ಪ್ರೇಮ ವಿವಾಹ ನಿಜಕ್ಕೂ ಸರೀನಾ ಅಥವಾ ತಪ್ಪೋ : ನಿಮ್ಮ ಅನಿಸಿಕೆ ಏನು ?
ಈ ಪ್ರೀತಿ ಒಂದು ಪವಿತ್ರವಾದದ್ದು..ಪ್ರೇಮ ವಿವಾಹ ಮಾಡಿಕೊಳ್ಳಲು ಅದೃಷ್ಟ ಬೇಕು ಅಂತಾರೆ.. ಪ್ರೇಮ ವಿವಾಹ ಅನ್ನುವುದು ಒಂದು ಸುಂದರ ಸಂಭ್ರಮದ ಕ್ಷಣ. ಸದಾ ಖುಷಿಯಲ್ಲಿ ತೇಲಾಡುವ, ಪ್ರತಿಕ್ಷಣವನ್ನು ಅಪಾರ ನೆನಪಿನ ಬುತ್ತಿ ಮಾಡಿಕೊಂಡು ಕ್ಷಣಕ್ಷಣಕ್ಕೂ ಖುಷಿಯಾಗಿರುವುದು ಕೆಲವರ ಪ್ರಕಾರ ಲವ್ ವಿವಾಹ. ತುಂಬಾನೇ ಸವಿ ಜೇನಿನಂತೆ ಎನ್ನುವ ಮಾತನ್ನು ಅವರು ಹೇಳುತ್ತಾರೆ. ಪ್ರೀತಿ ಮಾಡಿದ ಮೇಲೆ, ಪ್ರೀತಿ ಮಾಡಿದ ಅ ಹುಡುಗಿಯನ್ನು ಮದುವೆ ಆಗಲು ಪುಣ್ಯ ಇರಬೇಕು ಅನ್ನುವುದು ಸತ್ಯ..ಅದರಿಂದ ವಂಚಿತರಾದವರು ಜೀವನಪೂರ್ತಿ ಹೇಗೆ ನೊಂದುಕೊಳ್ಳುತ್ತಾ, ಆಕೆಯ ನೆನಪಿನಲ್ಲಿಯೇ ಕಣ್ಣೀರು ಹಾಕುತ್ತಾ ನೋವನ್ನ ಪ್ರತಿ ಕ್ಷಣ ಅನುಭವಿಸ್ತಾ, ಯಾವ ಕೆಲಸದ ಮೇಲೆಯೂ ಹಿಡಿತ ಸಾಧಿಸದೆ ಅವರ ಜೀವನವನ್ನೇ ಬರಿದಾಗಿ ಮಾಡಿಕೊಳ್ಳುವ ಘಟನೆಗಳು ಕೂಡ ನಮ್ಮ ಕಣ್ಣ ಮುಂದೆ ಕಂಡಿವೆ. ಅವರ ನೋವುಗಳು ನಮಗೂ ಸಹ ಕಾಣಿಸುತ್ತಿವೆ. ಆದ್ರೆ ಅತ್ತ ಹುಡುಗಿ ತನ್ನಿಂದ ಏನು ಆಗೆ ಇಲ್ಲ ಅನ್ನೋ ರೀತಿ ಇಷ್ಟ ಇದ್ದರೂ ಇಲ್ಲದಿದ್ದರೂ ಗಂಡನ ಜೊತೆ ಇದ್ದು ಬಿಡುತ್ತಾರೆ. ಪ್ರೀತಿಯಲಿ ಹುಡುಗಿರು ಮಾತ್ರ ಮೋಸ ಮಾಡ್ತಾರೆ ಅಂತ ಅಲ್ಲ, ಹುಡುಗರು ಸಹ ಮೋಸ ಮಾಡುವರಿದ್ದಾರೆ.
ಹೌದು ಹುಡುಗ ಆಗಲಿ ಹುಡುಗಿ ಆಗಲಿ ಪ್ರೀತಿ ಮಾಡುವ ಮುನ್ನ ಒಂದು ಕ್ಷಣ ಯೋಚನೆ ಮಾಡಿ. ಎಲ್ಲದರ ಕುರಿತಾಗಿ ವಿಚಾರ ಮಾಡಬೇಕು. ಅಸಲಿಗೆ ಪ್ರೇಮ ವಿವಾಹ ಆಗುವುದು ಸರಿಯಾ ಅಥವಾ ತಪ್ಪಾ ಎನ್ನುವ ಅಂಶ ಕೂಡ ಈ ಲೇಖನದಲ್ಲಿ ಬಂದಿದ್ದು, ಅದರ ಬಗ್ಗೆ ಈಗ ನಾವು ಚರ್ಚೆ ಮಾಡೋಣ..ಹೌದು ಮೊದಲನೆಯದಾಗಿ ಪ್ರೀತಿ ಮಾಡುವಾಗ ಜಾತಿ ಕೆಲವರಿಗೆ ಅಡ್ಡ ಬರುವುದಿಲ್ಲ..ಪ್ರೇಮ ಮಾಡುವಾಗ ಎರಡು ಕಡೆಯಿಂದ ನಾವು ನೋಡಬೇಕು..ಒಂದು ತಂದೆ ತಾಯಿ ಕಡೆಯಿಂದ, ಇನ್ನೊಂದು ಹುಡುಗ ಹುಡುಗಿ ಕಡೆಯಿಂದ..
ಮೊದಲಿಗೆ ಹೇಳಿಬಿಡುತ್ತೇನೆ ಈ ಪ್ರೀತಿ ಪ್ರೇಮದ ವಿಚಾರ ಅವರವರ ಭಾವನೆಗೆ ಬಿಟ್ಟದ್ದು..ಇದರಲಿ ಯಾರದ್ದು ಸರಿ, ಯಾರದ್ದು ತಪ್ಪು ಎನ್ನುವ ಆಲೋಚನೆ ಅವರ ಯೋಚನೆಗೆ ಬಿಟ್ಟಿದ್ದು.. ನೀವು ಒಂದು ಹುಡುಗಿಯನ್ನು ತುಂಬಾನೇ ಪ್ರೀತಿ ಮಾಡುತ್ತಿದ್ದರೆ, ಮೊದಲಿಗೆ ಓಡಿ ಹೋಗುವುದನ್ನು ಬಿಟ್ಟು ನಿಮ್ಮ ತಂದೆ ತಾಯಿ ಬಳಿ ಹೋಗಿ, ನಿಮ್ಮ ಪ್ರೀತಿಯನ್ನು ಅವರ ಬಳಿ ಪ್ರಸ್ತಾಪ ಮಾಡಿ ಅವರನ್ನ ಒಪ್ಪಿಸಿಯೇ ನಂತರ ಮದುವೆ ಮಾಡಿಕೊಂಡು ಖುಷಿಯಾಗಿರಿ. ಪ್ರೀತಿ ವಿಚಾರದಲ್ಲಿ ತಂದೆ ತಾಯಿಗೆ ಆ ವಿಚಾರ ಗೊತ್ತಾದಾಗ ಅನ್ಯ ಜಾತಿ ಹುಡುಗ ಅಥವಾ ಅನ್ಯ ಜಾತಿ ಹುಡುಗಿಯ ಜೊತೆ ಮದುವೆ ಮಾಡಲು ಪೋಷಕರು ನಿರಾಕರಿಸುತ್ತಾರೆ.
ತಂದೆ ತಾಯಿ ಆದವರು ತಕ್ಷಣಕ್ಕೆ ನಿಮ್ಮ ಮಕ್ಕಳನ್ನು ಜೊತೆ ರಿಯಾಕ್ಟ್ ಮಾಡಿ ದೊಡ್ಡ ಸಮಸ್ಯೆ ಎದುರು ಮಾಡಿಕೊಳ್ಳುಬೇಡಿ. ತಂದೆ ತಾಯಿ ಆದವರು ತಕ್ಷಣಕ್ಕೆ ತುಂಬಾ ಹಾರ್ಶ್ ಆಗಿ ರಿಯಾಕ್ಟ್ ಮಾಡಿದ್ದೆ ಆದರೆ ನಿಮ್ಮ ಮಕ್ಕಳು ನಿಮ್ಮಿಂದ ಕೈ ತಪ್ಪಿ ಹೋಗಬಹುದು.. ಅದರ ಬಗ್ಗೆ ಇನ್ನೂ ಸಾಕಷ್ಟು ವಿಚಾರ ಈ ಲೇಖನದಲ್ಲಿ ತಿಳಿಸಲಾಗಿದ್ದು ಇಲ್ಲಿರುವ ವಿಡಿಯೋ ನೋಡಿ. ಲವ್ ಮ್ಯಾರೇಜ್ ಸರಿನಾ ತಪ್ಪಾ ಎಂದು ತೋರಿಸಲಾಗಿದೆ.. ಜೊತೆಗೆ ಎಲ್ಲಾ ಅರೆಂಜ್ ಮ್ಯಾರೇಜ್ ಗಳು ಕರೆಕ್ಟ್ ಆಗಿ ಜೀವನ ಮಾಡುತ್ತವೆ ಎಂದು ಹೇಳಲಾಗದು, ಹಾಗೆ ಎಲ್ಲಾ ಲವ್ ಮ್ಯಾರೇಜ್ ಗಳು ಮುಂದೆ ಯಶಸ್ವಿ ಜೀವನ ಮಾಡದೆ ಇರಬಹದು ಎಂದು ಹೇಳಬಹುದು. ಅದುವೇ ಈ ಲೇಖನದ ಉದ್ದೇಶ ಆಗಿದೆ..ಈ ವಿಡಿಯೋ ನೋಡಿ ಈ ಲವ್ ಮ್ಯಾರೇಜ್ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನ ತಿಳಿಸಿ ಧನ್ಯವಾದಗಳು.. ( video credit : Naveen Narayan ).