ಬ್ರೇಕಿಂಗ್ ಸುದ್ದಿ : ಹೇಮಾ ಚೌದರಿ ಆಸ್ಪತ್ರೆಗೆ ದಾಖಲು..! ತುಂಬಾನೇ ಸೀರಿಯಸ್ ; ಏನಾಗಿದೆ ನೋಡಿ ?

ಬ್ರೇಕಿಂಗ್ ಸುದ್ದಿ : ಹೇಮಾ ಚೌದರಿ ಆಸ್ಪತ್ರೆಗೆ ದಾಖಲು..! ತುಂಬಾನೇ ಸೀರಿಯಸ್ ; ಏನಾಗಿದೆ ನೋಡಿ ?

ಕನ್ನಡದ ಖ್ಯಾತ ನಟಿಯರ ಸಾಲಿನಲ್ಲಿ ಮತ್ತು ಖ್ಯಾತ ಪ್ರಖ್ಯಾತಿ ಪಡೆದಿರುವ ಹಿರಿಯ ನಟಿಯರಲ್ಲಿ ನಟಿ ಹೇಮಾ ಚೌದರಿ ಕೂಡ ಒಬ್ಬರು.. ಇತ್ತೀಚಿಗೆ ಲೀಲಾವತಿ ಅವರ 11ನೇ ದಿನದ ಪುಣ್ಯ ತಿಥಿ ಕಾರ್ಯದಲ್ಲಿ ಹೇಮಾ ಚೌದರಿಯವರು ಭಾಗಿಯಾಗಿದ್ದು, ನಟ ವಿನೋದ್ ರಾಜ್ ಮತ್ತು ಅವರ ಪತ್ನಿ ಮಕ್ಕಳೊಟ್ಟಿಗೆ ಸಮಯ ಕಳೆದು ಖುಷಿಖುಷಿಯಾಗಿ ಕಂಡವರು. ಹೌದು ಇವರು ಕೂಡ ಕನ್ನಡ ಚಿತ್ರರಂಗದಲ್ಲಿ 90ರ ದಶಕದಲ್ಲಿ ಹೆಚ್ಚಾಗಿ ಪ್ರಸಿದ್ಧಿ ಪಡೆದಂತಹ ನಟಿ. ಖಲನಾಯಕಿಯಾಗಿ ಕೂಡ ಕೆಲವು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು ಹೆಚ್ಚು ಪಾತ್ರಗಳಿಗೆ ಇವರು ಹೆಸರುವಾಸಿಯಾಗಿದ್ದರು.

ಹೌದು ಹೇಮಾ ಚೌದರಿ ಅವರು ಇದೀಗ ಇದ್ದಕ್ಕಿದ್ದಂತೆ ಆಸ್ಪತ್ರೆಗೆ ದಾಖಲು ಆಗಿದ್ದಾರಂತೆ. ಇದೀಗ ಅವರ ಆರೋಗ್ಯದಲ್ಲಿ ತುಂಬಾ ಏರುಪೇರು ಕಂಡ ಬೆನ್ನಲ್ಲೇ ಆಸ್ಪತ್ರೆಗೆ ದಾಖಲಿಸಿಲಾಗಿದೆ. ತುಂಬಾನೇ ಸೀರಿಯಸ್ ಕ್ರಿಟಿಕಲ್ ಕಂಡಿಶನ್ ನಲ್ಲಿ ಇವರು ಇದ್ದಾರಂತೆ. ಇದೀಗ ತಿಳಿದು ಬಂದಿರುವ ಮಾಹಿತಿ ಪ್ರಕಾರ ಇವರಿಗೆ ಬ್ರೈನ್ ಹೆಮರೇಜ್ ಇದ್ದು ಅದರದ್ದೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಆದ್ರೆ ಇವರ ದೇಹ ಹೆಚ್ಚು ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂದು ಕೇಳಿಬಂದಿದ್ದು ಐಸಿಯು ನಲ್ಲಿ ಇಟ್ಟು ಚಿಕಿತ್ಸೆ ಮುಂದುವರಿಸಿದ್ದಾರೆ ಎನ್ನಲಾಗಿದೆ.  

ಇವರ ಮಗ ಫಾರಿನ್ ನಲ್ಲಿ ಇದ್ದಾರೆ. ಅವರಿಗೆ ಅಮ್ಮನ ಅನಾರೋಗ್ಯ ವಿಷಯವನ್ನು ತಿಳಿಸಿ ಅವರನ್ನ ಕರೆತರುವ ಕೆಲಸ ಕೂಡ ಒಂದು ಕಡೆ ನಡೆಯುತ್ತಿದೆಯಂತೆ. ಹೇಮಾ ಚೌದರಿ ಅವರ ಆರೋಗ್ಯದಲ್ಲಿ ತುಂಬಾನೇ ಸೀರಿಯಸ್  ಆಗಿದೆ ಎಂದು ಹೇಳಲಾಗುತ್ತಿದೆ.. ಆದಷ್ಟು ಬೇಗನೆ ಇವರು ಗುಣಮುಖರಾಗಲಿ ಎಂದು ನೀವು ಕೂಡ ಆಶಿಸಿ ಮತ್ತು ಹೇಮಾ ಚೌಧರಿ ಅವರ ಬಗ್ಗೆ ನಿಮಗೆ ಇನ್ನೂ ಏನೇನೆಲ್ಲ ಗೊತ್ತು ಎಂಬುದಾಗಿ ನಮಗೆ ಕಮೆಂಟ್ ಮಾಡಿ, ಧನ್ಯವಾದಗಳು...