ವೇಶ್ಯಾವಾಟಿಕೆ ಬಗ್ಗೆ ಓಪನ್ ಟಾಕ್ ಮಾಡಿದ ನಟಿ ಒಲಿವಿಯ! ಈ ನಟಿ ಹೇಳೋದು ಏನು ಗೊತ್ತಾ?

ವೇಶ್ಯಾವಾಟಿಕೆ ಬಗ್ಗೆ ಓಪನ್ ಟಾಕ್ ಮಾಡಿದ ನಟಿ ಒಲಿವಿಯ! ಈ ನಟಿ ಹೇಳೋದು ಏನು ಗೊತ್ತಾ?

ಬಣ್ಣದ ರಂಗ ಎಂದಿಗೂ ನೀರಿನ ಮೇಲೆ ಗುಳ್ಳೆಯ ಹಾಗೆ ಯಾವ ಬರುತ್ತೆ ಒಡೆದುಹೋಗುತ್ತದೆ ಎಂದು ನಾವು ಊಹಿಸಿಕೊಳ್ಳಲು ಕೂಡ ಸಾದ್ಯವಾಗುವುದಿಲ್ಲ. ಇನ್ನೂ ಇಂದು ಟ್ರೆಂಡ್ ನಲ್ಲಿ ಇರುವ ಕಲಾವಿದರು ನಾಳಿನ ದಿನಗಳಲ್ಲಿ ಅವಕಾಶವೇ ಇಲ್ಲದಂತೆ ಕಾಲಿ ಕುಳಿತಿದ್ದವರು ಇದ್ದಾರೆ. ಇನ್ನೂ ತನ್ನ ಚೊಚ್ಚಲ ಸಿನಿಮಾಗಳಲ್ಲಿ ಸೋತವರು ಇಂದು ಉನ್ನತ ಸ್ಥಾನದಲ್ಲಿ ಮಿಂಚುತ್ತಿರುವ ಕಲಾವಿದರು ಕೂಡ ನಮ್ಮಲ್ಲಿ ಇದ್ದಾರೆ. ಇತ್ತ ಬೆರಳೆಣಿಕೆಯಷ್ಟು ಸಿನಿಮಾ ಮಾಡಿ ವೈರಲ್ ಟಾಕ್ ಹಾಗೂ ಕಾಂಟ್ರವರ್ಸಿ ಹೇಳಿಕೆ ನೀಡುವ ಮೂಲಕ ಸದಾ ಸುದ್ದಿಯಲ್ಲಿ ಇರುತ್ತಾರೆ. ಇಂತಹ ಸಾಲಿನಲ್ಲಿ ಇರುವ ಹೆಸರು ಎಂದರೆ ನಮ್ಮ ಸ್ಯಾಂಡಲ್ ವುಡ್ ಹಾಗೂ ಕಾಲಿವುಡ್ ನಟಿ ಎಂದು ಗುರುತಿಸಿಕೊಂಡಿದ್ದ ನಟಿ "ಒಲಿವಿಯಾ".  

ಈ ನಟಿ ಒಲಿವಿಯಾ ಅವರು ಮೊದಲ ಬಾರಿಗೆ ಬಣ್ಣದ ರಂಗಕ್ಕೆ ಕಾಲಿಟ್ಟಿದ್ದು ನಮ್ಮ ಸ್ಯಾಂಡಲ್ ವುಡ್ ನ "ರಾಕಿಂಗ್ ಸ್ಟಾರ್" ಅವರ ಅಭಿನಯದ "ಕಿರಾತಕ" ಸಿನಿಮಾ ಮೂಲಕ. ಇನ್ನೂ ತಮ್ಮ ಮೊದಲ ಸಿನಿಮಾದಲ್ಲಿ ಈ ನಟಿ ದೊಡ್ಡ ಮಟ್ಟದ ಹಿಟ್ ಪಡೆದುಕೊಂಡರು. ಅದಾದ ಬಳಿಕ ಕನ್ನಡದ ಮಿಸ್ಟರ್ ಮೊಮ್ಮಗ ಸಿನಿಮಾದಲ್ಲಿ ನಟಿಸಿ ಸ್ಯಾಂಡಲ್ ವುಡ್ ನಿಂದಾ ದೂರ ಉಳಿದರು. ಅದಾದ ಬಳಿಕ ಈ ನಟಿ ಮುಖ ಮಾಡಿದ್ದು ಕಾಲಿವುಡ್ ನತ್ತಾ. ಇನ್ನೂ  2010ರಲ್ಲಿ ಕಲಾವಾಣಿ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಆ ಬಳಿಕ  ಮದಯನೈ ಕೂಟಂ, ಕಾಲಕಲಾಪು, ಮರೀನಾ, ಮುದರ್ ಕೂಡಂ, ಯಾಮಿರುಕಾ ಪಯಮೆಂ, 90 ಎಂಎಲ್ ಚಿತ್ರಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡು ಜನರ ಮನಸ್ಸು ಗೆದ್ದರು.ಆದರೆ ಕೆಲ ಸಮಯದ ಬಳಿಕ ಸಿನಿಮಾದಲ್ಲಿ ಅವಕಾಶ ಇಲ್ಲದೆ ಕಾಲಿ ಕುತ್ತಿದ್ದ ಇದೆ.

ಆ ನಂತರ ಈಕೆಯನ್ನು ತೆರೆಗೆ ಕಾಣಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದು ಬಿಗ್ ಬಾಸ್. ಇನ್ನೂ ಬಿಗ್ ಬಾಸ್ ನಲ್ಲಿ ಕೂಡ ತಮ್ಮ ಕಡಕ್ ನಡವಳಿಕೆಯ ಮೂಲಕ ಎಲ್ಲರ ಮನಸ್ಸು ಗೆದ್ದಿದ್ದರು. ಇನ್ನೂ ಬಿಗ್ ಬಾಸ್ ನಿಂದಾ ಹೋರ ಬಂದ ಬಳಿಕ ಅವರಿಗೆ ಕೆಲ ಅವಕಾಶಗಳು ಕೂಡ ಕೈ ಸೇರಿ ಮತ್ತೆ ಈಗ ಸದ್ಯದಲ್ಲಿ  ಸಿನಿಮಾಗಳ ಅವಕಾಶಗಳಿಗಾಗಿ ಎದುರು ನೋಡುತ್ತಿದ್ದಾರೆ. ಆದರೆ ಈ ನಟಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯರಾಗಿ ತೊಡಗಿಸಿಕೊಳ್ಳುವ ನಟಿ. ಹಾಗೆಯೇ ಕಾಂಟ್ರವರ್ಸಿ ಹೇಳಿಕೆ ಕೂಡ ಆಗಾಗ ನೀಡಿ ಸುದ್ದಿಯಲ್ಲಿ ಇರುತ್ತಾರೆ. ಇದೀಗ ಖಾಸಗಿ ವಾಹಿನಿಯ ಇಟರ್ವ್ಯು ನಲ್ಲಿ ಇಂದಿನ ಜನತೆಗೆ ಲೈಂಗಿಕ ಶಿಕ್ಷಣ ಬಹಳ ಮುಖ್ಯ ಹಾಗೆಯೇ ವೇಶ್ಯಾವಾಟಿಕೆ ಕಾನೂನು ಬದ್ದವಾಗಬೇಕು. ಹಾಗಾದರೆ ನಮ್ಮ ದೇಶದಲ್ಲಿ ಆಗುವ ಅತ್ಯಾಚಾರದ ಸಂಖ್ಯೆ ಕೂಡ ಕಡಿಮೆ ಆಗಬಹುದು ಎನ್ನುವ ಹೇಳಿಕೆ ನೀಡಿ ವಿವಾದಗಳನ್ನು ಸೃಷ್ಟಿ ಮಾಡಿದ್ದಾರೆ.