ಬೀರು ಈ ದಿಕ್ಕಿನಲ್ಲಿ ಇಟ್ಟಾಗ ಹಣ ನೀರಿನಂತೆ ನಿಮ್ಮ ಪಾಲಾಗುವುದು! ಯಾವ ದಿಕ್ಕಿನಲ್ಲಿ ಇಟ್ಟಾಗ ಯಾವ ಲಾಭ ಗೊತ್ತಾ?

ಬೀರು ಈ ದಿಕ್ಕಿನಲ್ಲಿ ಇಟ್ಟಾಗ ಹಣ ನೀರಿನಂತೆ ನಿಮ್ಮ ಪಾಲಾಗುವುದು! ಯಾವ ದಿಕ್ಕಿನಲ್ಲಿ ಇಟ್ಟಾಗ ಯಾವ ಲಾಭ ಗೊತ್ತಾ?

ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಹಣವನ್ನು ಇಡುವ ಬೀರು ಅಥವಾ ಲಾಕರ್‌ನ್ನು ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಇಡುವುದನ್ನು ಶ್ರೇಷ್ಠವೆಂದು ಪರಿಗಣಿಸಲಾಗಿದೆ. ಈ ದಿಕ್ಕುಗಳು ಆಧ್ಯಾತ್ಮಿಕ ಶಕ್ತಿ ಮತ್ತು ಧನಯೋನಿಯಾಗಿವೆ ಎಂಬ ನಂಬಿಕೆಯಿದೆ. ಹೀಗೆ ಮಾಡಿದರೆ, ಲಾಭಗಳನ್ನು ನೀವು ಅನುಭವಿಸಬಹುದು.ದಿಕ್ಕುಗಳು ಕೊಡ ನಿಮ್ಮ ಮನೆಗೆ ಹಣದ ಹರಿವು ಸ್ಥಿರವಾಗಿರಲು ಸಹಾಯ ಮಾಡುತ್ತದೆ. ಕುಟುಂಬದ ಸದಸ್ಯರ ನಡುವೆ ಪ್ರೀತಿಯನ್ನು ಹೆಚ್ಚಿಸುತ್ತದೆ. ಧನ, ಆಸ್ತಿ, ಶ್ರೀಮಂತಿಕೆ ಇತ್ಯಾದಿಗಳಲ್ಲಿ ಬೆಳವಣಿಗೆ. ಈ ರೀತಿ ಪ್ರತಿ ದಿಕ್ಕಿನಲ್ಲಿ ಹಲವು ರೀತಿಯ ಶಕ್ತಿ ಇರುವುದರಿಂದ ದಿಕ್ಕು ಕೊಡ ಬಹಳ ಮುಖ್ಯ ಆಗಲಿದೆ. ಇನ್ನೂ ಯಾವ ದಿಕ್ಕು ಯಾವ ಲಾಭ ನೀಡಲಿದೆ ನೋಡಣ ಬನ್ನಿ.

ಜಗತ್ತಿನ ನಿಯಮದ ಪ್ರಕಾರ ಎಂಟು ದಿಕ್ಕುಗಳು ಇವೆ. ಈ ಎಂಟು ದಿಕ್ಕುಗಳಿಗೂ ಕೊಡ ಒಬ್ಬೊಬ್ಬ ಪಾಲಕನಿದ್ದು ಆತನ ಶಕ್ತಿ ನಿಮ್ಮ ಮನೆಯಲ್ಲಿ ಇಡುವ ವಸ್ತುಗಳ ಮೂಲಕ ಶಕ್ತಿಯನ್ನು ಹರಡಲಿದೆ ಎಂದು ನಮಬಲಾಗುವುದು. ಭಾರತೀಯ ಪುರಾಣ ಮತ್ತು ವಾಸ್ತು ಶಾಸ್ತ್ರದ ಪ್ರಕಾರ, ಎಂಟು ದಿಕ್ಕುಗಳಿಗೆ ವಿಶೇಷ ದಿಕ್ಕುಪಾಲಕರು (ಅಷ್ಟದಿಕ್ಕಪಾಲಕರು) ಇರುವರು. ಇವರು ಪ್ರತಿ ದಿಕ್ಕಿಗೆ ನಿರ್ದಿಷ್ಟ ದೇವತೆಗಳು ಅಥವಾ ಶಕ್ತಿಗಳನ್ನು ಪ್ರತಿನಿಧಿಸುತ್ತಾರೆ:

1.ಪೂರ್ವ(East): ಇಂದ್ರ , ಕುಬೇರನ ದಿಕ್ಕಿನಲ್ಲಿ ಜಾಗ ಇಲ್ಲವಾದಾಗ ಈ ದಿಕ್ಕು ಕೊಡ ಸೂಕ್ತ ಸೂರ್ಯ ಹುಟ್ಟುವ ರೀತಿಯಲ್ಲಿ ನಿಮ್ಮ ಮನೆಯಲ್ಲಿ ಹಣ ಕೊಡ ಉದ್ಭವ ಆಗಲಿದೆ ಎಂದು ಹೇಳಲಾಗುವುದು.

2.ಆಗ್ನೇಯ(Southeast): ಅಗ್ನಿ, ಈ ದಿಕ್ಕಿನಲ್ಲಿ ಯಾವುದೇ ಕಾರಣಕ್ಕೂ ಬೀರು ಇಡಬಾರದು ಏಕೆಂದರೆ ನಾವು ಬೀರು ತೆರೆದಾಗ ಅಗ್ನಿಯ ದೃಷ್ಟಿ ಬೀಳುವುದರಿಂದ ಹಣವು ಕೊಡ ಭಸ್ಮ ಆಗುವ ರೀತಿಯಲ್ಲಿ ಖರ್ಚು ಆಗಲಿದೆ.

3.ದಕ್ಷಿಣ (South):ಯಮ, ಈ ದಿಕ್ಕು ಅಶುಭ ಎಂದು ಹೆಸರುವಾಸಿಯಾಗಿರುವುದರಿಂದ ಈ ದಿಕ್ಕು ಕೊಡ ಅಷ್ಟು ಸೂಕ್ತವಲ್ಲ ಎಂದು ಹೇಳಬಹುದು.

4. ನೈಋತ್ಯ (Southwest): ನೈಋತಿ (ಯಕ್ಷ) ಈ ದಿಕ್ಕು ಸಂಕಷ್ಟಗಳನ್ನು ನಿವಾರಣೆ ಮಾಡುವ ದಿಕ್ಕು ಎಂದು ನಂಬಲಾಗುವುದು. ಹಾಗಾಗಿ ಹಣಕಾಸಿನ ಸಮಸ್ಯೆ ನಿವಾರಣೆ ಆಗಲು ಈ ದಿಕ್ಕನ್ನು ಕೊಡ ನೀವು ಆಯ್ಕೆ ಮಾಡಿಕೊಳ್ಳಬಹುದು. 

5. ಪಶ್ಚಿಮ (West): ವರುಣ, ವರುಣ ಎಂದ್ರೆ ನೀರು ಹಾಗಾಗಿ ಈ ದಿಕ್ಕಿನಲ್ಲಿ ನೀರು ರೀತಿಯಲ್ಲಿ ಹಣ ಖರ್ಚು ಆಗಲಿದೆ ಎಂದು ಹೇಳಲಾಗುತ್ತದೆ.     

6. ವಾಯವ್ಯ (Northwest): ವಾಯು , ಈ ದಿಕ್ಕು ಕೊಡ ಸೂಕ್ತ ಅಲ್ಲಾ ಗಾಳಿಯ ರೀತಿಯಲ್ಲಿ ಹಣ ಖರ್ಚು ಆಗಲಿದೆ ಎಂದು ಹೇಳಲಾಗುತ್ತದೆ.

7. ಉತ್ತರ (North): ಕುಬೇರ, ಈ ದಿಕ್ಕು ಬಹಳ ಸೂಕ್ತ ಈ ದಿಕ್ಕನ್ನು ಕಾಯುವ ಕುಬೇರನ ದಿಕ್ಕಿನಲ್ಲಿ ನೀವು ಈ ಬೀರು ಇಟ್ಟಾಗ ಕುಬೇರನ ನಿಮ್ಮ ಹಣವನ್ನು ಕಾಯುವ ಕಾರಣ ನಿಮ್ಮ ಹಣ ಹೆಚ್ಚುಮುಖ ಪಡೆಯಲಿದೆ. 

8. ಈಶಾನ್ಯ (Northeast): ಈಶಾನ (ಶಿವ) ಶಿವನ ಕೃಪೆ ಇರುವ ಕಾರಣ ನಿಮ್ಮ ಮನೆಯಲ್ಲಿ ಲಕ್ಷ್ಮಿ ನೆಲೆಸಲು ಇಚ್ಚಿವಂತೆ ಮಾಡುತ್ತಾರೆ ಎಂದು ಹೇಳಲಾಗುವುದು.

ಈ ದಿಕ್ಕುಪಾಲಕರು ಪುರಾಣಗಳಲ್ಲಿ ಆ ದಿಕ್ಕುಗಳನ್ನು ರಕ್ಷಿಸುವ ದೇವತೆಗಳು ಅಥವಾ ಶಕ್ತಿಗಳಾಗಿದ್ದಾರೆ ಎಂಬ ನಂಬಿಕೆ ಇದೆ.

( video credit : Shrinivasa Bhakti channel )