರಾರು ಜನರು ಸಾವನ್ನಪ್ಪಲಿದ್ದಾರೆ,    

ಹಾಗೆ ಭೂಕಂಪ ಪ್ರಕೃತಿ ವಿಕೋಪಕ್ಕೆ ಹಲವರು ತುತ್ತಾಗಲಿದ್ದಾರೆ, ಬಾಂಬ್ ಸಹ ಅಲ್ಲಲ್ಲಿ ಸಿಡಿಯಲಿದೆ, ಒಟ್ಟಾರೆಯಾಗಿ ಈ ವರ್ಷ ಸಹ ಭಯಾನಕ ದಿನಗಳ ಎದುರಿಸಬೇಕಾಗುತ್ತದೆ ಎಂದು ಹೇಳಿದ್ದು ಇಕ್ಕೆಲ್ಲಾ ಪರಿಹಾರ ದೈವ ನಂಬಬೇಕು, ದೈವದ ಮೊರೆ ಹೋಗೋದು ಬಿಟ್ಟರೆ ಬೇರೆ ಯಾವ ದಾರಿಯೂ ಇಲ್ಲ ಎಂದು ಹೇಳಿ ಸದಾ ದೇವರ ನೆನೆಯಿರಿ ಎಂದು ಎಲ್ಲರಿಗೂ ಎಚ್ಚರಿಕೆ ನೀಡಿ ಕೊಡಿಶ್ರೀಗಳು..

2024 ನೇ ವರ್ಷ ಮತೀಯ ಸಮಸ್ಯೆಯಿಂದ ಜನರು ಹೆಚ್ಚು ದುಃಖ ಅನುಭವಿಸುತ್ತಾರೆ. ಜಗತ್ತಿನಲ್ಲೆ ಪ್ರಸಿದ್ದಿ ಪಡೆದ ದೊಡ್ಡ ಸಂತರು ಕೊ+ಲೆಯಾಗುತ್ತಾರೆ. ಹಾಗೆ ಒಂದೆರಡು ಪ್ರಧಾನಿಗಳ ಸಾವಾಗುವ ಲಕ್ಷಣ ಕೂಡ ಇದೆ. ನಮ್ಮ ದೇಶದಲ್ಲಿ ಅಸ್ಥಿರತೆ ಹಾಗೂ ಯುದ್ಧದ ಭೀತಿ ಕಾಣಲಿದೆ, ಹಾಗೆ ಬಾಂಬ್ ಸ್ಫೋಟಗೊಳ್ಳುವ ಸಾಧ್ಯತೆ ಇದ್ದು ಇದರೊಟ್ಟಿಗೆ ಮತ್ತೊಮ್ಮೆ ಜಗತ್ತಿನ ಕೆಲವು ಕಡೆ ರೋಗ ಹರಡುವ ಸಾಧ್ಯತೆ ಇದೆ ಎಂದು ಭವಿಷ್ಯ ನುಡಿದರು ಎನ್ನಲಾಗಿದೆ. ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ಕೊಡಿಶ್ರೀ ಮಠದ ಶ್ರೀಗಳ ಈ ಭವಿಷ್ಯದ ಬಗ್ಗೆ ನೀವೇನು ಹೇಳುತ್ತೀರಿ ಕಮೆಂಟ್ ಮಾಡಿ ಧನ್ಯವಾದಗಳು...