ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ನೀತು ಅಲಿಯಾಸ್ ಮಂಜುನಾಥ್ ! ಅವರ ಬಗ್ಗೆ ನಿಮಗೆ ಎಷ್ಟು ಗೊತ್ತು?

ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ನೀತು ಅಲಿಯಾಸ್ ಮಂಜುನಾಥ್ ! ಅವರ ಬಗ್ಗೆ ನಿಮಗೆ ಎಷ್ಟು ಗೊತ್ತು?

ನಮ್ಮ ಸಮಾಜ ಈಗ ಮನುಷ್ಯ ಧರ್ಮಕ್ಕೆ ಬೆಲೆ ಇಲ್ಲದಂತ ಕಾಲದಲ್ಲಿ ನಾವಿಂದು ಜೀವಿಸುತ್ತಾ ಬರುತ್ತಿದ್ದೇವೆ. ಹೀಗಿರುವಾಗ ಮಂಗಳ ಮುಖಿಯರ ಪರಿಸ್ಥಿತಿ ಏನು ಎಂಬುದನ್ನು ನಾವು ಊಹಿಸಿಕೊಳ್ಳಲು ಸಾದ್ಯವಾಗುವುದಿಲ್ಲ. ಏಕೆಂದರೆ ಮಕ್ಕಳು ಎಂದ ಕೂಡಲೇ ಅವ್ರಿಗೆ ಒತ್ತಾಸೆಯಾಗಿ ಅವರ ನೆರವಿನಂತೆ ಅವರ ತಂದೆ ತಾಯಿ ಹಾಗೂ ಕುಟುಂಬ ಇರುತ್ತದೆ. ಆದ್ರೆ ಈ ಅರ್ಧ ನರಿಷ್ವರರು ಎಂದು ತಿಳಿದ ವೇಳೆ ಈ ರೀತಿ ಇದ್ದಾರೆ ನಮ್ಮ ಕುಟುಂಬಕ್ಕೆ ಕಳಂಕ ಎಂದು ಭಾವಿಸಿ ಮನೆಯಿಂದ ಹೊರ ಹಾಕಿದವರ ಸಂಖ್ಯೆ ಸಾಕಷ್ಟಿದೆ. ಇನ್ನೂ ಆಚೆ ಬಂದು ಕೂಡ ಈ ಮಂಗಳ ಮುಖಿಯರು ತಮ್ಮ ಕಾಲಿನ ಮೇಲೆ ನಿಂತು ತಮ್ಮ ದುಡಿಮೆಯಲ್ಲಿ ಜೀವನ ಸಾಗಿಸಲು ಕೊಡ ಯಾರೊಬ್ಬರು ಕೂಡ ಅವಕಾಶವನ್ನು ನೀಡುವುದಿಲ್ಲ. ಹಾಗಾಗಿ ನಾವು ಕಾಲ ಎಷ್ಟೇ ಬದಲಾದರೂ ಕೊಡ ಅವರನ್ನು ಬಿಕ್ಷಟನೆಯಲ್ಲಿ ನೋಡುತ್ತೇವೆ.

 

ಇದು ಒಂದು ಪ್ರಪಂಚ ಆದರೆ ಮತ್ತೊಂದು ಪ್ರಪಂಚದಲ್ಲಿ ಈ ಟ್ರಾನ್ಸ್ ಜಂಡರ್ ವರ್ಗದವರು ಕೂಡ ಸಾಕಷ್ಟು ಸಾಧನೆ ಮಾಡಿದ್ದಾರೆ. ಅವರ ಪೈಕಿ ಮಿಂಚುತ್ತಿರುವ ಹೆಸರು ಎಂದರೆ ಅದು "ಮಿಸ್ ಟ್ರಾನ್ಸ್ ಯೂನಿವರ್ಸ್" ಎಂದು ಪಟ್ಟವನ್ನು ಮುಡಿಗೇರಿಸಿಕೊಂಡಿರುವ "ನೀತು ವನಜಾಕ್ಷಿ". ಇನ್ನೂ ಈಗ ಇವರು "ಬಿಗ್ ಬಾಸ್ ಕನ್ನಡ" ಸೀಸನ್ 10ರ ಸ್ಪರ್ಧಿ ಇನ್ನೂ ಇವರ ಕಥೆ ಕೇಳಿದ್ರೆ ಎಂಥವರಿಗೂ ಕೊಡ ಕಣ್ಣಂಚಲ್ಲಿ ನೀರು ತುಂಬುತ್ತದೆ. ಆದರೆ ಎಲ್ಲರೂ ಕೊಡ ಉಬ್ಬೇರಿಸುವಂತೆ ಮಾಡಿದ್ದು ಅವರ ತಾಯಿ. ಇನ್ನೂ ನೀತು ಅವ್ರ ಈ ಬದಲಾವಣೆಯನ್ನು ಒಪ್ಪಿ ಅವರನ್ನು ಕೊಡ ಪ್ರೋತ್ಸಾಹ ನೀಡಿರುವುದು ಬಹಳ ಖುಷಿಯ ಸಂಗತಿ. ಇನ್ನೂ ನೀತು ಅವರು ಮೂಲತಃ ಗದಗ ಜಿಲ್ಲೆಯವರು. ಮದ್ಯಮ ವರ್ಗದಲ್ಲಿ ಮಂಜು ಆಗಿ ಬೆಳೆಯುತ್ತಿದ್ದ ಇವರು ಆ ನಂತರ ನೀತು ಆಗಿ ಬದಲಾಗಿದ್ದಾರೆ.

ಇನ್ನೂ ಮಂಜುನಾಥ್ ಎಂದು ಗುರುಸುಕೊಂಡಿದ್ದ ಇವರು ಎಲ್ಲರಂತೆ ಶಾಲೆಗೆ ತೆರಳುತ್ತಿರುತ್ತಾರೆ. ಇನ್ನೂ ಅವರು 7ನೆ ತರಗತಿಯಲ್ಲಿ ಇದ್ದಾಗ ಅವರಲ್ಲಿ ಆಗುವ ಬದಲಾವಣೆಗಳನ್ನು ಯಾರಲ್ಲೂ ಕೊಡ ಹೇಳಿಕೊಳ್ಳಲಾಗದೆ  ಓದ್ದಾಡಿದ್ದು ಉಂಟೆಂತೆ. ಏಕೆಂದ್ರೆ ಅವರ ಸುತ್ತ ಮುತ್ತಲಿನ ಪ್ರಪಂಚದ ಇವರಂತೆ ಅದವರನ್ನು ನಡೆಸಿಕೊಂದದ್ದನ್ನು ಇವರು ಬಹಳ ಹತ್ತಿರದ ದಿಂದ ನೋಡಿದ್ದ ಕಾರಣ ಯಾರೊಂದಿಗೂ ಕೊಡ ಹೇಳಿರಲಿಲ್ಲ. ಆದರೆ ಇವರ ವರ್ತನೆಯನ್ನು ಗಮನಿಸಿದ ಸ್ನೇಹಿತರೇ ಇವರನ್ನು ಅಡಿಕೊಂಡಿದ್ದರು. ಇನ್ನೂ ಮದ್ಯಮ ವರ್ಗದಲ್ಲಿ ಇದ್ದ ನೀತು ಅವರು ಮುಂದೆ ಬರಲು ವಿದ್ಯಾಭ್ಯಾಸ ಬಹಳ ಮುಖ್ಯ ಎಂದು ಅರಿತು ಈ ಸತ್ಯವನ್ನು ಹೋರ ಹಾಕಿದರೆ ನನ್ನ ವಿದ್ಯಾ ಭ್ಯಾಸಕ್ಕೆ ಕಳಂಕ ಉಂಟಾಗಬಹುದು ಎಂದು ಈ ಸತ್ಯವನ್ನು ಮುಚ್ಚಿಟ್ಟಿದ್ದಾರಂತೆ.  ಅದಾದ ಬಳಿಕ ಬೆಂಗಳೂರಿಗೆ ಬಂದ ಮಂಜು ಅವರು ತಮ್ಮ ಮಾವನ ಬಳಿ ಎಷ್ಟು ಕಷ್ಟ ಪಟ್ಟು ಈ ಸ್ಥಾನಕ್ಕೆ ಬಂದಿದ್ದಾರೆ ಎಂದು ಸಂಪೂರ್ಣ ಮಾಹಿತಿ ತಿಳಿಯಲು ವಿಡಿಯೋವನ್ನು ನೋಡಿ.