ಶೋಕಿ ಮಾಡಿ ಜೈಲು ಸೇರಿದ ರೀಲ್ಸ್ ಸ್ಟಾರ್, ಈಗ ಸಾಕಷ್ಟು ಕೇಸ್ ದಾಖಲು!

ಶೋಕಿ ಮಾಡಿ ಜೈಲು ಸೇರಿದ ರೀಲ್ಸ್ ಸ್ಟಾರ್, ಈಗ ಸಾಕಷ್ಟು ಕೇಸ್ ದಾಖಲು!

ಸಾಮಾಜಿಕ ಜಾಲತಾಣಗಳು ಈಗಿನ ಯುವಕರನ್ನು ಹಲವು ರೀತಿಯಲ್ಲಿ ದಾರಿ ತಪ್ಪಿಸುತ್ತವೆ ಎಂದು ಹೇಳಬಹುದು. ಈಗ ಇದರಿಂದ ಉಪಯೋಗಕ್ಕಿಂತ ದುರುಪಯೋಗವೇ ಹೆಚ್ಚು ಎಂದ್ರೆ ತಪ್ಪಾಗಲಾರದು. ಖಾಸಗೀತನದ ಸಮಸ್ಯೆಗಳು ಹೆಚ್ಚಾಗಿ, ವೈಯಕ್ತಿಕ ಮಾಹಿತಿ ಅಪಾಯದಲ್ಲಿರುತ್ತದೆ. ಆನ್ಲೈನ್ ಮೋಸಗಳು ಮತ್ತು ದುರುಪಯೋಗದ ಸಾದ್ಯತೆ ಹೆಚ್ಚುತ್ತದೆ. ಖಿನ್ನತೆಯಂತೆ ಮಾನಸಿಕ ಆರೋಗ್ಯದ ಸಮಸ್ಯೆಗಳು ಹೆಚ್ಚಾಗುತ್ತವೆ. ನಕಲಿ ಸುದ್ದಿಗಳು ಮತ್ತು ತಪ್ಪು ಮಾಹಿತಿ ವ್ಯಾಪಕವಾಗುತ್ತವೆ. ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಮಯ ಕಳೆಯುವುದರಿಂದ ಶೈಕ್ಷಣಿಕ ಮತ್ತು ವೃತ್ತಿಪರ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.ಈ ಕಾರಣಗಳಿಂದ, ಜಾಗೃತಿ ಮತ್ತು ಜವಾಬ್ದಾರಿಯುತ ಬಳಕೆ ಅಗತ್ಯವಾಗಿದೆ. ಜಾಗೃತ್ತಿ ಇದ್ದರೂ ಕೆಲವೊಮ್ಮೆ ಹಳ್ಳಕ್ಕೆ ಯಾವುದೇ ಒಂದು ಆಸೆಗೆ ಬೀಳಲು ಸಿದ್ಧರಿರುತ್ತಾರೆ.

ಸಾಮಾಜಿಕ ಜಾಲತಾಣಗಳು (Social Media) ಈಗಿನ ಯುವಕರ ಮೇಲೆ ಹಲವಾರು ರೀತಿಯಲ್ಲಿ ಪ್ರಭಾವ ಬೀರುತ್ತವೆ. ಹೀಗೆ ಒಳ್ಳೆಯದಕ್ಕೂ ಕೆಟ್ಟದಕ್ಕೂ ಪ್ರಭಾವ ಇರುತ್ತದೆ. ಸ್ನೇಹಿತರೊಂದಿಗೆ ಮತ್ತು ಕುಟುಂಬದೊಂದಿಗೆ ಸಂಪರ್ಕದಲ್ಲಿರಲು ಸಹಾಯ ಮಾಡುತ್ತದೆ. ನೂತನ ವಿಷಯಗಳ ಅರಿವು, ಆನ್ಲೈನ್ ಕೋರ್ಸ್‍ಗಳು, ಪ್ರಚೋದನಕಾರಿ ವಿಷಯಗಳು. ಡಿಜಿಟಲ್ ಕೌಶಲ್ಯಗಳು, ಕಮ್ಯುನಿಕೇಶನ್, ಮಾರುಕಟ್ಟೆ ನಿರ್ವಹಣೆ. ಉದ್ಯೋಗ ಮತ್ತು ಫ್ರೀಲೆನ್ಸಿಂಗ್ ಅವಕಾಶಗಳು.
 ಖಾಸಗೀ ಮಾಹಿತಿ ದುರುಪಯೋಗದ ಅಪಾಯ ಕೊಡ ಹೆಚ್ಚು. ಅತಿಯಾದ ಸಮಯ ಕಳೆಯುವುದರಿಂದ ಶೈಕ್ಷಣಿಕ, ವೃತ್ತಿಪರ ಜೀವನದ ಮೇಲೆ ಪರಿಣಾಮ. ಈ ಉಪಯೋಗ ದುರುಪಯೋಗವೂ ಹೆಚ್ಚು ಬಳಕೆದಾರರ ಕೈಯಲ್ಲಿ ಇರುತ್ತದೆ ಎಂದು ಹೇಳಬಹುದು ಏಕೆಂದ್ರೆ ಬಳಕೆಯ ಮೇರೆಗೆ ಎಲ್ಲವು ನಿರ್ಧಾರ ಆಗಲಿದೆ ಎಂದ್ರೆ ತಪ್ಪಾಗಲಾರದು.  

ಇನ್ನೂ ನಾವು ಇಷ್ಟೆಲ್ಲಾ ಸಾಮಾಜಿಕ ಜಾಲತಾಣಗಳ ಮೇಲೆ ಪೀಠಿಕೆ ಹಾಕಲು ಕಾರಣ ಅರುಣ್ ಕಟಾರೆ ಅರೆಸ್ಟ್ ಆಗಿರುವ ಬಗ್ಗೆ ತಿಳಿಸಲು. ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಶ್ರೀಮಂತಿಕೆಯನ್ನು ಪ್ರದರ್ಶನ ಮಾಡುತ್ತಿದ್ದ ಈತ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಮೂಲತಃ ಹುಬ್ಬಳ್ಳಿಯಾದವನು ಆದ ಈತ ಚಿತ್ರ ದುರ್ಗದಲ್ಲಿ ಸಾಕಷ್ಟು ವರ್ಷಗಳ ಕಾಲ ನೆಲಸಿದ್ದ ಅಲ್ಲಿ ಕಳ್ಳತನ ಮಾಡಿ ಜೈಲಿಗೆ ಹೋಗಿ. ಸಾಕಷ್ಟು ಹಣ ಚಿನ್ನ ಕದ್ದು ಮೂರು ಲಕ್ಷವನ್ನು ಸಾಲ ಪಡೆದು ಬೆಂಗಳೂರಿಗೆ ಬಂದು ನೆಲೆಸುತ್ತಾನೆ. ಬೆಂಗಳೂರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಗನ್ ಮ್ಯಾನ್ ಜೊತೆ ಐಷಾರಾಮಿ ಕಾರು ಬೈಕು ಮನೆಯಲ್ಲಿ ಇರುವ ವಿಡಿಯೋ ಹಂಚಿಕೊಂಡು ಸಿಕ್ಕಾಪಟ್ಟೆ ವೈರಲ್ ಆಗಿದ್ದ. ಆದ್ರೆ ರಸ್ತೆಯಲ್ಲಿ ಗನ್ ಹಿಡಿದು ಓಡಾಡುತ್ತಿದ್ದಾರೆ ಎಂದು ಸ್ಥಳೀಯರು ಕಂಪ್ಲೇಂಟ್ ನೀಡಿದ್ದರು. ಅದರ ಮೇರೆಗೆ ಆತನನ್ನು ಅರೆಸ್ಟ್ ಮಾಡಿ ವಿಚಾರಣೆ ಮಾಡಿದಾಗ ಎಲ್ಲವು ಬಾಡಿಗೆಗೆ ತಂದು ಡೂಪ್ಲಿಕೇಟ್ ವಸ್ತುಗಳನ್ನು ಬಳಸಿ ಬಿಟ್ಟಿ ಬಿಲ್ಡಪ್ ತೆಗೆದುಕೊಳ್ಳುತ್ತಿದ್ದಾರೆ ಎಂದು ವಿಚಾರಣೆ ಇಂದ ತಿಳಿದು ಬಂದಿದೆ. ಇದೀಗ ಅವನ ಮೇಲೆ ಕಳ್ಳತನ ಹಾಗೂ ಹಣವನ್ನು ಮೋಸ ಮಾಡಿರುವ ಆರೋಪದ ಮೇಲೆ ಈಗ ವಿಚಾರಣೆ ನಡೆಸಲಾಗುತ್ತಿದೆ.