ಈ ದೇವಿಯ ಮಹಿಮೆ ಎಂಥದ್ದು ಗೊತ್ತಾ..? ಎಂಥಾ ಕಷ್ಟ ಇದ್ರೂ ದೂರ ಆಗುತ್ತಂತೆ !!

ಈ ದೇವಿಯ ಮಹಿಮೆ ಎಂಥದ್ದು ಗೊತ್ತಾ..? ಎಂಥಾ ಕಷ್ಟ ಇದ್ರೂ ದೂರ ಆಗುತ್ತಂತೆ !!

ದೇವರು ಎಂದರೆ ಯಾರಿಗೆ ತಾನೇ ಭಕ್ತಿ ಇರುವುದಿಲ್ಲ ಹೇಳಿ, ದೇವರಿಗೆ ಕೈಯೆತ್ತಿ ಮುಗಿದು ತಮ್ಮ ಕಷ್ಟಗಳನ್ನು ಹೇಳಿಕೊಂಡರೆ ಎಂತಹ ದೇವರು ಆದರೂ ಕೂಡ ಮನುಷ್ಯರ ಕಷ್ಟಗಳನ್ನು ಪರಿಹಾರ ಮಾಡುತ್ತದೆ. ಹೆಣ್ಣು ದೇವರು ಶಕ್ತಿ ಹೆಚ್ಚು ಹೊಂದಿರುತ್ತವೆ ಎಂಬುದಾಗಿ ಕೆಲವು ಕಡೆ ನಾವು ಕೇಳಿದ್ದೇವೆ. ಹೌದು ಅಂತ ಒಂದು ದೇವಿಯ ಪವಾಡವನ್ನು, ಅಲ್ಲಿಯ ಶಕ್ತಿ ಬಗ್ಗೆ ಜೊತೆಗೆ ಅದು ಈಗ ಎಲ್ಲಿದೆ, ಅದರ ಕಥೆ ಏನು ಎಂಬುದಾಗಿ ವಿವರವಾಗಿ ಈ ಲೇಖನದಲ್ಲಿ ನಾವು ನಿಮಗೆ ತಿಳಿಸ ಹೊರಟಿದ್ದೇವೆ..ಹೌದು ಈ ದೇವಿಯ ಸ್ವರೂಪವೇ ಅಂತದ್ದು, ಈ ದೇವಿಯನ್ನು ನೀವು ದರ್ಶನ ಮಾಡಿದರೆ ನಿಮ್ಮ ಕಷ್ಟಗಳೆಲ್ಲ ಕಳೆದು ಹೋಗುತ್ತವೆ. ಒಂದೇ ಶಿಲೆಯಲ್ಲಿ ನಿರ್ಮಿತ ಆಗಿರುವ ಕೆತ್ತಲ್ಪಟ್ಟಿರುವ ಈ ವಿಗ್ರಹ ಹೆಚ್ಚು ವಿಶೇಷತೆಗಳನ್ನು ಆವರಿಸಿದೆ..ಈ ದೇವಿಯ ನಿರ್ಮಾಣ ಕ್ರಿಸ್ತಶಕ 635 ಆಗಿದ್ದು ಇದನ್ನು ನಿರ್ಮಿಸಿದವರು ಚಾಲುಕ್ಯ ರಾಜವಂಶದ ರಾಜ ಪುಲಕೇಶಿನ್ ಎನ್ನಲಾಗಿದೆ...

ಇದು ಹೊರಾಂಗಲ್ ನ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿದೆ. ಹಾಗೆ ಕಾಕತಿಯ ರಾಜವಂಶದಲ್ಲಿ ಇದು ಆಳ್ವಿಕೆಗೆ ಒಳಪಟ್ಟಿತ್ತು. ಈ ದೇವಿಯ ದೇವಸ್ಥಾನದಲ್ಲಿ ಒಟ್ಟು ಎಂಟು ತೋಳಗಳನ್ನು ದೇವಿ ಭದ್ರಕಾಳಿಯು ಹೊಂದಿದ್ದು, ಕಲ್ಲಿನ ವಿಗ್ರಹವಿದೆ. ಪ್ರತಿಯೊಂದು ಕೈಯಲ್ಲಿ ಕೂಡ ವಿಭಿನ್ನ ವಿಭಿನ್ನವಾದ ಆಯುಧಗಳು ಕೆತ್ತಲ್ಪಟ್ಟಿವೆ. ಈ ಭದ್ರಕಾಳಿ ದೇವಿಯ ಮುಖಕ್ಕೆ ಅರಿಶಿಣ ಹಚ್ಚಿದ್ದು, ಈ ತಾಯಿ ಕಣ್ಣು ತೆರೆದಿದ್ದು ಸ್ಪಷ್ಟವಾಗಿ ಗೋಚರಣೆ ಆಗುತ್ತದೆ. ಹಾಗೇನೆ ಈ ದೇವಸ್ಥಾನಕ್ಕೆ ಸುಮಾರು ಏಳು ಸಾವಿರ ವರ್ಷಗಳ ಅತಿ ದೊಡ್ಡ ಇತಿಹಾಸವೇ ಇದೆಯಂತೆ.  

ಹೊರಂಗಲ್ ಮತ್ತು ಹನುಮನಕೊಂಡ ನಡುವೆ ಈ ದೇವಸ್ಥಾನ ನೆಲೆಯುರಿದ್ದು, ಅತ್ಯಂತ ಹಳೆಯ ದೇವಾಲಯಗಳಲ್ಲಿ ಇದು ಕೂಡ ಒಂದು. ಜೊತೆಗೆ ಇಲ್ಲಿಗೆ ಸಾವಿರಾರು ಭಕ್ತಾದಿಗಳು ವರ್ಷವೂ ಬರುತ್ತಾರೆ. ಹಾಗೆ ದೇವಿಯ ದರ್ಶನ ಪಡೆದು ದೇವಿ ಆಶೀರ್ವಾದ ಪಡೆದುಕೊಂಡು ಹೋಗುತ್ತಾರೆ.. ಈ ಭದ್ರಕಾಳಿ ಅಮ್ಮನವರನ್ನು ಹೆಣ್ಣು ಮಕ್ಕಳ ಶಕ್ತಿಯ ಸಂಕೇತ ಎಂದು ಪರಿಗಣನೆ ಮಾಡಲಾಗಿದೆ. ಈ ದೇವಾಲಯವು ಭದ್ರಕಾಳಿ ಅಮ್ಮ ಸರೋವರದ ದಡದಲ್ಲಿದೆಯಂತೆ. ಸರೋವರ ಸುತ್ತಲೂ ಹಚ್ಚ ಹಸಿರು ಕೂಡಿದ್ದು ಅದರಿಂದ ಹೆಚ್ಚು ಕಂಗೊಳಿಸುತ್ತದೆ ಎಂದು ಹೇಳಬುದಾಗಿದೆ. ಹೌದು ಇದು ಕಾಕತೀಯಾ ದೊರೆಗಳ ಆಳ್ವಿಕೆಯಲ್ಲಿ ಇದ್ದಾಗ ಈ ದೇವತೆಯನ್ನು ಅವರು ದತ್ತು ಪಡೆದು ಭದ್ರಕಾಳಿ ದೇವಿಯನ್ನಾಗಿ ನಿರ್ಮಿಸಿ ತಮ್ಮ ಕುಲದೇವತೆ ಎಂದು ಪೂಜೆ ಮಾಡುತ್ತಾ ಪರಿಗಣಿಸುತ್ತಾ ಬಂದರಂತೆ.

ತದನಂತರ ಅಪರೂಪದ ಕೊಹಿನೂರ್ ವಜ್ರವನ್ನು ಈ ದೇವಿಯ ವಿಗ್ರಹದ ಎಡಗಣ್ಣಾಗಿ ಇರಿಸಿದರು. ಹೌದು ಈ ಆಕರ್ಷಕ ಕೊಹಿನೂರ್ ವಜ್ರವನ್ನು ಕೊಲ್ಲೂರು ಗಣಿಗಳಿಂದಲೆ ಗಣಿಗಾರಿಕೆ ಮಾಡಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ..ನಂತರದ ದಿನದಲ್ಲಿ ಖಿಲ್ಜಿಗಳು, ಹಾಗೂ ತುಘಲಕ್ ಅವರು ಜೊತೆಗೆ ಈ ಬಹಮನಿಗಳ ಆಳ್ವಿಕೆಯಲ್ಲಿ ಇದೆ ಪ್ರಸಿದ್ದ ದೇವಿಯ ದೇವಸ್ತಾನ ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಂಡಿದೆ. 

ನಂತರದಲ್ಲಿ ಸುಮಾರು ಕ್ರಿ.ಶ. 1310ರ ವೇಳೆಗೆ ಅತ್ತ ದೆಹಲಿಯ ಸುಲ್ತಾನ್ ಆಗಿದ್ದಂತ ಅಲಾವುದ್ದೀನ್ ಖಿಲ್ಜಿ ತನ್ನ ಸೇನಾಪತಿಯಾದ ಮಲಿಕ್ ಕಫೂರ್ ಸಹಾಯ ಪಡೆದು ಈ ಕೊಹಿನೂರ್ ವಜ್ರವನ್ನು ವಶಪಡಿಸಿಕೊಂಡ ಆಮೇಲೆ ಕೊಹಿನೂನ್ ವಜ್ರವು ಅತ್ತ ಬಾಬರ್, ಹಾಗೆ ಹುಮಾಯೂನ್, ಶೇರ್ ಷಾ ಸೂರಿಯಿಂದ ಅತ್ತ ಷಹಜಹಾನ್, ನಂತರ ಔರಂಗಜೇಬ್ ಹಾಗೆ ಅತ್ತ ಪಟಿಯಾಲಾದ ಮಹಾರಾಜ ಆಗಿದ್ದ ರಂಜಿತ್ ಸಿಂಗ್‌ಗೆ  ಒಂದು ಕೈಯಿಂದ ಮತ್ತೊಂದು ಕೈಗೆ ಹಾದುಹೋಗಿದೆ.
ಕ್ರಮೇಣವಾಗಿ ಇದನ್ನು ಬ್ರಿಟಿಷರು ಅವರಿಂದ ವಶಪಡಿಸಿಕೊಂಡಿದ್ದು, ನಂತರದಾಲ್ಲಿ ವಿಕ್ಟೋರಿಯಾ ರಾಣಿಗೆ ಇದನ್ನ ಉಡುಗೊರೆಯಾಗಿ ನೀಡಿದ್ದಾರೆ. ಈಗ ಹೇಳಬೇಕು ಅಂದ್ರೆ ಅಂದು ಭದ್ರಕಾಳಿ ದೇಗುಲದಲ್ಲಿ ಇದ್ದ ಈ ಕೊಹಿನೂರ್ ವಜ್ರವು ಈಗ ಲಂಡನ್‌ನ ಜ್ಯುವೆಲ್ ಹೌಸ್‌ ಎಂಬಲ್ಲಿ ಇದನ್ನ  ಪ್ರದರ್ಶನಕ್ಕೆ ಇಡಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಈ ದೇವಿಯ ಮಾಹಿತಿಯ ತಪ್ಪದೆ ಶೇರ್ ಮಾಡಿ..