ವರ್ತೂರು ಸಂತೋಷ್ ಬೆನ್ನಲ್ಲೇ ಜಗ್ಗೇಶ್ ವಿರುದ್ಧವೂ ಹುಲಿ ಉಗುರಿನ ಆರೋಪ..! ಇಲ್ಲಿದೆ ವಿಡಿಯೋ

ವರ್ತೂರು ಸಂತೋಷ್ ಬೆನ್ನಲ್ಲೇ ಜಗ್ಗೇಶ್ ವಿರುದ್ಧವೂ ಹುಲಿ ಉಗುರಿನ ಆರೋಪ..! ಇಲ್ಲಿದೆ ವಿಡಿಯೋ

ಬಿಗ್ ಬಾಸ್ ಮನೆಯಲ್ಲಿ ವರ್ತುರ್ ಸಂತೋಷ ಅವ್ರು ಸ್ಪರ್ಧೆಯಾಗಿ ಈ ಬಾರಿ ಹೋಗಿದ್ದರು. ಆದರೆ ಮೊನ್ನೆ ಇದ್ದಕ್ಕಿದ್ದಂತೆ ಬಿಗ್ಬಾಸ್ ಮನೆಯಿಂದ ಕಾಣೆಯಾಗಿದ್ದಾರೆ. ಅದಕ್ಕೆ ಕಾರಣ ಅವರ ಕೊರಳಲ್ಲಿ ಹುಲಿಯ ಉಗುರಿನ ಪೆಂಡೆಂಟ್ ಕಂಡು ಬಂದ ಹಿನ್ನೆಲೆಯಲ್ಲಿ ಎಂದು ನಂತರ ಕೇಳಿ ಬಂದಿತ್ತು. ಅತ್ತ ಅರಣ್ಯ ಇಲಾಖೆ ಅಧಿಕಾರಿಗಳು ನಿಯಮ ಉಲ್ಲಂಗನೆ ಮಾಡಿದ ವರ್ತೂರು ಸಂತೋಷ್ ಅವರನ್ನು ಬಂಧಿಸಿದ್ದು ಕೋರ್ಟಿಗೆ ಹಾಜರುಪಡಿಸಿದ್ದಾರೆ. ಶಿಕ್ಷೆಗೆ ಒಳಪಡುವಂತೆ ಕಾರ್ಯಚರಣೆ ನಡೆಸಿದ್ದರು. ಅದರ ಬೆನ್ನಲ್ಲೇ ದರ್ಶನ್ ಅವರ ಒಂದು ಫೋಟೋ ಕೂಡ ವೈರಲ್ ಆಗಿತ್ತು..

ನಟ ದರ್ಶನ್ ಅವರು ಕೂಡ ಕೊರಳಲ್ಲಿ ಹುಲಿಯ ಉಗುರಿನ ಪೆಂಡೆಂಟ್ ಲಾಕೆಟ್ ಮಾಡಿಸಿಕೊಂಡು ಹಾಕಿಕೊಂಡಿದ್ದಾರೆ ಎನ್ನಲಾಗಿ ಕಂಡಿದ್ದು ಅವರನ್ನು ಕೂಡ ಅರೆಸ್ಟ್ ಮಾಡುತ್ತಾರೆಯೇ ಅರಣ್ಯ ಇಲಾಖೆಯವರು ಎಂದು ಹಲವರು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಮಾಡಿದ್ದು ಸಹ ಇದೆ. ಇದೀಗ ನಟ ಜಗ್ಗೇಶ್ ಅವರು ಕೂಡ ಅದೇ ಹುಲಿ ಉಗುರಿನ ಲಾಕೆಟ್ ವಿಚಾರವಾಗಿ ಸುದ್ದಿ ಆಗುತ್ತಿದ್ದಾರೆ. ಅವರದೇ ಹೇಳಿಕೆಯ ಈ ಒಂದು ವಿಡಿಯೋ ಬಾರಿ ವೈರಲ್ ಆಗುತ್ತಿದೆ. ಸಂದರ್ಶನದಲ್ಲಿ ಮಾತನಾಡುತ್ತಿದ್ದ ವೇಳೆಯೇ ನಟ ಜಗ್ಗೇಶ್ ಅವರು 'ನನಗೆ 20 ವರ್ಷ ಆಗಿದ್ದಾಗ ನನ್ನಮ್ಮ ನಾನು ಹುಲಿಯ ರೀತಿ ಇರಲಿ ಎಂದು ಅವರೇ ಒರಿಜಿನಲ್ ಹುಲಿಯ ಉಗುರನ್ನು ಕೊರಳಿಗೆ ಮಾಡಿಸಿ ಹಾಕಿಸಿದ್ದಾರೆ ನೋಡಿ.  

ನನ್ನ 20ನೇ ಬರ್ತಡೇಗೆ ನನ್ನಮ್ಮ ನನಗೆ ಇದನ್ನ ಹುಲಿ ರೀತಿ ಇರಲಿ ನನ್ನ ಮಗ ಎಂದು ಗಿಫ್ಟ್ ಮಾಡಿದ್ದರು.' ಎಂದು ನಟ ಜಗ್ಗೇಶ್ ಅವರೇ ಹೇಳಿಕೊಂಡಿದ್ದಾರೆ. ಅದರ ವಿಡಿಯೋ ತುಣುಕನ್ನ ಇಲ್ಲಿ ಗಮನಿಸಬಹುದು. ಈ ವಿಡಿಯೋ ನೋಡಿದ ತಕ್ಷಣ ಕೆಲವರು ಸಂತೋಷ್ ಅವರಿಗೊಂದು ನ್ಯಾಯನಾ, ಅತ್ತ ಸೆಲೆಬ್ರಿಟಿ ಆದ ಜಗ್ಗೇಶ್ ಅವರಿಗೆ ಒಂದು ನ್ಯಾಯಾನ..? ಅವರು ಕೂಡ ಹುಲಿಯ ಉಗುರಿನ ಪೆಂಡೆಂಟ್ ಮಾಡಿಸಿಕೊಂಡು ಕೊರಳಲಿ ಹಾಕಿಕೊಂಡಿದ್ದಾರೆ. ಅವರನ್ನು ಕೂಡ ಜೈಲಿಗೆ ಹಾಕುತ್ತೀರಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಈ ಬಗ್ಗೆ ನೀವು ಏನಂತೀರಿ, ಇಲ್ಲಿದೆ ನೋಡಿ ಆ ವಿಡಿಯೋ, ಮತ್ತು ಜಗ್ಗೇಶ್ ಅವರ ವಿಡಿಯೋ ನೋಡಿದ ಬಳಿಕ ನಿಮ್ಮ ಅನಿಸಿಕೆ ಏನೆಂದು ಕಮೆಂಟ್ ಮಾಡಿ ತಿಳಿಸಿ, ಧನ್ಯವಾದಗಳು