ವಿಜಯ್ ರಾಘವೆಂದ್ರ ಕಷ್ಟದ ಸಮಯದಲ್ಲಿ ಜೊತೆಗಿದ್ದ ಈ ಸ್ಪಂದನ ಯಾರು..? ಕಣ್ಣೀರು ತರಿಸುತ್ತೆ ವಿಡಿಯೋ

ವಿಜಯ್ ರಾಘವೆಂದ್ರ ಕಷ್ಟದ ಸಮಯದಲ್ಲಿ ಜೊತೆಗಿದ್ದ ಈ ಸ್ಪಂದನ ಯಾರು..? ಕಣ್ಣೀರು ತರಿಸುತ್ತೆ ವಿಡಿಯೋ

ವಿಜಯ ರಾಘವೇಂದ್ರ ಹೌದು ಕನ್ನಡದ ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಇದೀಗ ಇಲ್ಲವಾಗಿದ್ದಾರೆ. ಈ ವಿಷಯ ತುಂಬಾ ದುಃಖಕರವಾದ ವಿಷಯ.  ದೇವರು ಇಂತಹ ಅನ್ಯಾಯ ಮಾಡಬಾರದಿತ್ತು. ಇನ್ನು ತುಂಬಾ ಚಿಕ್ಕ ವಯಸ್ಸು ಸ್ಪಂದನ ಅವರದ್ದು. ಈಗ ಇಹಲೋಕ ತ್ಯಜಿಸಿದ್ದಾರೆ ಎಂದರೆ ನಿಜಕ್ಕೂ ನಂಬಲು ಈಗಲೂ ಸಹ ಅಸಾಧ್ಯವಾಗಿದೆ. ಪದೇಪದೇ ಯಾಕೆ ದೇವರು ಇಂತಹ ನಿರ್ಧಾರ ಕೈಗೊಳ್ಳುತ್ತಾನೆ ಎಂಬುದಾಗಿ ಒಂದು ಕ್ಷಣ ನಿಜಕ್ಕೂ ಆ ದೇವರನ್ನು ಬಯ್ಯುವಂತಹ ಶಪಿಸುವಂತಹ ಮಾತುಗಳು ಎಲ್ಲರ ಬಾಯಲ್ಲಿ ಬರುತ್ತವೆ. ಅಂತಹ ತಪ್ಪು ನಿರ್ಧಾರ ಮಾಡಿದನಾ ಅ ದೇವರು ಎಂಬ ಪ್ರಶ್ನೆ ಮೂಡುತ್ತದೆ. ಇನ್ನೊಂದು ಕಡೆ ಹಣೆ ಬರಹಕ್ಕೆ ಎಲ್ಲರೂ ತಲೆಬಾಗಲೇಬೇಕು ದೇವರ ಇಚ್ಛೆ ಹೇಗಿರುತ್ತದೆಯೋ ಏನೋ ಎಂಬುದು ಯಾರಿಗೂ ಊಹೆ ಮಾಡಲು ಕೂಡ ಆಗುವುದಿಲ್ಲ.

ಹೌದು ವಿಜಯ್ ರಾಘವೇಂದ್ರ ಅವರು ಚಿನ್ನಾರಿ ಮುತ್ತ ಎಂಬುದಾಗಿ ಪ್ರಸಿದ್ಧಿ ಪಡೆದವರು. ಡಾ ರಾಜ್ಕುಮಾರ್ ಅವರ ಪತ್ನಿ, ಪಾರ್ವತಮ್ಮ ರಾಜ್ ಕುಮಾರ್ ಅವರ ಸಹೋದರನ ಹಿರಿಯ ಮಗ ವಿಜಯ್ ರಾಘವೇಂದ್ರ. ಹೌದು ನಟ ವಿಜಯ್ ರಾಘವೆಂದ್ರ ಅವರ ಪತ್ನಿಯೇ ಈ ಸ್ಪಂದನ. ಇವರು ಇದೀಗ ಹೃದಯಘಾತದಿಂದ ಸಾವನ್ನಪ್ಪಿದ್ದಾರೆ. ನಟ ವಿಜಯ್ ರಾಘವೇಂದ್ರ ಹಾಗೂ ಸ್ಪಂದನ ಅವರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಸ್ಪಂದನ ಅವರನ್ನು 2003 ರಲ್ಲಿ ಮಲ್ಲೇಶ್ವರಂ ನ ಒಂದು ಕೆಫೆಯಲ್ಲಿ ಮೊದಲ ಬಾರಿ ವಿಜಯ್ ಅವರು ನೋಡುತ್ತಾರೆ. ನಂತರ ಇವರಿಬ್ಬರ ನಡುವೆ ಒಂದು ವಿಚಾರಕ್ಕೆ ಸಣ್ಣ ಗಲಾಟೆ ಕೂಡ ಆಗುತ್ತದಂತೆ. ಇದಾದ ಬಳಿಕ 2007ರಲ್ಲಿ ಮತ್ತೆ ಭೇಟಿಯಾದ ನಟ ವಿಜಯ್ ರಾಘವೇಂದ್ರ, ಸ್ಪಂದನ ಅವರಿಗೆ ರಾಘವೇಂದ್ರ ಅವರು ಪ್ರಪೋಸ್ ಮಾಡುತ್ತಾರೆ. ನಂತರ ಈ ಎರಡು ಕುಟುಂಬದವರು ಒಪ್ಪಿ ಮದುವೆ ಕಾರ್ಯಕ್ರಮ ಜರಗುತ್ತದೆ..ನಟ ವಿಜಯ್ ರಾಘವೇಂದ್ರ ಅವರು ಸಿನಿಮಾರಂಗದ ಕುಟುಂಬದಿಂದ ಬಂದವರು. ಸ್ಪಂದನ ಅವರು ಒಬ್ಬ ನಿವೃತ್ತ ನಿಷ್ಠಾವಂತ ಅಧಿಕಾರಿ ಪೊಲೀಸ್ ಅಧಿಕಾರಿಯಾಗಿದ್ದಂತಹ ಶಿವರಾಮ್ ಅವರ ಪುತ್ರಿ. 

ಶಿವರಾಂ ಅವರ ಜೊತೆಗೆ  ಚಿನ್ನೇ   ಗೌಡ್ರು ಸ್ನೇಹ ಹೊಂದಿದ್ದ ಕಾರಣಕ್ಕಾಗಿ ಇವರಿಬ್ಬರ ಮದುವೆಗೆ ಯಾವುದೇ ನಿರ್ಬಂಧ ಹೆಚ್ಚು ಕೇಳಿ ಬರಲಿಲ್ಲ. ಮನೆಯವರು ಒಪ್ಪಿ ಮದುವೆ ಮಾಡಿದರು. ವಿಜಯ್ ರಾಘವೇಂದ್ರ ಅವರು ಬಾಲ್ಯದಲ್ಲಿ ಸಾಕಷ್ಟು ಸಿನಿಮಾಗಳನ್ನು ಮಾಡಿದ್ದಾರೆ. ಚಿನ್ನಾರಿ ಮುತ್ತ ಹಾಗೂ ಇನ್ನೂ ಕೆಲ ಸಿನಿಮಾಗಳಿಗೆ ಬಣ್ಣ ಹಚ್ಚಿದವರು.. ಹಾಗೆ ರಾಷ್ಟ್ರ ಪ್ರಶಸ್ತಿ ಕೂಡ ಒಂದು ಸಿನಿಮಾ ಇವರಿಗೆ ತಂದುಕೊಟ್ಟಿದೆ. ಆದರೆ 2003 ರಲ್ಲಿ ಮೊದಲ ಬಾರಿ ತೆರೆಯ ಮೇಲೆ ಪರಿಪೂರ್ಣ ನಟರಾಗಿ 'ನಿನಗಾಗಿ' ಸಿನಿಮಾ ಮೂಲಕ ಬಂದರು.. ಆದರೆ ಕೆಲವೊಂದು ಸಿನಿಮಾಗಳು ಹಿಟ್ ಸಾಲಿಗೆ ಸೇರಿದರೆ ಇಲ್ಲಿಯವರೆಗೂ ಕೂಡ ವಿಜಯ ರಾಘವೇಂದ್ರ ಅವರಿಗೆ ಹೇಳಿಕೊಳ್ಳುವ ಹೆಸರು, ತಂದುಕೊಡುವ ಸಿನಿಮಾಗಳು ಬಂದಿಲ್ಲ..ಹೆಚ್ಚು ಹೆಸರು ಮಾಡಲು ಆಗಲಿಲ್ಲ.. ಕಷ್ಟದ ಸಮಯದಲ್ಲಿ ಸ್ಪಂದನ ಅವರು ವಿಜಯ್ ರಾಘವೇಂದ್ರ ಅವರ ಬೆನ್ನೆಲುಬಾಗಿ ನಿಂತಿದ್ದವರು. ಪ್ರತಿ ಹಂತದಲ್ಲೂ ನಟ ವಿಜಯ್ ರಾಘವೇಂದ್ರ ಅವರಿಗೆ ಸಪೋರ್ಟ್ ಮಾಡುತ್ತಲೇ ಸ್ಪಂದನ ಅವರು ಬಂದರು. ಹೆಚ್ಚು ಬಾರಿ ವೇದಿಕೆ ಮೇಲೆ ವಿಜಯ್ ರಾಘವೇಂದ್ರ ಅವರೇ ಅವರ ಹೆಂಡತಿ ಸ್ಪಂದನ ಅವರ ಬಗ್ಗೆ ಹೇಳಿಕೊಂಡಿದ್ದಾರೆ..

ಅಷ್ಟರ ಮಟ್ಟಿಗೆ ಗಟ್ಟಿಯಾಗಿ ಸ್ಪಂದನ ಅವರು ವಿಜಯ್ ರಾಘವೇಂದ್ರ ಅವರೊಟ್ಟಿಗೆ ನಿಂತಿದ್ದರು ಗೊತ್ತ..? ಈ ವಿಡಿಯೋ ನೋಡಿ ನಿಜಕ್ಕೂ ನಿಮ್ಮ ಕಣ್ಣಂಚಲಿ ನೀರು ಬರುತ್ತದೆ. ಇಂತಹ ದಂಪತಿಗಳನ್ನ ನೋಡಿರುವುದಕ್ಕೆ ಸಾಧ್ಯವಿಲ್ಲ ಎಂದೆನಿಸುವಷ್ಟು ಆದರ್ಶ ದಂಪತಿಗಳಂತೆ ಇವರು ಇದ್ದರು. ಈ ಮುದ್ದಾದ ಜೋಡಿ ಮೇಲೆ ಅದ್ಯಾರ ಕಣ್ಣು ಬಿತ್ತು ಗೊತ್ತಿಲ್ಲ. ಇದೀಗ ಸ್ಪಂದನ ಅವರು ಇಲ್ಲ ವಾಗಿದ್ದಾರೆ..ಈ ವಿಡಿಯೋ ನೋಡಿ ಮತ್ತು ಸ್ಪಂದನ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಕಾಮೆಂಟ್ ಮಾಡಿ, ಅ ದೇವರು ಇವರಿಗೆ ಈ ನೋವನ್ನು ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ಕೇಳಿಕೊಳ್ಳಿ... ( video credit ; third eye