ನಿಮ್ಮ ಗಂಡನನ್ನು ಹತೋಟಿಗೆ ತರುವುದು ಹೇಗೆ? ಮಹಿಳೆಯರು ಮಾತ್ರ ನೋಡಿ

ನಿಮ್ಮ ಗಂಡನನ್ನು ಹತೋಟಿಗೆ ತರುವುದು ಹೇಗೆ? ಮಹಿಳೆಯರು ಮಾತ್ರ ನೋಡಿ

ನೀವು ತಮಾಷೆಗೆ ಹೀಗೆ ಪ್ರಶ್ನೆ ಮಾಡುತ್ತಿದ್ದೀರಾ ಗೊತ್ತಿಲ್ಲ.ಹಾಗೊಂದು ವೇಳೆ ನಿಜವಾಗಿಯೂ ಆ ಮನಃಸ್ಥಿತಿ ನಿಮ್ಮದಾಗಿದೆಯೇ?, ಹಾಗೇಕೆ ನಿಮ್ಮ ನಲ್ಲನನ್ನು, ಹತೋಟಿಗೆ ತರಲು ಆಶಿಸುವಿರಿ?ಅದೇನು ಪ್ರಾಣಿಯೇ? ಒಂದು ವೇಳೆ ಅವರು ದಾರಿ ತಪ್ಪಿದ್ದರೆ ಅಥವಾ ತಪ್ಪುತ್ತಿದ್ದರೆ ಅವರನ್ನು ಸರಿದಾರಿಗೆ ತರುವುದು ನಿಮ್ಮ ಪ್ರೀತಿ ವಿಶ್ವಾಸದಿಂದ.ತಣ್ಣಗೆ ಕುಳಿತು ನಿಮ್ಮನ್ನು ನೀವು ಪ್ರಶ್ನಿಸಿಕೊಳ್ಳಿ.

ನೀವು ಅವರ ಜೊತೆಗೆ ಹೊಂದಿಕೊಂಡಿದ್ದೀರಾ?ಅವರ ಬೇಕು ಬೇಡಗಳನ್ನು ಗಮನಿಸುತ್ತಿದ್ದೀರಾ? ನೀವು ಗೃಹಿಣಿಯಾಗಿದ್ದರೆ ಅವರು ಹೊರಗಿನಿಂದ ಬಂದ ಕೂಡಲೇ ನಗು ನಗುತ್ತಾ ಸ್ವಾಗತಿಸುತ್ತೀರಾ? ನಿಮ್ಮ ಕಡೆಯಿಂದ ಸಣ್ಣ ಪುಟ್ಟ ತಪ್ಪುಗಳಾದಾಗ ವಾದ ಮಾಡದೇ ಅವರಲ್ಲಿ ಸಾರೀ ಹೇಳುತ್ತೀರಾ? ನಿಮಗಿಂತ ಮೇಲ್ಮಟ್ಟದವರೊಡನೆ ಹೋಲಿಸಿಕೊಳ್ಳದೆ ಇರುವುದರಲ್ಲೇ ತೃಪ್ತರಾಗುತ್ತೀರಾ? ಅವರಲ್ಲಿ ನಂಬಿಕೆ ವಿಶ್ವಾಸವನ್ನು ಇಟ್ಟುಕೊಂಡಿದ್ದೀರಾ? 

ಮತ್ತು ಅದನ್ನು ಅವರೊಂದಿಗೆ ಪ್ರಕಟಪಡಿಸುತ್ತೀರಾ? ನಿಮ್ಮ ಪ್ರೀತಿಯನ್ನು ಅವರೊಂದಿಗೆ ಮಾತು ಮತ್ತು ವರ್ತನೆಯಲ್ಲಿ ತೋರಿಸುತ್ತಿರುವ?ಅವರ ಸಂಬಂಧಿಕರನ್ನು ಗೌರವಿಸುತ್ತೀರಾ?ಅವರ ಸ್ನೇಹಿತರೊಂದಿಗೆ ಹಿತಮಿತವಾಗಿ, ಸಹಜವಾಗಿ, ಸೌಮ್ಯವಾಗಿ, ಸಭ್ಯತೆಯಿಂದ ನಡೆದುಕೊಳ್ಳುತ್ತೀರಾ? 
ಮೇಲಿನ ಪ್ರಶ್ನೆಗಳಿಗೆ ನಿಮ್ಮ ಉತ್ತರ ಇಲ್ಲ 
ಎಂದಾದರೆ ಮೊದಲು ನಿಮ್ಮನ್ನು ನೀವು ಬದಲಿಸಿಕೊಳ್ಳಿ.ಒಂದು ವೇಳೆ ಉತ್ತರ ಹೌದು ಎಂದಾಗಿದ್ದು ಅವರದೇ ಎಲ್ಲಾ ತಪ್ಪುಗಳೆಂದು ನಿಮಗನಿಸಿದರೆ ತಾಳ್ಮೆಯಿಂದ ಮತ್ತು ಪ್ರೀತಿಯಿಂದ ಅವರೊಡನೆ ವರ್ತಿಸಿ.ಇಬ್ಬರೂ ಕುಳಿತುಕೊಂಡು ಮಾತನಾಡಿ ಸಮಸ್ಯೆ ಬಗೆ ಹರಿಸಿಕೊಳ್ಳಿ.ಪ್ರೀತಿಯಿಂದ ಅಸಾದ್ಯ ಎಂಬುದು ಯಾವುದೂ ಇಲ್ಲ.