ಹಳ್ಳಿ ಮೇಷ್ಟ್ರು ಸಿನಿಮಾದ ಕಪ್ಪೆರಾಯ ಹೇಗಿದ್ದಾರೆ, ಏನ್ಮಾಡ್ತಾರೆ ಗೊತ್ತಾ? ಇವ್ರ ಮಾಡುವ ಕೆಲಸಕ್ಕೆ ನೀವು ಕೊಡ ಫಿದಾ ಆಗ್ತೀರಾ!

ಹಳ್ಳಿ ಮೇಷ್ಟ್ರು ಸಿನಿಮಾದ ಕಪ್ಪೆರಾಯ ಹೇಗಿದ್ದಾರೆ, ಏನ್ಮಾಡ್ತಾರೆ ಗೊತ್ತಾ? ಇವ್ರ ಮಾಡುವ ಕೆಲಸಕ್ಕೆ ನೀವು ಕೊಡ ಫಿದಾ ಆಗ್ತೀರಾ!

ನಟನೆ ಎಂದರೆ ಅಭಿನಯ ಕೌಶಲ್ಯವನ್ನು ತಮ್ಮ ಅಭಿನಯದ ಮೂಲಕ ಎಲ್ಲರಿಗೂ ಕೊಡ ಅರ್ಥೈಸುವುದು ಎಂದು ಹೇಳಬಹುದು. ಈ ಕೌಶಲ್ಯವನ್ನು ಬಳಸಿ, ನಟನೆಯಲ್ಲಿ ವ್ಯಕ್ತಿತ್ವ, ಭಾವನೆಗಳನ್ನು ಹರಿಯಿಸುವುದು. ಇದು ನಾಟಕ, ಚಲನಚಿತ್ರ, ಟೆಲಿವಿಷನ್ ಮೊದಲಾದ ಕಲಾವಿದರ ಕೆಲಸ ಎಂದೇ ಹೇಳಬಹುದು. ಈ ನಟರು ಪಾತ್ರಗಳನ್ನು ಜೀವಂತಗೊಳಿಸಬಲ್ಲರು ಮತ್ತು ಕಾಲಿಟ್ಟ ನಟನೆ ಕಲೆಗೆ ಮೆಚ್ಚಿಗೆಯನ್ನು ತರುತ್ತಾರೆ. ಈ ನಟನಾ ಶಕ್ತಿಗೆ ಈಗ ಸಾಕಷ್ಟು ಬೆಲೆ ಹಾಗೂ ಟ್ರೆಂಡ್ ಹುಟ್ಟು ಕೊಂಡಿದೆ ಎಂದು ಹೇಳಬಹುದು. ಆದರೆ ಈ ಕ್ಷೇತ್ರದಲ್ಲಿ ಹೇಗೆ ಉನ್ನತ ಸ್ಥಾನ ಪಡೆಯುವುದು ಕಷ್ಟವೋ ಹಾಗೆಯೇ ಸಿಕ್ಕಿರುವ ಸ್ಥಳವನ್ನು ಉಳಿಸಿಕೊಳ್ಳುವುದು ಕೊಡ ಅಷ್ಟೇ ಕಷ್ಟ ಎಂದು ಹೇಳಬಹುದು.

ಇನ್ನೂ ನಟನೆ ಯಾರಪ್ಪನ ಆಸ್ತಿ ಅಲ್ಲಾ ಎಂದು ಹೇಳಬಹುದು. ನಟನೆ ಒಂದು ಸಾಮಾಜಿಕ ಕ್ಷೇತ್ರದಲ್ಲಿರುತ್ತದೆ ಮತ್ತು ಅಲ್ಲಿನ ಸುಳ್ಳು, ಕಲ್ಪನಾಶಕ್ತಿ, ಅನುಭವಗಳ ಮೂಲಕ ವ್ಯಕ್ತಿಯ ಮೇಲೆ ಬಹಳಷ್ಟು ಬಹುಮಾನ ಮತ್ತು ಹೆಸರು ಹೊಂದುವ ಹೋರಾಟ ಇದೆ. ಇನ್ನೂ ಇದಕ್ಕೆ ತಕ್ಕ ಉದಾಹರಣೆ ಎಂದರೆ ನಮ್ಮ ರವಿ ಚಂದ್ರನ್ ಅವ್ರ ಚಿತ್ರದ ಹಳ್ಳಿ ಮೇಷ್ಟ್ರು ಸಿನಿಮಾ ಮೂಲಕ ಫೇಮಸ್ ಆದ ಕಪ್ಪೆ ರಾಯ ಪಾತ್ರದಾರಿ ಕೇವಲ ಆ ಪಾತ್ರಕ್ಕೆ ಎಂದು ಆಯ್ಕೆ ಮಾಡಿಲ್ಲ. ಆತನ ನಿಜ ಜೀವನದಲ್ಲಿ ಅಂಗವಿಕಲನಾಗಿದ್ದು ಆತ ಬಹಳ ಚಿಕ್ಕ ವಯಸ್ಸಿನಿಂದಲೂ ಕೊಡ ಸಾಕಷ್ಟು ಅವಮಾನಗಳನ್ನು ಅನುಭವಿಸುತ್ತಾ ಬಂದಿದ್ದರು. ಈತ ಮೂಲತಹ ಹಾವೇರಿ ಜಿಲ್ಲೆಯ ಚಿಕ್ಕ ಲಿಂಗ ಹಳ್ಳಿ ತಲೋಕಿನ ಬಡ ರೈತ ಕುಟುಂಬದವರು.  

ಇವರ ನಿಜವಾದ ಹೆಸರು ಪಕೀರಪ್ಪ. ಇವರು ಹಳ್ಳಿ ಮೇಷ್ಟ್ರು ಸಿನಿಮಾ ನಂತರ ಬೇರೆಯಾವ ಸಿನಿಮಾಗಳಲ್ಲಿ ಅಷ್ಟಾಗಿ ಅವಕಾಶ ಪಡೆಯಲು ಸಾಧ್ಯವಾಗಲಿಲ್ಲ. ಆದರೆ ಇವರು ಈಗ ಖಾಸಗಿ ಕಂಪನಿಗಳಲ್ಲಿ ಕೆಲ್ಸ ಮಾಡುತ್ತಾ ಮದುವೆ ಆಗಿ ಮಕ್ಕಳೊಂದಿಗೆ ಸುಖ ಸಂಸಾರ ನಡೆಸುತ್ತಾ ಇದ್ದಾರೆ. ಹಾಗೆಯೇ ಇವರ ಹೆಸರಿನಲ್ಲಿ ಅಂಗವಿಕಲರ ಎರಡು ಸಂಘ ಕಟ್ಟಿ ವರ್ಷಕ್ಕೆ ಎರಡು ಅಂಗವಿಕಲರ ಮದುವೆಯನ್ನು ಉಚಿತವಾಗಿ ಮಾಡುತ್ತಾ ಬಂದಿದ್ದಾರೆ. ಹೀಗೆ ಸಾಕಷ್ಟು ಅಂಗವಿಕಲರು ತಮ್ಮ ಬದುಕನ್ನು ಕಟ್ಟಿಕೊಂಡ ಬದುಕು ನಡೆಸಲು ಆಸರೆಯಾಗಿ ನಿಲ್ಲುತ್ತಾ ಇದ್ದಾರೆ. ಹೀಗೆ ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಮಾಡುತ್ತಾ ತಮ್ಮಂತೆ ಇರುವವರಿಗೂ ಕೊಡ ಅಸರೆ ಅಗಿರುವವರಿಗೆ ಇನ್ನಷ್ಟು ಅವಕಾಶ ಸಿಗಲಿ ಎಂದು ನಾವೆಲ್ಲರೂ ಆಶಿಸೋಣ.

( video credit : Third Eye )