ನೀವು ಇಷ್ಟಪಡೋರನ್ನ ಅಟ್ರ್ಯಾಕ್ಟ್ ಮಾಡೋದು ಹೇಗೆ ಗೊತ್ತಾ..? ಈ ಸಲಹೆಗಳ ಒಮ್ಮೆ ಕೇಳಿ
![ನೀವು ಇಷ್ಟಪಡೋರನ್ನ ಅಟ್ರ್ಯಾಕ್ಟ್ ಮಾಡೋದು ಹೇಗೆ ಗೊತ್ತಾ..? ಈ ಸಲಹೆಗಳ ಒಮ್ಮೆ ಕೇಳಿ ನೀವು ಇಷ್ಟಪಡೋರನ್ನ ಅಟ್ರ್ಯಾಕ್ಟ್ ಮಾಡೋದು ಹೇಗೆ ಗೊತ್ತಾ..? ಈ ಸಲಹೆಗಳ ಒಮ್ಮೆ ಕೇಳಿ](/news_images/2023/09/girls-impress1694258165.jpg)
ಜೀವನದಲ್ಲಿ ಪ್ರತಿಯೊಂದು ವಿಷಯ ಮುಖ್ಯವೆ ಆಗಿರುತ್ತದೆ. ಹಾಗೆ ಪ್ರತಿಯೊಂದು ಹಂತ ಹಂತದ ಮದುವೆ ಪ್ರೀತಿ ಪ್ರೇಮ ಎಲ್ಲಾ ವಿಚಾರಗಳು ಕೂಡ ಅಷ್ಟೇ ಮುಖ್ಯ ಆಗಿರುತ್ತವೆ. ಹೌದು ಜೀವನದಲ್ಲಿ ಒಬ್ಬಂಟಿಯಾಗಿ ಇರಲು ಎಂದಿಗೂ ಕೂಡ ಇಷ್ಟ ಪಡಬೇಡಿ, ಯಾಕೆಂದರೆ ಸಮಯ ಎಂದಿಗೂ ಕೂಡ ಒಂದೇ ರೀತಿ ಇರುವುದಿಲ್ಲ, ನೀವು ನಿಮಗೆ ಅರಿವಿಲ್ಲದೆ ಕೆಲವೊಂದಿಷ್ಟು ತಪ್ಪು ನಿರ್ಧಾರಗಳು, ನಿಮ್ಮನ್ನು ಈ ಜೀವನ ಇಡೀ ನರಕಕ್ಕೆ ತಳ್ಳುವಂತೆ ಮಾಡುತ್ತವೆ..ಹೌದು ಜೀವನ ಅಂದರೆ ಹಾಗೇನೆ, ಒಂದು ಹುಡುಗಿಗೆ ಹುಡುಗ, ಒಂದು ಹುಡುಗನಿಗೆ ಹುಡುಗಿ ಸಂಗಾತಿ ಆಗಲೇಬೇಕು. ಅದು ಜಗತ್ ನಿಯಮ. ಅವರ ಕಷ್ಟ ಸುಖಗಳನ್ನು ಹೇಳಿಕೊಳ್ಳುವುದಕ್ಕಾದರೂ ಕೂಡ ಸಂಗಾತಿ ಬೇಕೇ ಬೇಕು.
ಸಂಗಾತಿ ಇಲ್ಲದಿದ್ದರೆ ಈ ಜೀವನಕ್ಕೆ ಅರ್ಥ ಇರುವುದಿಲ್ಲ ಎಂದು ಹೇಳಬಹುದು. ಹೌದು ನೀವು ಯಾರನ್ನಾದರೂ ತುಂಬಾ ಇಷ್ಟಪಡುತ್ತಿದ್ದರೆ, ಅವರು ನಿಮ್ಮನ್ನು ಇಷ್ಟ ಪಡದಿದ್ದರೆ, ನಿಮ್ಮ ಪ್ರೀತಿಯನ್ನು ಒಪ್ಪಿಕೊಳ್ಳದಿದ್ದರೆ, ನಿಮ್ಮ ವ್ಯಕ್ತತ್ವಕ್ಕೆ ಪ್ರೀತಿ ನೀಡದೆ ಇದ್ದರೆ, ಇಂದೆ ಈ ಕೆಲಸವನ್ನು ಮಾಡಿ, ಇಲ್ಲಿಯವರೆಗೂ ನೀವು ಸಾಕಷ್ಟು ಹರಸಾಹಸ ಪಟ್ಟಿತ್ತಿರುತ್ತೀರಿ, ಅವರನ್ನ ಒಲಿಸಿಕೊಳ್ಳಲು, ಆದರೆ ಇಂದಿನ ಈ ಕೆಲವು ಸಲಹೆಗಳು ನಿಮಗೆ ನಿಜಕ್ಕೂ ಉಪಯುಕ್ತ ಆಗಬಹುದು. ನೀವು ನಿಮ್ಮ ಇಷ್ಟದ ವ್ಯಕ್ತಿಯನ್ನು ಅಟ್ರಾಕ್ಟ್ ಮಾಡಲು ಮೊದಲು ನಿಮ್ಮ ಆಂತರಿಕ ದೇಹಕ್ಕೆ ಮರಿಯಾದೆ ಕೊಡಿ, ನಿಮ್ಮ ಆರೋಗ್ಯಕ್ಕೆ ಸಮಯ ನೀಡಿ, ದೇಹವನ್ನು ತುಂಬಾ ಚೆನ್ನಾಗಿ ಕಾಪಾಡಿಕೊಳ್ಳಿ, ಹೊರಗಡೆಯಿಂದ ನೋಡಲು ತುಂಬಾ ಸುಂದರವಾಗಿ ಕಾಣುತ್ತಾ, ಒಳ್ಳೆ ಬಟ್ಟೆಗಳನ್ನು ಹಾಕಿಕೊಳ್ಳಿ, ಒಳಗಡೆ ತುಂಬಾ ಒಳ್ಳೆಯ ಹೃದಯ ಮನಸ್ಸನ್ನು ಹೊಂದಿದ್ದರೆ ಸಾಕು ನಿಮ್ಮ ಸಂಗಾತಿ ನಿಮ್ಮನ್ನು ಇಷ್ಟಪಡುತ್ತಾರೆ.
ಹಾಗೆ ಪದೇ ಪದೇ ಅವರಿಗೆ ಫೋನ್ ಮಾಡುವುದು, ಮೆಸೇಜ್ ಮಾಡುವುದು, ಸಮಯ ಕೊಡುತ್ತಿಲ್ಲವೆಂದು ಅವರಿಗೆ ಟಾರ್ಚರ್ ನೀಡುವುದು, ಈ ರೀತಿ ಮಾಡಿದರೆ ಅ ಪ್ರೀತಿಯನ್ನ ಗೆಲ್ಲಲು ಎಂದಿಗೂ ಸಹ ಸಾಧ್ಯವಿಲ್ಲ. ಪ್ರೀತಿಯನ್ನು ಪ್ರೀತಿಯಿಂದಲೇ ಗೆಲ್ಲಬೇಕು, ಅದನ್ನು ಬಿಟ್ಟು ಅವರ ಮೇಲೆ ಒತ್ತಡ ಹೇರಿದರೆ ಪ್ರೀತಿ ಇಂದಿಗೂ ಕೂಡ ಹುಟ್ಟುವುದಿಲ್ಲವಂತೆ. ಅವರ ಬಳಿ ಹೋಗುವಾಗ ನಿಮ್ಮನ್ನು ನೀವು ಚೆನ್ನಾಗಿ ಅರ್ಥೈಸಿಕೊಳ್ಳಿ, ಮಿರರ್ ಮುಂದೆ ನಿಂತು ನಿಮ್ಮನ್ನ ನೀವೂ ನೋಡಿಕೊಳ್ಳಿ, ಚೆನ್ನಾಗಿ ಬಟ್ಟೆ ಹಾಕಿಕೊಳ್ಳಿ, ಆಗ ಅವರಿಗೆ ನೀವು ಚೆನ್ನಾಗಿ ಕಾಣಿಸಿದರೆ ಮಾತ್ರ, ಅವರು ನನ್ನನ್ನು ಕೂಡ ಚೆನ್ನಾಗಿ ನೋಡಿಕೊಳ್ಳುತ್ತಾನೆ ಇವನು ಎನ್ನುವ ಭಾವನೆ ಬಂದೆ ಬರುತ್ತದೆ ಎಂದು ಸಂಶೋಧನೆಯಲ್ಲಿ ತಿಳಿದಿದೆ.
ಹೌದು ಪದೇ ಪದೇ ಫೋನ್ ಮೆಸೇಜ್ ನಿಮ್ಮಿಂದಲೇ ಹೋಗಬಾರದು, ಎರಡು ಮೂರು ದಿನ ಬಿಡಿ ಅವರು ಕೂಡ ಆ ಪ್ರೀತಿಯನ್ನ ಹೊಂದಿರಬೇಕು, ಒತ್ತಾಯದಿಂದ ಪ್ರೀತಿ ಹುಟ್ಟದು, ಹಾಗಾಗಿ ನೀವು ಪದೇ ಪದೇ ಫೋನ್ ಮಾಡಿದರೆ ನಿಮ್ಮ ಎನರ್ಜಿಯನ್ನು, ನಿಮ್ಮ ತನವನ್ನ ನೀವೇ ವೇಸ್ಟ್ ಮಾಡಿಕೊಂಡಂತೆ. ಹೀಗೆ ಮಾಡಿದರೆ ಆ ವ್ಯಕ್ತಿಯನ್ನು ನೀವು ಪಡೆದುಕೊಳ್ಳಲು ವಿಫಲರಾಗುತ್ತಾ ಹೋಗುತ್ತೀರಿ ಎಂದರ್ಥ. ಅದನ್ನು ಬಿಟ್ಟು ಅವರು ಕೂಡ ನಿಮಗೆ ಫೋನ್ ಮಾಡಬಹುದಾ ಎಂದು ಎದುರು ನೋಡಿ, ಕಾಯಿರಿ, ಒಬ್ಬ ಮನುಷ್ಯನಿಗೆ ಒಬ್ಬ ವ್ಯಕ್ತಿ ಇಂಪಾರ್ಟೆಂಟ್ ಆಗಿದ್ದೆ ಆದಲ್ಲಿ ಅದೆಂತಹ ಕೆಲಸ ಇದ್ದರೂ ನಿಮಗೆ ಸಮಯ ಕೊಟ್ಟೆ ಕೊಡುತ್ತಾರೆ. ಈ ಜೀವನದಲ್ಲಿ ನೀವು ಸದಾ ಬಿಜಿಯಾಗಿದ್ದೀರಿ, ಕೆಲಸ ಮಾಡುತ್ತಿದ್ದೀರಿ ಎಂಬ ಭಾವನೆ ಅವರಿಗೆ ಬರಬೇಕು, ಅಂದರೆ ನೀವು ಆ ರೀತಿ ನಟನೆ ಮಾಡುವುದು ಅಲ್ಲ, ಬದಲಿಗೆ ನಿಮ್ಮ ಇಷ್ಟದ ಕೆಲಸದಲ್ಲಿ ತೊಡಗಿರಿ ಎಂದರ್ಥ.
ಆಗ ನಿಮ್ಮ ಇಷ್ಟದ ವ್ಯಕ್ತಿ ಅಥವಾ ನಿಮ್ಮನ್ನು ನೋಡಿ ನಿಮ್ಮ ಸಂಗಾತಿ ಆಗಬೇಕಾಗಿರುವ ಅವಳು ನಿಮ್ಮನ್ನು ಎಂದಿಗೂ ಬಿಟ್ಟು ಕೊಡುವುದಿಲ್ಲ. ಬಿಜಿಯಾಗಿರುವುದು ಪದೇ ಪದೇ ಫೋನ್ ಮಾಡದೇ ಇರುವುದು, ಜೊತೆಗೆ ಒಳ್ಳೆಯ ಬಟ್ಟೆಯನ್ನು ಹಾಕಿಕೊಳ್ಳುವುದು, ಒಳಗೆನಿಂದ ಆಂತರಿಕವಾಗಿ ಒಳ್ಳೆಯ ಮನಸ್ಥಿತಿ ಹೊಂದಿದ್ದಲ್ಲಿ ನಿಮ್ಮ ಇಷ್ಟದ ವ್ಯಕ್ತಿ ನಿಮ್ಮಿಂದ ಅಟ್ರಾಕ್ಟ್ ಆಗುತ್ತಾರೆ ಎಂದು ಹೇಳಬಹುದು. ಹಾಗೆ ನಿಮ್ಮನ್ನು ಸಾಯುವವರೆಗೂ ಇಷ್ಟಪಡುತ್ತಾರೆ ಎಂದು ಈ ಲೇಖನದ ಮೂಲಕ ನಾವು ಹೇಳುತ್ತಿದ್ದೇವೆ. ಈ ಮಾಹಿತಿ ಇಷ್ಟವಾದರೆ ತಪ್ಪದೆ ಶೇರ್ ಮಾಡಿ ಮತ್ತು ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು.