ಹೆಂಡತಿನ ಹೇಗೆ ಸುಖ ಪಡಿಸೋದು? ಗಂಡಸರು ಮಾತ್ರ ನೋಡಿ

ಹೆಂಡತಿನ ಹೇಗೆ ಸುಖ ಪಡಿಸೋದು? ಗಂಡಸರು ಮಾತ್ರ ನೋಡಿ

ತುಂಬಾ ಆಸಕ್ತಿದಾಯಕ ಪ್ರಶ್ನೆ Boss.. ಕೆಲವು ಓದುಗರಿಗಂತೂ ಇದರ ಉತ್ತರ ನೆನೆಸಿಕೊಂಡು ಮೈ ಝುಂ ಎನೀಸಿರಬಹುದು..ಏಕೆಂದರೆ ಅವರು ನೇರವಾಗಿ ಬೆಡ್ ರೂಂ ನಲ್ಲಿಯೇ ಇದರ ಉತ್ತರ ಅಪೇಕ್ಷಿಸುತ್ತಾರೆ.. ಅದು ತಪ್ಪಲ್ಲ ಸಹಜವಾದ ಬೆಳವಣಿಗೆ ಹಾಗೂ ಅತೀ ಮುಖ್ಯವಾದ ಕರ್ತವ್ಯವಾಗಿದೆ..ಆದರೆ ನನ್ನ ಪ್ರಕಾರ ಹೆಂಡತಿಯನ್ನು ದೈಹಿಕವಾಗಿ ಮಾತ್ರವಲ್ಲ ಮಾನಸಿಕವಾಗಿಯೂ ಅವಳ ಜೀವನದ ಇತರ ನಡೆಗಳಲ್ಲಿಯು ಸುಖ ಪಡಿಸಬೇಕಾದುದು ಪ್ರತಿಯೊಬ್ಬ ಗಂಡನ ಕರ್ತವ್ಯವಾಗಿದೆ.

ಸುಖ ಎಂಬ ಈ ಶಬ್ದಕ್ಕೆ ಸಮಾನಾರ್ಥಕವಾಗಿ ಸಂತೋಷ, ಆನಂದ, ಸೌಭಾಗ್ಯ, ಹರ್ಷ, ಆನಂದ ಸ್ಥಿತಿ, ಹೀಗೆ ಹಲವಾರು ರೀತಿಯಲ್ಲಿ ಅರ್ಥೈಸಲಾಗಿದೆ..ಅಂದರೆ ಒಬ್ಬ ತನ್ನ ಹೆಂಡತಿಯನ್ನು ಆನಂದ, ಹರ್ಷ, ಸಂತೋಷ ಪಡಿಸುವ ಸೌಭಾಗ್ಯವನ್ನು ಆ ಹೆಂಡತಿಯು ಪಡೆದಿರಬೇಕು..

ನೀವು ಕೈ ಹಿಡಿದ ಹೆಂಡತಿ ಒಬ್ಬ ವ್ಯಕ್ತಿಯಾಗಿದ್ದಾಳೆ. ಅವಳಿಗೆ ತನ್ನದೇ ಆದ ಘನತೆ,. ಗೌರವವಿದೆ ಎಂಬುದನ್ನು ಮನಗಂಡು ನೀವು ನಿಮ್ಮ ಕುಟುಂಬದಲ್ಲಿ, ಸಮಾಜದಲ್ಲಿ ಅವಳನ್ನು ಗೌರವಿಸಿ ಆಗ ಖಂಡಿತ ನಿಮ್ಮ ಹೆಂಡತಿ ಮಾನಸಿಕವಾಗಿ ಸುಖಪಟ್ಟಿರುತ್ತಾಳೆ.

ಕುಟುಂಬದಲ್ಲಿ ನಿಮ್ಮ ಹೆಂಡತಿಗೆ ಒಂದು ಮುಕ್ತವಾದ, ನಿರ್ಭೀತ ವಾತಾವರಣ ಸೃಷ್ಟಿಸಿ ಕೊಡುವುದರಿಂದ ಆಕೆಯು ಸದಾ ಆನಂದದಿಂದ ನಿಮ್ಮನ್ನು ಪ್ರೀತಿಸಲು ಕಲಿಯುತ್ತಾಳೆ..ಮಕ್ಕಳು, ಮರಿ, ದೈನಂದಿನ ಕೆಲಸ ಕಾರ್ಯಗಳ ಒತ್ತಡವನ್ನು ಅತಿಯಾಗಿ ಹೆಂಡತಿಯ ಮೇಲೆ ಹಾಕದೆ, ಸದಾ ನಾನು ನಿನ್ನ ಜೊತೆಗಿದ್ದೇನೆ ಎಂಬ ಭಾವನೆ ನೀವು ಅವಳಿಗೆ ಸಹಕಾರ ನೀಡುವುದರ ಮೂಲಕ ಮನವರಿಕೆ ಮಾಡಿದಾಗ ಹೆಂಡತಿಯ ಆಂತರಿಕ ಸುಖ ವರ್ಣಿಸಲು ಮಾತುಗಳು ಇಲ್ಲ.

ಹೆಂಡತಿಗೆ ಗಂಡ ಆರ್ಥಿಕವಾಗಿ ಉತ್ತಮವಾಗಿ ಇದ್ದು ಇತರರ ಮುಂದೆ ಕೈಚಾಚದೆ , ಕಷ್ಟ ಪಟ್ಟು ದುಡಿದು ತನ್ನ ಕುಟುಂಬವನ್ನು ಸಲಹುವಾಗ ಆಕೆಯು ಖಂಡಿತವಾಗಿ ಅತೀವ ಮಾನಸಿಕ ಸುಖವನ್ನು ನೆಮ್ಮದಿಯನ್ನು ಅನುಭವಿಸುತ್ತಾಳೆ..

ಹೆಂಡತಿಗೆ ಇಷ್ಟವಿಲ್ಲದ ಕುಡುಕತನ, ಮಾದಕ ವ್ಯಸನ ಇವುಗಳನ್ನು ಗಂಡನು ತ್ಯಜಿಸಿದರೆ ಆಕೆಯು ಖಂಡಿತವಾಗಿ ತನ್ನ ಅಂತರಂಗದಲ್ಲಿ ಹರ್ಷಿಸುತ್ತಾಳೆ.

ಹೆಂಡತಿಯ ಆರೋಗ್ಯದಲ್ಲಿ ಏರುಪೇರು ಆಗಿರುವಾಗ ಗಂಡನಾದ ನೀವು ಅವಳಿಗೆ ಬೇಸರಿಸದೆ ಅವಳ ಆರೋಗ್ಯ ವಿಚಾರಿಸಿ , ಆರೈಕೆ ಮಾಡುವಾಗ ಕೂಡ ಆಕೆಯನ್ನು ಖುಷಿ ಪಡಿಸಬಹುದು..

ಇಂತಹ ಚಿಕ್ಕ ಚಿಕ್ಕ ವಿಚಾರಗಳಲ್ಲಿ ನಿಮ್ಮ ಹೆಂಡತಿಯನ್ನು ಮೊದಲು ನೀವು ಮಾನಸಿಕವಾಗಿ ಸುಖಪಡಿಸುವುದನ್ನು ತಿಳಿದುಕೊಂಡರೆ , ಆಕೆಯು ಎಲ್ಲಾ ರೀತಿಯಲ್ಲಿ ನಿಮಗೆ ಸಹಕರಿಸುವಳು..

ಆಗ ನಿಮಗೆ ದೈಹಿಕವಾಗಿ ಕೂಡ ಅವಳನ್ನು ಸುಖಪಡಿಸುವ ಕಾರ್ಯ ಕಷ್ಟವಾಗಲಾರದು..

ಇನ್ನು ದೈಹಿಕವಾಗಿ ಹೆಂಡತಿಯನ್ನು ಸುಖಪಡಿಸುವ ವಿಚಾರ ನಿಮ್ಮ ವೈಯಕ್ತಿಕ ವಿಷಯವಾಗಿದೆ. ಅದು ನೀವು ಗಂಡ ಹೆಂಡತಿ ಇಬ್ಬರೂ ಕುಳಿತು ನಿಮ್ಮ ಅಭಿರುಚಿ, ನಿಮ್ಮ ಬೇಕು ಬೇಡ ಗಳನ್ನೂ ಯಾವುದೇ ಸಂಕೋಚವಿಲ್ಲದೆ ಮುಕ್ತವಾಗಿ ಒಬ್ಬರಿಗೊಬ್ಬರು ವ್ಯಕ್ತಪಡಿಸಿಕೊಂಡರೆ ತುಂಬಾ ಪರಿಣಾಮಕಾರಿಯಾಗಿ ಪ್ರತಿ ಕ್ಷಣವನ್ನು ಅನುಭವಿಸಿ ಕೊಳ್ಳಬಹುದು.

ಇದು ಕೂಡ ಒಂದು ಕಲೆಯೇ..ಅದಕ್ಕೆ ನಿಪುಣತೆ, ತಾಳ್ಮೆ , ವೈವಿಧ್ಯತೆ ಅವಶ್ಯಕ..

ಬಂಗಾರದ ತಟ್ಟೆಯಲ್ಲಿ ಮೃಷ್ಟಾನ್ನ ಭೋಜನವಿದ್ದಾಗ ಗಬಗಬನೆ ಮುಕ್ಕಿದರೆ ಅದರಲ್ಲಿ ಯಾವುದೇ ಸುಖವಿಲ್ಲ ,

ಆದರೆ ತಟ್ಟೆಯಲ್ಲಿ ಇರುವ ಎಲ್ಲಾ ಖಾದ್ಯಗಳ ವರ್ಣ ರೂಪ ಹೇಗೆ ಮೊದಲಿಗೆ ಕಣ್ತುಂಬಿ ಕೊಳ್ಳುತ್ತಿರೋ, ಆಮೇಲೆ ಒಂದೊಂದಾಗಿ ಖಾದ್ಯಗಳ ಪರಿಮಳ ಆಗ್ರಣಿಸಿಕೊಂಡು, ಆಮೇಲೆ ಒಂದೊಂದಾಗಿ ಸಿಹಿ ಹೋಳಿಗೆ, ಉಪ್ಪಿನಕಾಯಿ ಒಮ್ಮೆ, ಆಮೇಲೆ ಪಲ್ಯ, ಆಮೇಲೆ ಗೊಜ್ಜು, ಆಮೇಲೆ ಅನ್ನ ಸಾರು, ತದನಂತರ ಪಾಯಸ , ಹೀಗೆ ಒಂದೊಂದೇ ರುಚಿ ಸವಿಯುತ್ತ , ಭೋಜನವನ್ನು ಧೀರ್ಘ ಸಮಯದವರೆಗೆ ಆಸ್ವಾದಿಸುವ ಕಲೆ ಕೂಡ ತಿಳಿದಿರಬೇಕು..ಈ ಕಲೆ ಎಲ್ಲರಲ್ಲಿಯೂ ಇರುವುದಿಲ್ಲ..ಒಬ್ಬೊಬ್ಬರ ರೀತಿ ವಿಭಿನ್ನ ವಾಗಿರುತ್ತದೆ. ಎಲ್ಲದಕ್ಕಿಂತ ಗಂಡ ಹೆಂಡತಿಯರ ನಡುವಿನ ಹೊಂದಾಣಿಕೆ ಮುಖ್ಯ..