ವಿಧಿ ಎಷ್ಟು ಕ್ರೂರಿ ನೋಡಿ ನಟ ಸೂರಜ್ ಬಾಳಲ್ಲಿ ಎಂತ ಅಪಘಾತ ಕಾಲು ತೊಡೆಯಲ್ಲಿ, 6 ಇಂಚು ಮೂಳೆ ಇರ್ಲಿಲ್ಲ- ನಟ ಸೂರಜ್ ಅಕ್ಕ ಕಣ್ಣೀರು ; ವಿಡಿಯೋ ನೋಡಿ
ರಾಜಕುಮಾರ ಕುಟುಂಬದ ಕುಡಿ ಸೂರಜ್ ಕನ್ನಡ ಚಿತ್ರರಂಗದ ಭರವಸೆಯ ನಟ ಚಿತ್ರ ರಂಗಕ್ಕೆ ಬರುವ ಮುಂಚೆಯೇ ತನ್ನ ಭವಿಷ್ಯವನ್ನೇ ಕಳೆದು ಕೊಂಡಿದ್ದಾರೆ . ಸೂರಜ್ ಬೈಕ್ ಚಲಾಯಿಸುವಾಗ ಎದುರು ಟಿಪರ್ ಲಾರಿ ಬಂದು ಡಿಕ್ಕಿ ಹೊಡೆದಿದೆ. ಕಾಲುಗಳ ಮೇಲೆ ಲಾರಿ ಹರಿದ ಕಾರಣ ಸೂರಜ್ ಕಾಲು ಕಳೆದುಕೊಂಡಿದ್ದಾರೆ.
'ಅಪಘಾತ ನಡೆದ ಸ್ಥಳದಿಂದ ಸೂರಜ್ ಆಸ್ಪತ್ರೆಗೆ ಬರುವಾದ ಯಾವ ರೀತಿ ಚಿಕಿತ್ಸೆ ಸಿಕ್ಕಿರಲಿಲ್ಲ ಹೀಗಾಗಿ ತುಂಬಾ ರಕ್ತ ಕಳೆದುಕೊಂಡಿದ್ದರು. ಎಮರ್ಜೆನ್ಸಿಯಲ್ಲಿ ಬಂದ ವ್ಯಕ್ತಿಗಳನ್ನು ನಾವು ಕ್ರಾಶ್ ಎಂದು ಕರೆಯುತ್ತೇವೆ ಆದರೆ ಸೂರಜ್ ಅವರನ್ನು ಮೊದಲು ಆಪರೇಷನ್ ಥಿಯೇಟರ್‌ಗೆ ಕರೆದುಕೊಂಡು ಹೋಗಬೇಕಿತ್ತು ಕಾರಣ ಮೊದಲು ಅವರ ಪ್ರಾಣ ಉಳಿಸುವುದಷ್ಟೇ ಮುಖ್ಯವಾಗಿತ್ತು.ಆಪರೇಷನ್ ಮಾಡುವ ಮುನ್ನ ಓಪನ್ ಮಾಡಿ ನೋಡಿದಾಗ ಕಾಲಿನಲ್ಲಿ 6 ಇಂಚು ಮೂಳೆ ಇರಲಿಲ್ಲ ತೊಡೆ ಭಾಗದಲ್ಲಿ 6 ಇಂಚು ಮೂಳೆ ಇರಲಿಲ್ಲ.ತಕ್ಷಣವೇ ಸೂರಜ್ ಫ್ಯಾಮಿಲಿ ಜೊತೆ ಮಾತನಾಡಿದ ಆದಷ್ಟು ಬೇಗ ಆಪರೇಷನ್ ಮಾಡಿ ಪ್ರಾಣ ಉಳಿಸಲು ಸಾಧ್ಯವಾಗಿತ್ತು.ಸೂರಜ್ ಬಂದ ತಕ್ಷಣ ವೆಂಟಿಲೇಟರ್ ಹಾಕಿದೆವು.
. ( video credit : third eye )
ನಮ್ಮ ಪ್ರಕಾರ ಮೂರು ದಿನ ವೆಂಟಿಲೇಟರ್ ಬೇಕಾಗಬಹುದು ಅಂದುಕೊಂಡೆವು ಆದರೆ ಮರು ದಿನವೇ ಸೂರಜ್ ನಾರ್ಮಲ್ ಆದ ಕಾರಣ ವೆಂಟಿಲೆಟರ್ ತೆಗೆಯಲಾಗಿತ್ತು. ಈಗಲ್ಲೂ ಸೂರಜ್ ದೇಹದಲ್ಲಿ ರಕ್ತ ಕಡಿಮೆ ಇದೆ ಸುಮಾರು 10 ಪೈನ್ಸ್ ಆಫ್ ರಕ್ತ ಬಳಸಿದ್ದೀವಿ ತುಂಬಾ ಪ್ಯಾಕೆಟ್ ಫ್ಲೂಯಿಡ್ ಮತ್ತು ಪಿಆರ್‌ಪಿ ಬಳಸಿದ್ದೀವಿ. ಪರಿಸ್ಥಿತಿ ಹೇಗೆ ಅನ್ನೋದು ನಮಗೆ ಗೊತ್ತಿರಲಿಲ್ಲ ಹೀಗಾಗಿ ಮಾಧ್ಯಮಗಳಲ್ಲಿ ಮಾತನಾಡಲು ನಿರಾಕರಿಸಲಾಗಿತ್ತು
'ನನ್ನ ತಮ್ಮ ಸೂರಜ್ ಮತ್ತು ಟಿಪರ್ ಲಾರಿ ನಡುವೆ ಆದ ಅಪಘಾತ ಖಂಡಿತಾ ಬೇಸರವಾಗುತ್ತದೆ. ಸ್ಥಳೀಯರ ಸಹಾಯದಿಂದ ಆತ ಈಗ ಬದುಕಿರುವುದು ಆತನಿಗೆ ಏನು ಅಗತ್ಯವಿದೆ ಉಳಿಸಿಕೊಳ್ಳಲು ವೈದ್ಯರು ಅದೆಲ್ಲಾ ಮಾಡಿದ್ದಾರೆ. ಸೂರಜ್‌ನ ಉಳಿಸಿಕೊಳ್ಳಬೇಕು ಅಂದ್ರೆ ಕಾಲು ತೆಗೆಯಲೇ ಬೇಕಿತ್ತು ಪರಿಸ್ಥಿತಿ ಹಾಗಿತ್ತು ಎಂದು ಸೂರಜ್ ಅಕ್ಕ ಮಾತನಾಡಿದ್ದಾರೆ.