ಎಂಥ ಕಾಲ ಬಂತಪ್ಪ! ಬಾಡಿಗೆಗೆ ಸಿಗ್ತೇನೆ ಎಂದ ಯುವತಿ! ! ದುಡ್ಡಲ್ಲಿ ನೋ ಕಾಂಪ್ರೊಮೈಸ್ , ಇಂತವರು ಇರ್ತಾರೆ ?

ಎಂಥ ಕಾಲ ಬಂತಪ್ಪ!   ಬಾಡಿಗೆಗೆ ಸಿಗ್ತೇನೆ ಎಂದ ಯುವತಿ! ! ದುಡ್ಡಲ್ಲಿ ನೋ ಕಾಂಪ್ರೊಮೈಸ್ , ಇಂತವರು ಇರ್ತಾರೆ ?

ಭಾರತದಲ್ಲಿ ವಿದೇಶಿ ತರದ ಡೇಟಿಂಗ್ ಹವ್ಯಾಸವು ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಪ್ರಚಲಿತವಾಗಿದೆ. ಆಧುನಿಕ ತಂತ್ರಜ್ಞಾನ ಮತ್ತು ಸ್ಮಾರ್ಟ್‌ಫೋನ್‌ಗಳ ವ್ಯಾಪಕ ಬಳಕೆ ಈ ಪ್ರಕ್ರಿಯೆಯನ್ನು ತ್ವರಿತಗೊಳಿಸಿದೆ. ಡೇಟಿಂಗ್ ಆ್ಯಪ್‌ಗಳು, ಅಂತರ್ಜಾಲ ಸೌಲಭ್ಯಗಳು, ಮತ್ತು ಸಾಮಾಜಿಕ ಮಾಧ್ಯಮಗಳ ಬೆಳವಣಿಗೆ ಇದಕ್ಕೆ ಪ್ರಮುಖ ಕಾರಣಗಳಾಗಿವೆ ಎಂದೇ ಹೇಳಬಹುದು. ಇದೆಲ್ಲದಕ್ಕೂ ಮುಕ್ಯ ಕಾರಣ ಸಾಮಾಜಿಕ ಜಾಲತಾಣಗಳಲ್ಲಿ ಸೃಷ್ಟಿ ಮಾಡಿರುವ ಈ ಟಿಂಡರ್, ಬಂಬಲ್, ಮತ್ತು ಹಿಂಜ್ ಮುಂತಾದ ಆ್ಯಪ್‌ಗಳು ಎಂದೇ ಹೇಳಬಹುದು. ಈ ಅಫ್ಗಳು ಭಾರತದಲ್ಲೂ ಜನಪ್ರಿಯವಾಗಿದ್ದು, ಯುವಜನತೆಗೆ ಹೊಸ ಪರಿಚಯಗಳನ್ನು ಸುಲಭವಾಗಿ ಮಾಡಿಸಿವೆ.

ಬೆಳವಣಿಗೆ ಕಾಣುತ್ತಿರುವ ಆಧುನಿಕ ತಂತ್ರಜ್ಞಾನಗಳ ಬಳಕೆ ಡೇಟಿಂಗ್ ಅನ್ನು ಅನುಕೂಲಕರವಾಗಿ ಮತ್ತು ಸುರಕ್ಷಿತವಾಗಿ ಮಾಡಿದೆ. ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದ, ಡೇಟಿಂಗ್ ಭಾರತದ ಯುವ ಜನತೆಯಲ್ಲಿ ಹೆಚ್ಚು ಒಪ್ಪಿಗೆಯನ್ನು ಪಡೆದುಕೊಂಡಿದೆ. ಹಾಗೆಯೇ ನಗರ ಪ್ರದೇಶಗಳಲ್ಲಿ ಜೀವನ ಶೈಲಿಯಲ್ಲಿ ಬದಲಾವಣೆ, ಮಹಿಳೆಯರ ಸ್ವಾತಂತ್ರ್ಯ ಮತ್ತು ಸಾಂಸ್ಕೃತಿಕ ಸಮಾನತೆಗಳು ಡೇಟಿಂಗ್ ಹವ್ಯಾಸವನ್ನು ಉತ್ತೇಜಿಸುತ್ತವೆ. ಇನ್ನೂ ಈ ಆಧುನಿಕ ಟೆಕ್ನಾಲಜಿಯಲ್ಲಿ ಡೇಟಿಂಗ್ ಆ್ಯಪ್‌ಗಳ ಮೂಲಕ ಪರಿಚಯವಾಗುವವರು ಒಬ್ಬರನ್ನೊಬ್ಬರು ತಲುಪುವ ಅವಕಾಶ ಹೆಚ್ಚಾಗಿದೆ. ಅನೋನ್ಯ ಸಮಾಲೋಚನೆಗಳು ಮತ್ತು ಆದ್ಯತೆಯ ಆಧಾರದ ಮೇಲೆ ಒಳ್ಳೆಯ ಸಂಬಂಧಗಳನ್ನು ನಿರ್ಮಿಸುವ ಅವಕಾಶ. ಹಾಗೂ ಸೈಬರ್ ಅಪರಾಧಗಳು, ಅನಾಮಧೇಯತೆ ಮತ್ತು ಸುರಕ್ಷತಾ ಸಮಸ್ಯೆಗಳು ಕೂಡಾ ಇವೆ.

ಇನ್ನು ಡೇಟಿಂಗ್ ಹವ್ಯಾಸವು ಇನ್ನೂ ಎಲ್ಲಾ ಮಟ್ಟದಲ್ಲೂ ಒಪ್ಪಿಗೆಯಿಲ್ಲದಿದ್ದರೂ, ಯುವಜನಾಂಗದಲ್ಲಿ ಇದರ ಬಳಕೆ ಹೆಚ್ಚಾಗಿದೆ ಮತ್ತು ಇತಿಹಾಸದಲ್ಲಿ ಮೊದಲ ಬಾರಿಗೆ ಇದನ್ನು ಸಕಾರಾತ್ಮಕವಾಗಿ ನೋಡುವುದು ಆರಂಭವಾಗಿದೆ.
ಭಾರತದಲ್ಲಿ ವಿದೇಶಿ ತರದ ಡೇಟಿಂಗ್ ಹವ್ಯಾಸವು ಹೊಸತನದ ಅನುಭವವನ್ನು ನೀಡುತ್ತಿದೆ ಮತ್ತು ಸಾಂಸ್ಕೃತಿಕ ಪರಿವರ್ತನೆಯತ್ತ ದಾರಿಯನ್ನೆತ್ತುತ್ತಿದೆ. ಇದೆಲ್ಲದರ ವಿರೋಧ ಹಾಗೂ ಅಪಾಯಗಳ ಬಗ್ಗೆ ತಿಳಿದಿದ್ದರೂ ಕೊಡ ಈ ಹವ್ಯಾಸ ಹಾಗೂ ಬಳಕೆ ಹೆಚ್ಚಾಗಿಯೇ ಮಾಡಿದೆ ಎಂದ್ರೆ ತಪ್ಪಾಗಲಾರದು. ಇದೀಗ ದಿವ್ಯ ಗಿರಿ ಎಂಬ ಹುಡುಗಿಯೂ ತನ್ನನ್ನು ಡೆಟ್ ಕರೆಸಿಕೊಳ್ಳಲು ಹೋಟೆಲ್ ಮೆನು ರೀತಿಯಲ್ಲಿ ದುಡ್ಡಿನ ಮೆನು ರೆಡಿ ಮಾಡಿ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

 

 
 
 
 
 
 
 
 
 
 
 
 
 
 
 

A post shared by Divya Giri (@divya_giri__)