ಪ್ರೀತಿಯಲ್ಲಿ ಯಾರು ಕೊಡ ಈ ಮೂರು ತಪ್ಪುಗಳನ್ನು ಮಾಡಬಾರದು! ಆ ತಪ್ಪುಗಳು ಏನೇನು ಗೊತ್ತಾ?

ಪ್ರೀತಿಯಲ್ಲಿ ಯಾರು ಕೊಡ ಈ ಮೂರು ತಪ್ಪುಗಳನ್ನು ಮಾಡಬಾರದು! ಆ ತಪ್ಪುಗಳು ಏನೇನು ಗೊತ್ತಾ?

ಹುಡುಗ ಹುಡುಗಿಯರಲ್ಲಿ ಮೂಡುವ ಪ್ರೀತಿ ಹಲವಾರು ಹಂತಗಳಲ್ಲಿ ಸಾಗುತ್ತದೆ. ಸಾಮಾನ್ಯವಾಗಿ, ಇದು ಸ್ನೇಹದಿಂದ ಪ್ರಾರಂಭವಾಗುತ್ತದೆ. ಸ್ನೇಹದ ಸಂದರ್ಭದಲ್ಲಿ, ಇಬ್ಬರೂ ಒಂದಿಬ್ಬರನ್ನೂ ಚೆನ್ನಾಗಿ ಅರಿತುಕೊಳ್ಳುತ್ತಾರೆ. ಹಂತಹಂತವಾಗಿ, ತಮ್ಮ ಆಸಕ್ತಿಗಳು, ಅಭಿರುಚಿಗಳು, ಹಾಗೂ ಜೀವನದ ದೃಷ್ಟಿಕೋಣಗಳು ಹಂಚಿಕೊಳ್ಳುತ್ತಾರೆ. ಅರ್ಥಪೂರ್ಣ ಸಂಭಾಷಣೆಗಳು, ಒಟ್ಟಿಗೆ ಕಳೆಯುವ ಸಮಯ, ಒಬ್ಬರಿಗೊಬ್ಬರು ನೆರವಾಗುವ ಕೆಲಸಗಳು ಹಾಗೂ ತಮ್ಮ ಭಾವನೆಗಳನ್ನು ಹಂಚಿಕೊಳ್ಳುವ ಮೂಲಕ, ಈ ಸ್ನೇಹ ಒಂದು ಆಕರ್ಷಣೆಯ ಹಂತಕ್ಕೆ ತಲುಪುತ್ತದೆ. ಈ ಆಕರ್ಷಣೆ ಶಾರೀರಿಕ, ಮಾನಸಿಕ ಅಥವಾ ಭಾವನಾತ್ಮಕವಾಗಿರಬಹುದು. 

ಹಂತಹಂತವಾಗಿ, ಈ ಆಕರ್ಷಣೆ ಪ್ರೀತಿ ಎಂಬ ಶ್ರೇಣಿಗೆ ಏರಲು ಇದು ಸಮಯಕ್ಕೆ ಒಳಪಡುವುದು. ಇದರಲ್ಲಿ ವೃತ್ತಿ ಜೀವನದ ಶ್ರದ್ಧೆ, ಭವಿಷ್ಯದ ಕನಸುಗಳು, ಹಾಗೂ ಪರಸ್ಪರ ಗೌರವ ಮುಖ್ಯಪಾತ್ರ ವಹಿಸುತ್ತವೆ. ಪ್ರೀತಿಯ ಸಂಬಂಧವು ತಾಳ್ಮೆ, ನಂಬಿಕೆ, ಮತ್ತು ಭರವಸೆ ಮೇಲೆ ಆಧಾರಿತವಾಗಿರುತ್ತದೆ. ಸಂಗಾತಿಯ ಭಾವನೆಗಳನ್ನು ಗೌರವಿಸುವುದು, ಅವರೊಂದಿಗೆ ಕಾಲ ಕಳೆಯುವ ಆಸಕ್ತಿ, ಮತ್ತು ಅವರ ಸುಖ-ದುಃಖದಲ್ಲಿ ಭಾಗವಹಿಸುವ ನಿರೀಕ್ಷೆ ಇದು ಪ್ರೀತಿಯ ಸಂಬಂಧದ ಮುಖ್ಯ ಅಂಗವಾಗಿದೆ. ಆದರೆ ನೀವು ಎಷ್ಟೆಲ್ಲಾ ತಲೆಯಲ್ಲಿ ಇಟ್ಟುಕೊಂಡು ಈ ಮೂರು ತಪ್ಪುಗಳನ್ನು ನೀವು ಮಾಡುತ್ತಾ ಹೋದಾಗ ನಿಮ್ಮ ಪ್ರೀತಿಯಲ್ಲಿ ನೀವೇ ಮೋಸ ಹೋಗಬೇಕಾಗುತ್ತದೆ. ಆ ಮೂರು ತಪ್ಪುಗಳು ಯಾವುವೆಂದು ತಿಳಿಯಲು ಮುಂದಿನ ಸಾಲುಗಳನ್ನು ಓದಿ. 

ಪ್ರೀತಿಯಲ್ಲಿ ಬಿದ್ದಾಗ ಹೆಚ್ಚಾಗಿ ಎಲ್ಲದಕ್ಕೂ ಒಪ್ಪಿಕೊಳ್ಳುತ್ತಾ ಹೋಗಬಾರದು ಹೀಗೆ ನೀವು ಮಾಡಿದಾಗ ನಿಮ್ಮ ಪ್ರೀತಿಯಲ್ಲಿ ಹಾಗೂ ನಿಮ್ಮ ನಿರ್ಧಾರದಲ್ಲಿ ಅವರ ಬಳಿ ಬೆಲೆಯೇ ಇಲ್ಲದಂತೆ ಆಗುತ್ತದೆ. ಅವರನ್ನು ಕಾಡಿಸಿದಾಗಲೇ  ಅವರಿಗೆ ನಿಮ್ಮ ಬೆಲೆ ಹಾಗೂ ಕೆಲವೊಂದು ವಿಚಾರಗಳಿಗೆ ಕಟ್ಟು ಪಾಡುಗಳನ್ನು ಹಾಕಿಕೊಳ್ಳಲು ಅವರು ಕಲಿಯುತ್ತಾರೆ. ಇನ್ನೂ ನೀವು ಹೇಳಿದ್ದೆ ವೇದ ವಾಕ್ಯ ಎಂದು ಯಾವತ್ತೂ ಅವರೊಂದಿಗೆ ಹೇಳಬಾರದು. ಏಕೆಂದರೆ ಆ ರೀತಿ ಹೇಳಿದಾಗ ಅವರು ನಿಮ್ಮನ್ನು ತಮಗೆ ಬೇಕಾದಂತೆ ನಡೆಸಿಕೊಳ್ಳಲು ಇಚ್ಛಿಸಿ ನಿಮಗೆ ಮೋಸ ಮಾಡುವ ಆಲೋಚನೆ ಕೊಡ ಮಾಡುತ್ತಾರೆ. ಕೊನೆಯದಾಗಿ ನಿಮ್ಮ ವೀಕ್ನೆಸ್ ಅವರಿಗೆ ಬಿಟ್ಟುಕೊಡಬಾರದು ಅವರು ಎಷ್ಟೇ ನಂಬಿಕೆ ಗಳಿಸಿದರು ಕೊಡ ನಿಮ್ಮ ಕೆಲವೊಂದು ವಿಚಾರಗಳು ಗುಟ್ಟಾಗಿಯೇ ಇಡಬೇಕು. ನೀವು ಹೇಳಿಕೊಂಡದ್ದು ಕೊನೆಯದಾಗಿ ನಿಮಗೆ ಮುಳ್ಳಾಗಬಹುದು.