ಕನ್ನಡ ಚಿತ್ರರಂಗಕ್ಕೆ ದೊಡ್ಡ ಆಘಾತ ;ಹಿರಿಯ ನಟಿ ಲೀಲಾವತಿ ಇನ್ನಿಲ್ಲ..

ಕನ್ನಡ ಚಿತ್ರರಂಗಕ್ಕೆ ದೊಡ್ಡ  ಆಘಾತ ;ಹಿರಿಯ ನಟಿ ಲೀಲಾವತಿ ಇನ್ನಿಲ್ಲ..


ಕನ್ನಡದ ಖ್ಯಾತ ನಟಿಯಾಗಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದ ನಟಿ ಲೀಲಾವತಿ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಹೌದು ಇದೀಗ ನಟಿ ಲೀಲಾವತಿ ಅವರು ವಿಧಿವಶರಾಗಿದ್ದಾರೆ..ಅವರ 86ನೇ ವಯಸ್ಸಿನಲ್ಲಿ ಎಲ್ಲರನ್ನು ಬಿಟ್ಟು ಹೋಗಿರುವುದು ತುಂಬಾನೇ ದುಃಖಕರವಾದ ವಿಷಯ. ನಟಿ ಲೀಲಾವತಿ ಅವರು ಇತ್ತೀಚೆಗೆ ಕೆಲವು ದಿನಗಳ ಹಿಂದೆ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು.. ಅದರ ಕುರಿತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೂಡ ಪಡೆಯುತ್ತಿದ್ದರು. ನಟಿ ಲೀಲಾವತಿ ಅವರನ್ನು ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಶುಕ್ರವಾರ ಸಾಯಂಕಾಲ ವೇಳೆ ವಿಧಿವಶರಾಗಿದ್ದಾರೆ ಎಂದು ತಿಳಿದುಬಂದಿದೆ..

ನೆಲಮಂಗಲದ ಸೋಲದೇವನಹಳ್ಳಿಯಲ್ಲಿ ಅವರ ಮನೆಯಲ್ಲಿಯೇ ಲೀಲಾವತಿ ಅವರನ್ನು ಪೋಷಣೆ ಮಾಡಿಕೊಂಡು ಅವರ ಮಗ ವಿನೋದ್ ರಾಜ್ ಅವರು ಬರುತ್ತಿದ್ದರು..ಆದರೆ ಇದೀಗ ಅವರ ಅಗಲಿಕೆಯಿಂದ ತುಂಬಾನೇ ನೊಂದಿದ್ದಾರೆ. ಇತ್ತೀಚಿಗೆ ಮಾಧ್ಯಮದಲ್ಲಿ ನಾನು ಒಬ್ಬಂಟಿ ಆಗಿಬಿಟ್ಟೆ ಎಂದು ಕಣ್ಣೀರು ಹಾಕಿದ್ದ ವಿನೋದ್ ಅವರು ಇದೀಗ ಅಮ್ಮನ ಅಗಲಿಕೆಯಿಂದ ತುಂಬಾನೇ ಕಣ್ಣೀರು ಹಾಕುತ್ತಿದ್ದಾರೆ ಎಂದು ಕಂಡು ಬಂದಿದೆ..ನಟಿ ಲೀಲಾವತಿ ಅವರು ಸುಮಾರು 50 ವರ್ಷಗಳಿಂದ ಸಿನೆಮಾ ವೃತ್ತಿಯಲ್ಲಿ ಇದ್ದು 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ ಎಲ್ಲರಿಂದಲೂ ಸೈ ಎನಿಸಿಕೊಂಡಿದ್ದಾರೆ.

ಕನ್ನಡ ತೆಲುಗು ತಮಿಳು ಸೇರಿದಂತೆ ಬಹುಭಾಷಾ ನಟಿ ಎಂದು ಕೂಡ ಗುರುತಿಸಿಕೊಂಡಿದ್ದರು..ಇವರಿಗೆ ಡಾಕ್ಟರ್ ರಾಜಕುಮಾರ್ ಪ್ರಶಸ್ತಿ, ಫಿಲ್ಮ್ ಫೇರ್ ಪ್ರಶಸ್ತಿ ಸಹ ನಟಿ ಲೀಲಾವತಿ ಅವರಿಗೆ ಲಭಿಸಿದೆ..ಜೊತೆಗೆ ಮನಮೆಚ್ಚಿದ ಮಡದಿ, ಭಕ್ತ ಕುಂಬಾರ, ಸಂತ ತುಕಾರಾಂ ಇನ್ನು ಸಾಕಷ್ಟು ಸಿನಿಮಾಗಳು ಲೀಲಾವತಿ ಅವರ ಜನಪ್ರಿಯತೆ ಹೆಚ್ಚಿಸಿದ್ದವು ಎಂದರೆ ತಪ್ಪಾಗಲಾರದು..ನಟಿ ಲೀಲಾವತಿ ಅವರು ದಕ್ಷಿಣ ಕನ್ನಡದ ಬೆಳ್ತಂಗಡಿ ಮೂಲದವರು.. ಇವರ ಮೂಲ ಹೆಸರು ಲೀಲಾ ಕಿರಣ್ ಎಂದು. ಇದೀಗ ಅವರ 86ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ. ನೀವು ಕೂಡ ಅವರ ಅಗಲಿಕೆ ನೋವಿಗೆ ಕಣ್ಣೀರು ಭರಿಸಿದರೆ ತಪ್ಪದೆ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕಮೆಂಟ್ ಮಾಡಿ, ಧನ್ಯವಾದಗಳು....

. ( video credit ; tv 9 kannada )