ಕೊನೆಯ ಯುಗದಲ್ಲಿ ಇರುವವರಿಗೆ ಮತ್ತೊಂದು ಶಾಕ್ ಕೊಟ್ಟ ಪುರಾಣಗಳ ಭವಿಷ್ಯವಾಣಿ! ಅದೇನು ಗೊತ್ತಾ?

ಕೊನೆಯ ಯುಗದಲ್ಲಿ ಇರುವವರಿಗೆ ಮತ್ತೊಂದು ಶಾಕ್ ಕೊಟ್ಟ ಪುರಾಣಗಳ ಭವಿಷ್ಯವಾಣಿ! ಅದೇನು ಗೊತ್ತಾ?

ಹಿಂದೂ ಧರ್ಮದ ಪುರಾಣಗಳಲ್ಲಿ ಜಗತ್ತಿನ ಚಕ್ರವು ನಾಲ್ಕು ಯುಗಗಳಾಗಿ ವಿಭಜನೆಯಾಗಿರುತ್ತದೆ. ಅವುಗಳನ್ನು ಚತುರುಗ ಎಂದು ಕರೆಯುತ್ತಾರೆ. ಈ ನಾಲ್ಕು ಯುಗಗಳು ಕ್ರಮವಾಗಿ ಈಗಾಗಲೇ ತನ್ನ ಚಕ್ರವನ್ನು ಮುಗಿಸುತ್ತಾ ಬರುತ್ತಿದೆ. ಮೊದಲನೆಯ ಚಕ್ರವಾದ ಕೃತ ಯುಗವು (Satya Yuga)  ಇದು ಮೊಟ್ಟಮೊದಲ ಯುಗ. ಇದು ಸತ್ಯ ಮತ್ತು ಧರ್ಮದ ಯುಗವಾಗಿ ಪರಿಗಣಿಸಲಾಗುತ್ತದೆ. ಈ ಯುಗದಲ್ಲಿ ಜನರು ಸತ್ಯವಾದಿಗಳು, ಸದಾಚಾರಿಗಳು, ಧಾರ್ಮಿಕರು ಹಾಗೂ ಅತ್ಯಂತ ಸಮರ್ಥರು ಆಗಿದ್ದರಂತೆ. ಇನ್ನೂ ಈ ಯುಗವು 17,28,000ವರ್ಷಗಳಿಗೆ ಕೊನೆ ಗೊಂಡಿತಂತೆ.
ಈ ಯುಗದ ಅಂತ್ಯದ ನಂತರ ಬಂದ ಯುಗವೇ ತ್ರೇತಾ ಯುಗ (Treta Yuga) ಇದು ಎರಡನೆಯ ಯುಗ. ಈ ಯುಗದಲ್ಲಿ ಧರ್ಮದ ಸ್ಥಾಪನೆ ಸ್ವಲ್ಪ ಕುಸಿಯುತ್ತದೆ ಆದರೆ ಇನ್ನೂ ಉತ್ತಮವಾಗಿ ಉಳಿಯುತ್ತದೆ. ರಾಮಾಯಣದಲ್ಲಿ ಸತ್ಕತೆಗಳಾದ ರಾಮನ ಜನ್ಮ ಮತ್ತು ಆತನ ಕಾರ್ಯಗಳು ಈ ಯುಗದಲ್ಲಿ ನಡೆದವು ಎಂದು ಹೇಳಲಾಗಿದೆ.  

ಇನ್ನೂ ಎರಡನೇ  ಯುಗವು 12,96,000 ವರ್ಷಗಳ ನಂತರ ಅಂತ್ಯ ಆಗಲಿದೆ ಎಂದು ಹೇಳಲಾಗುತ್ತಿದೆ. ಅದಾದ ಬಳಿಕ ದ್ವಾಪರ ಯುಗ (Dvapara Yuga)  ಇದು ಮೂರನೆಯ ಯುಗ. ಈ ಯುಗದಲ್ಲಿ ಧರ್ಮದ ಸ್ಥಾಪನೆ ಮತ್ತಷ್ಟು ಕುಸಿಯುತ್ತದೆ. ಮಹಾಭಾರತದ ಕಥೆಯು ಈ ಯುಗದಲ್ಲಿ ನಡೆದದ್ದು. ಕೃಷ್ಣನ ಉಪದೇಶಗಳು ಮತ್ತು ಆತನ ಪಾತ್ರವು ಈ ಯುಗದಲ್ಲಿ ಮಹತ್ವಪೂರ್ಣವಾಗಿದೆ. 8,64,000 ಸಾವಿರ ವರ್ಷಗಳ ನಂತರ ಅಂತ್ಯ ಆಗಿದೆ ಎಂದು ಹೇಳಾಗುತ್ತುದೆ. ಇದಾದ ಬಳಿಕ ಅಂದರೆ ನಾವು ಈಗ ಜೀವಿಸುತ್ತಿರುವ ಯುಗವೆ ಕಲಿಯುಗ l. ಈ ಕಲಿ ಯುಗ (Kali Yuga)  ಇದು ನಾಲ್ಕನೆಯ ಮತ್ತು ಇಂದಿನ ಯುಗ ಆಗಿದ್ದು ಈ ಮೂರು ಯುಗಗಳಿಗಿಂತ್ ಹೆಚ್ಚು ವಿಭಿನ್ನತೆಯನ್ನು ಹೊಂದಿದೆ ಎಂದು ಹೇಳಬಹುದು . ಇದು ಪಾಪ ಮತ್ತು ಅಧರ್ಮದ ಯುಗವಾಗಿ ಪರಿಗಣಿಸಲಾಗುತ್ತದೆ. ಈ ಯುಗದಲ್ಲಿ ಧರ್ಮದ ಸ್ಥಾಪನೆ ಬಹಳ ಕುಸಿಯುತ್ತದೆ, ಮಾನವ ಸಂಬಂಧಗಳು ಮತ್ತು ನೈತಿಕತೆ ಕುಸಿಯುತ್ತವೆ. 

ಈ ಯುಗಗಳು ಸೃಷ್ಟಿಯ ಚಕ್ರದ ನಿರಂತರ ಪ್ರಕ್ರಿಯೆಯಾಗಿ ಪರಿಗಣಿಸಲಾಗುತ್ತದೆ ಮತ್ತು ಕಾಲಚಕ್ರವು ಅನಂತವಾಗಿ ತಿರುಗುತ್ತಿರುತ್ತದೆ. ಇದಾದ ಬಳಿಕ ಜಗತ್ತು ಅಂತ್ಯ ಆಗಲಿದೆ ಎಂದು ಬಹಳಷ್ಟು ಜನ ತಿಳಿದಿದ್ದಾರೆ ಆದ್ರೆ ಕಾಲ ಚಕ್ರ ಮುಗಿಯಲಿದೆ ಎಂದು ಹೇಳಿದ್ದಾರೆ ಹೊರೆತು ಅಂತ್ಯ ಆಗಲಿದೆ ಎಂದು ಎಲ್ಲಿಯೂ ಉಲ್ಲೇಖಿಸಿಲ್ಲ. ಪುರಾಣಗಳ ಪ್ರಕಾರ ಈ ಯುಗವು 4,32,000ವರ್ಷಗಳ ನಂತರ ಮುಗಿಯುತ್ತದೆ ಎಂದು ಹೇಳಲಾಗುತ್ತಿದೆ. ಇನ್ನೂ ಪುರಾಣಗಳ ಪ್ರಕಾರ ಈ ಯುಗವು ಕಲಿ ಯುಗದ ಅಂತ್ಯವು ಬಹಳ ವಿಶೇಷ ಮತ್ತು ಮಹತ್ವದ ಘಟನೆಗಳ ಮೂಲಕ ಸಂಭವಿಸುತ್ತದೆ. ಮುಖ್ಯವಾಗಿ ಅಧರ್ಮದ ತೀವ್ರತೆ, ಕೆಲ ಪುರಾಣಗಳ ಪ್ರಕಾರ, ಕಲಿ ಯುಗದ ಅಂತ್ಯದಲ್ಲಿ ಮಹಾ ಪ್ರವಾಹ (ಪ್ರಳಯ) ಸಂಭವಿಸುತ್ತದೆ, ಇದು ಭೂಮಿಯನ್ನು ತೊಳೆಯುತ್ತದೆ ಮತ್ತು ನವೀಕೃತ ಶೃಂಗಾರವನ್ನು ಸೃಷ್ಟಿಸುತ್ತದೆ.ಕಲಿ ಯುಗದ ಅಂತ್ಯವು ಹೊಸ ಕೃತ ಯುಗದ (ಸತ್ಯ ಯುಗ) ಆರಂಭವನ್ನು ಸೂಚಿಸುತ್ತದೆ. ಇದು ಪುನಃ ಸತ್ಯ, ಧರ್ಮ, ಮತ್ತು ಶಾಂತಿಯ ಯುಗವಾಗುತ್ತದೆ.ಈ ಪ್ರಕ್ರಿಯೆಗಳು ಯುಗಚಕ್ರದ ಭಾಗವಾಗಿ ಪರಿಗಣಿಸಲಾಗುತ್ತವೆ, ಮತ್ತು ಈ ಚಕ್ರವು ನಿರಂತರವಾಗಿ ತಿರುಗುತ್ತಿರುತ್ತದೆ.

( video credit : KK TV )