ಪ್ರೇಯಸಿಗಾಗಿ ಹೆಂಡ್ತಿಗೆ ವಿಷದ ಇಂಜೆಕ್ಷನ್ ನೀಡಿದ ಪತಿ..! ಹೆಂಡತಿ ಮಾತಾಡಿದ್ದ ಆಡಿಯೋ ಕಾಲ್ ವೈರಲ್

ಪ್ರೇಯಸಿಗಾಗಿ ಹೆಂಡ್ತಿಗೆ ವಿಷದ ಇಂಜೆಕ್ಷನ್ ನೀಡಿದ ಪತಿ..! ಹೆಂಡತಿ ಮಾತಾಡಿದ್ದ ಆಡಿಯೋ ಕಾಲ್ ವೈರಲ್

ನಮ್ಮ ಸಮಾಜ ಎತ್ತ ಸಾಗುತ್ತಿದೆ ಎಂದು ಹೇಳಲು ನಿಜಕ್ಕೂ ಕಷ್ಟಕರವಾದ ವಿಚಾರವಾಗಿದೆ. ಇತ್ತೀಚಿನ ದಿನಗಳಲ್ಲಿ ನಾವು ಸಂಬಂಧಗಳಲ್ಲಿ ಯಾವ ಅರ್ಥವನ್ನು ಕೂಡ ಕೆಲವರಿಂದ ನಂಬಲು ಆಗುತ್ತಿಲ್ಲ.. ಸಂಬಂಧಗಳ ಮೇಲೆ ಕೆಲವರಿಗೆ ಯಾವ ನಂಬಿಕೆಯೇ ಇಲ್ಲದಂತಾಗಿದೆ. ಇಂತಹ ಘಟನೆಗಳು ನಡೆದಾಗ ನಿಜಕ್ಕೂ ಇದರಿಂದ ಒಂದು ಅಂಶವನ್ನು ಎಲ್ಲರೂ ಕೂಡ ಅರಿಯಲೇಬೇಕು. ಹೊಸತನದ ಪಾಠ ಜೊತೆಗೆ ಇಂತಹ ಘಟನೆಗಳು ಎಚ್ಚರಿಕೆಯ ಗಂಟೆ ಎನ್ನಬಹುದು. ಈ ರೀತಿಯ ಕೆಲ ಘಟನೆಗಳು ಎಲ್ಲರನ್ನು ಎಚ್ಚರಿಸುತ್ತಿವೆ ಕೂಡ ಎಂದು ಹೇಳಬಹುದು..

ಈ ಸಮಾಜದಲ್ಲಿ ಇಂತಹ ಹೀನ ಸ್ಥಿತಿಯ ಕೆಟ್ಟ ಮನ ಸ್ಥಿತಿಯ ಮನುಷ್ಯರು ಕೂಡ ಇದ್ದಾರಾ ದೇವರೇ ಎಂದು ಅನಿಸುತ್ತದೆ. ಯಾವುದೋ ಒಂದು ಐದು ನಿಮಿಷದ ಸುಖಕ್ಕಾಗಿ ಅಥವಾ ಇನ್ಯಾವುದೋ ಒಂದು ಅತೀವ ಮೋಹಕ್ಕಾಗಿ ಸ್ವಂತದವರನ್ನೆ ಮುಗಿಸುತ್ತಾರೆ ಎಂದರೆ ಏನು ಹೇಳಬೇಕು. ತನ್ನ ಅರ್ಧಾಂಗಿ ಆಗಿ ತನ್ನ ಇಡೀ ಜೀವನವನ್ನು ಕಳೆಯಲು ಬಂದಿರುವ ತನ್ನ ಹೆಂಡತಿ ಜೀವವನ್ನೇ ಇಲ್ಲೊಬ್ಬ ತೆಗೆದು ಬಿಟ್ಟಿದ್ದಾನೆ. ಹೌದು ಈ ಘಟನೆ ನಡೆದದ್ದು ಎಲ್ಲಿ..? ಏನಾಗಿತ್ತು ಎಲ್ಲವನ್ನು ಕೂಡ ಈ ಲೇಖನದಲ್ಲಿ ನೋಡೋಣ.

ಚಿಕ್ಕಮಂಗಳೂರು ಜಿಲ್ಲೆಯ ಮೂಡಿಗೆರೆ ದೇವವೃಂದ ಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಶ್ವೇತಾ ಎನ್ನುವ 31ರ ಮಹಿಳೆ ಇದೀಗ ತನ್ನ ಗಂಡನ ಮೋಸದ ಜಾಲಕ್ಕೆ ಸಿಲುಕಿ ಜೀವವನ್ನ ಬಿಟ್ಟಿದ್ದಾಳೆ. ಹೌದು, ಶ್ವೇತಾ ಮತ್ತು ದರ್ಶನ್ ಒಟ್ಟಿಗೆ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದವರು. ಐದು ವರ್ಷದ ಹಿಂದೆ ಇವರ ನಡುವೆ ಪ್ರೀತಿ ಹುಟ್ಟಿದೆ. ಶ್ವೇತಾ ಆರಂಭದಲ್ಲಿ ಪ್ರೀತಿಯನ್ನು ಒಪ್ಪಿಕೊಂಡಿಲ್ಲ. ದರ್ಶನ್ ಕಾಡಿಬೇಡಿ ಕಾಲಿಗೆ ಬಿದ್ದು ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ, ಕಣ್ಣೀರು ಹಾಕಿಸಿದಂತೆ ಜೋಪಾನ ಮಾಡುತ್ತೇನೆ ಎಂದು ಆಕೆಯ ಪ್ರೀತಿಯ ಪಡೆದು ಮದುವೆ ಆಗಿರುತ್ತಾನೆ. ಅದು ಮನೆಯವರ ವಿರೋಧದ ನಡುವೆ..ಮದುವೆ ಆದಂತಹ ಈ ಜೋಡಿ ಮತ್ತೆ ಮನೆಯವರನ್ನ ಒಪ್ಪಿಸಿ ಮತ್ತೊಮ್ಮೆ ಮದುವೆ ಆಗಿರುತ್ತದೆ. .

ಈ ಜೋಡಿಗೆ ನಾಲ್ಕು ವರ್ಷದ ಒಂದು ಮುದ್ದಾದ ಮಗು ಕೂಡ ಇರುತ್ತದೆ..ಆರಂಭದಲ್ಲಿ ಈ ದಂಪತಿಗಳ ಜೀವನ ತುಂಬಾನೇ ಚೆನ್ನಾಗಿರುತ್ತದೆ ಗೆಳೆಯರೇ. ಹೌದು ತುಂಬಾ ಕಷ್ಟಪಟ್ಟು ಬೆಳೆದು ಬಂಗಲೇ, ಕಾರು, ಎಲ್ಲವನ್ನು ಕೂಡ ಕೊಂಡುಕೊಂಡು ಖುಷಿಯಾಗಿ ಇರುತ್ತಾರೆ.. ಆದರೆ ಅಶ್ವಿನಿ ಎನ್ನುವ ದರ್ಶನ್ ಗೆಳತಿ ಎಂಟ್ರಿಕೊಟ್ಟಾದ ಮೇಲೆ ನೋಡಿ ಶ್ವೇತಾ ಕುಟುಂಬ ಅಲ್ಲೋಲ ಕಲ್ಲೋಲ ಆಗಿದ್ದು. ಹೌದು ತನ್ನ ಗೆಳತಿ ಅಶ್ವಿನಿ ಜೊತೆ ಈ ದರ್ಶನ್ ಸಂಬಂಧ ಹೊಂದಿರುತ್ತಾನೆ, ಆಕೆ ಕೂಡ ಪ್ರೀತಿಸಿ ಮದುವೆಯಾಗಿ ಗಂಡನನ್ನು ಬಿಟ್ಟಿರುತ್ತಾಳೆ. ಹಾಗಿದ್ದರೂ ಒಂದು ಹೆಣ್ಣಿನ ಜೀವನವನ್ನು ಆಕೆ ಅರ್ಥ ಮಾಡಿಕೊಳ್ಳುವುದಿಲ್ಲ, ಇವರ ಕಳ್ಳಾಟ ಶ್ವೇತಾ ಅವರಿಗೆ ಗೊತ್ತಾಗಿದ್ದು ಗಂಡನಿಗೂ ಮತ್ತು ಆಕೆಗೂ ವಾರ್ನಿಂಗ್ ನೀಡಿ ಇದನ್ನ ಮಾಡಬೇಡಿ ಪ್ಲೀಸ್ ಎಂದು ಕೇಳಿರುತ್ತಾರೆ. ಆದ್ರೆ ದರ್ಶನ್ ಹಾಗೂ ಆ ಗೆಳತಿ ಒಟ್ಟಿಗೆ ಚೆನ್ನಾಗಿರಬೇಕು ಎಂದು ಪ್ಲಾನ್ ಮಾಡಿ ಶ್ವೇತಾರನ್ನು ಹೇಗೆ ಮುಗಿಸುತ್ತಾರೆ ಗೊತ್ತಾ..? ಈ ವಿಡಿಯೋ ನೋಡಿ.. ಜೊತೆಗೆ ತನ್ನ ಗಂಡನನ್ನು ಬಿಟ್ಟುಬಿಡು ಎಂದು ಶ್ವೇತಾ ಅವರು ಅಶ್ವಿನಿ ಬಳಿ ಕೇಳಿಕೊಂಡ ಆಡಿಯೋ ರೆಕಾರ್ಡ್ ಕೂಡ ಇಲ್ಲಿದೆ ನೋಡಿ.. ಕಣ್ಣೀರು ತರಿಸುವಂತಿದೆ. ಈ ಘಟನೆ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ, ಇದೀಗ ಜೈಲು ಸೇರಿರುವ ದರ್ಶನ್ ಬಗ್ಗೆಯೂ ನಿಮ್ಮ ಅಭಿಪ್ರಾಯ ಹೇಳಿ, ಧನ್ಯವಾದಗಳು

( video credit : Third Eye )