ಶಬರಿಮಲೆ ಮಕರ ಜ್ಯೋತಿ ಸುಳ್ಳಾ ಅಥ್ವಾ ನಿಜಕ್ಕೂ ಸತ್ಯಾನ..? ಎಲ್ರೂ ತಿಳಿದುಕೊಳ್ಳುವ ಅಸಲಿ ಸತ್ಯ
ಸ್ವಾಮಿ ಶರಣಂ ಅಯ್ಯಪ್ಪ ಎನ್ನುವ ಕೂಗನ್ನು ನೀವು ಕೇಳಿದ್ದೀರಿ. ಹೌದು ಈ ಕೂಗು, ಈ ಒಂದು ಶ್ಲೋಕದ ಪದ ಒಂದು ಕ್ಷಣ ಬಾಯಲ್ಲಿ ಬಂತು ಅಂತ ಆದರೆ ಮೈಯಲ್ಲಿ ಒಂದು ತರಹದ ರೋಮಾಂಚನ ಆಗುತ್ತದೆ. ಭಕ್ತಿಯಲ್ಲಿ ಹೆಚ್ಚು ಹಿಮ್ಮಡಿ ಆಗುತ್ತೇವೆ. ಅದೊಂದು ಅತಿವವಾದ ವಿಶಿಷ್ಟವಾದ ಶಕ್ತಿ. ಶಬರಿಮಲೆ ಅಯ್ಯಪ್ಪ ದೇವಸ್ಥಾನ ಎಷ್ಟು ಪ್ರಸಿದ್ಧಿ ಪಡೆದಿದೆ ಎಂದು ನಾವು ನಿಮಗೆ ಹೇಳಬೇಕಿಲ್ಲ.. ಪ್ರತಿ ವರ್ಷದಿಂದ ವರ್ಷಕ್ಕೆ ಶಬರಿಮಲೆ ಅಯ್ಯಪ್ಪನ ಸನ್ನಿಧಿಗೆ ಬರುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. 2011 ರಲ್ಲಿ ಮತ್ತು 1999 ರಲ್ಲಿ ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಭಕ್ತಾದಿಗಳಲ್ಲಿ ಮಕರ ಜ್ಯೋತಿ ದರ್ಶನ ಪಡೆಯಲು ಬಂದಾಗ 2011 ರಲ್ಲಿ ನೂರ ಅರು ಜನ, 1999 ರಲ್ಲಿ 53 ಜನ ಸಾವನ್ನಪ್ಪಿದ್ದರು.
ಇದೇ ಕುರಿತಾಗಿ ಕೇರಳದ ಕೋರ್ಟ್ ದೇವಸ್ಥಾನದ ಆಡಳಿತ ಮಂಡಳಿಗೆ ಮತ್ತು ಅಲ್ಲಿಯ ಸಿಬ್ಬಂದಿಯ ವರ್ಗದವರಿಗೆ ಒಂದು ನೋಟೀಸ್ ಕಳಿಸಿದ್ದು, ಮಕರ ಜ್ಯೋತಿ ಬಗ್ಗೆ ಮತ್ತು ನೀವು ಕೈಗೊಳ್ಳುವ ಮಕರ ಜ್ಯೋತಿ ದರ್ಶನದ ಪದ್ಧತಿಯ ಆಡಳಿತದ ಬಗ್ಗೆ ಹೇಳುವಂತೆ ಕೇಳಿದ್ದರು. ಹೌದು ಇಲ್ಲಿ ಭಕ್ತಾದಿಗಳ ನಂಬಿಕೆ ತುಂಬಾ ಇದೆ. ದೇವರ ಮೇಲೆ ನಂಬಿಕೆ ಇದೆ. ಆ ನಂಬಿಕೆಗೆ ಪೆಟ್ಟು ಬೀಳದಂತೆ ಉತ್ತರ ನೀಡಿತ್ತು ಎನ್ನಲಾಗಿದೆ. ಹೌದು. ಅಸಲಿಗೆ ಇದೀಗ ಕೇಳಿ ಬಂದಿರುವ ಮಾಹಿತಿ ಪ್ರಕಾರ ಮಕರ ಜ್ಯೋತಿ ಇರುವುದು ಸತ್ಯನ ಅಥವಾ ಸುಳ್ಳ ಎನ್ನುವ ಪ್ರಶ್ನೆ. ಇದನ್ನ ಯಾರು ಸಹ ಪ್ರಶ್ನೆ ಮಾಡಿಲ್ಲ. ಬದಲಿಗೆ 2011 ರ ಅಷ್ಟು ಜನರ ಸಾವಿನ ನಂತರ ಕೆಲವರು ಕೇಳಿದ್ದರಂತೆ. ಇದನ್ನು ಸಂಕ್ಷಿಪ್ತವಾಗಿ ವಿವರವಾಗಿ ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ ಮುಂದೆ ಓದಿ.
ಹೌದು ಮಕರ ಜ್ಯೋತಿ ಅನ್ನುವುದು ಸತ್ಯ. ಇದಕ್ಕೆ ಪುರಾತನ ಒಂದು ಸತ್ಯ ಇದೆ. ಅಂದಿನಿಂದಲೂ ಕೂಡ ನಡೆದುಕೊಂಡು ಈ ನಂಬಿಕೆ ಬಂದಿದೆ. ಅಯ್ಯಪ್ಪ ಸ್ವಾಮಿ ಅಲ್ಲಿಯ ಪೊನ್ನಂಬೋಲ ಬೆಟ್ಟದಲ್ಲಿ ಇದ್ದ ಮಹಿಶಿಯನ್ನು ಅಯ್ಯಪ್ಪ ಸಾಯಿಸಿದ್ದರು. ಅಲ್ಲಿಯ ಬುಡಕಟ್ಟು ಜನಾಂಗದವರನ್ನು ರಕ್ಷಣೆ ಮಾಡಿದ್ದರು. ಅಂದಿನ ದಿನದಿಂದ ಆ ಬುಡಕಟ್ಟು ಜನಾಂಗ ಅಯ್ಯಪ್ಪ ಸ್ವಾಮಿಯ ಪೂಜೆ ಮಾಡುತ್ತ, ಅವರನ್ನೆ ಆರಾಧನೆ ಮಾಡುತ್ತ ಬಂದಿದ್ದರು..ಪ್ರತಿ ವರ್ಷ ಸಂಕ್ರಾಂತಿ ದಿನ ಶಬರಿಮಲೆಯಲ್ಲಿ ಮಕರ ಜ್ಯೋತಿ ಬೆಳಗುತ್ತದೆ. ಅದೇ ವೇಳೆ ಆ ಬೆಟ್ಟದಲ್ಲಿ ಇದ್ದ ಜನಾಂಗದವರು ಅವರಿದ್ದ ಜಾಗದಲ್ಲಿಯೇ ಒಂದು ಬೆಳಕನ್ನು ಹೊತ್ತಿಸುತ್ತಿದ್ದರು. ಅಲ್ಲಿ ಒಂದು ಮಂದಿರ ಕೂಡ ಇದೆ.
ಇವರ ಜನಾಂಗ ಕ್ರಮೇಣ ನಶಿಸುತಿದ್ದ ಹಾಗೆ ವಿದ್ಯುತ್ ಇಲಾಖೆಯವರು ಅದನ್ನು ಮುಂದುವರಿಸಿಕೊಂಡು ಬಂದಿದ್ದಾರೆ.. ಆ ಪ್ರದೇಶದಲ್ಲಿ ಯಾರಿಗೂ ಪ್ರವೇಶ ಇಲ್ಲ. ಅವರು ಬೆಳಗಿಸುತ್ತಿದ್ದ ಕೃತಕ ಜ್ಯೋತಿಯನ್ನ ಮಕರ ವಿಳಕ್ಕು ಎಂದು ಕರೆಯುತ್ತಾರೆ. ಹೌದು ಮಕರ ಜ್ಯೋತಿ ಬೇರೆ ಮಕರ ವಿಳಕ್ಕು ಬೇರೆ. ಆದ್ರೆ ಕೆಲವು ಜನರು ಇದೆ ಮಕರ ವಿಳಕ್ಕನ್ನೆ ಮಕರ ಜ್ಯೋತಿ ಅಂಥ ನಂಬಿದ್ದಾರೆ. ಇದೊಂದು ಕೃತಕ ಬೆಳಕು ಆಗಿದ್ದು, ಯಾವುದೇ ನೈಸರ್ಗಿಕ ಅಥವಾ ಪ್ರಾಕೃತಿಕ ಬೆಳಕು ಅಲ್ಲ, ಬದಲಿಗೆ ಆಕಾಶದಲ್ಲಿ ಒಂದು ನಕ್ಷತ್ರದ ರೀತಿ ಬೆಳಕು ಕಾಣುತ್ತದೆ ಅದುವೇ ನಿಜವಾದ ಮಕರ ಜ್ಯೋತಿ ಎಂದು ಕೇಳಿ ಬಂದಿದೆ. ನಕ್ಷತ್ರದಂತೆ ಕಾಣುವ ಜ್ಯೋತಿಯನ್ನೆ ಮಕರ ಜ್ಯೋತಿ ಎಂದು ಕರೆಯುತ್ತಾರೆ.
ಅಸಲಿಗೆ ಇಂದಿಗೂ ಕೂಡ ಜನರು ನಂಬಿರುವುದು ಏನು, ಆಗ ಮಕರ ಜ್ಯೋತಿ ದರ್ಶನದ ವೇಳೆ ಆಡಳಿತ ಮಂಡಳಿ ಮಾಡುತ್ತಿರುವ ತಪ್ಪು ಏನು? ಪ್ರತಿ ವರ್ಷ ಅಷ್ಟು ಜನರು ಅಲ್ಲಿಗೆ ಬರುತ್ತಾರೆ ಎಂದು ಗೊತ್ತಿದ್ದರೂ ಯಾಕೆ ಮೊದಲಿಗೆ ಮುಂಜಾಗ್ರತಾ ಕ್ರಮವನ್ನ ಅವರು ಕೈಗೊಳ್ಳುವುದಿಲ್ಲ, ಇದರ ಬಗ್ಗೆ ಇನ್ನಷ್ಟು ನಿಮಗೆ ಮಾಹಿತಿ ಬೇಕು ಅಂದ್ರೆ, ಈ ಲೇಖನ ಕೊನೆಯಲ್ಲಿರುವ ವಿಡಿಯೋವನ್ನು ನೋಡಿ, ಮತ್ತು ಶಬರಿಮಲೆ ಸ್ವಾಮಿ ಅಯ್ಯಪ್ಪ ಎಂದು ಭಕ್ತಿಯಿಂದ ಕಾಮೆಂಟ್ ಮಾಡಿ ಧನ್ಯವಾದಗಳು....
VIDEO CREDIT : THIRD EYE