ಇನ್​​ಸ್ಟಾಗ್ರಾಂನಲ್ಲಿ ಸುಂದರ ಆಂಟಿಯರೇ ಇವನ ಟಾರ್ಗೆಟ್; ಆಂಟಿಯರೇ ಹುಷಾರು ಫೋಟೋ ಹಾಕುವ ಮುನ್ನ ಒಮ್ಮೆ ಯೋಚಿಸಿ

ಇನ್​​ಸ್ಟಾಗ್ರಾಂನಲ್ಲಿ ಸುಂದರ ಆಂಟಿಯರೇ ಇವನ ಟಾರ್ಗೆಟ್;  ಆಂಟಿಯರೇ ಹುಷಾರು ಫೋಟೋ ಹಾಕುವ ಮುನ್ನ ಒಮ್ಮೆ ಯೋಚಿಸಿ

ಸದ್ಯದ ಯುಗ ಇಂಟರ್ನೆಟ್ ಯುಗವಾಗಿದೆ. ಇಂದಿನ ಪ್ರತಿಯೊಬ್ಬರೂ ಇಂಟರ್ನೆಟ್ ನಲ್ಲಿ ಸತತವಾಗಿ ನಿರತರಾಗಿರುತ್ತಾರೆ. ಅಲ್ಲದೆ ಇಂದಿನ ಪ್ರತಿಯೊಬ್ಬರು ಇಂಟರ್ನೆಟ್ ಗೆ ತುಂಬಾ ಅಡಿಕ್ಟ್ ಆಗಿಬಿಟ್ಟಿದ್ದಾರೆ ಅವರಿಗೆ ಇಂಟರ್ನೆಟ್ ಉಪಯೋಗ ಮಾಡದೆ ನಿದ್ದೆಯೇ ಬರುವದಿಲ್ಲ. ಪ್ರತಿಯೊಬ್ಬರೂ ಇಂಟರ್ನೆಟ್ ಮತ್ತು ಮೊಬೈಲ್ ಇವರೆಡರ್ ಗುಲಾಮನಾಗಿದ್ದಾರೆ. ಒಂದು ವೇಳೆ ಒಂದು ಹೊತ್ತಿನ ಊಟ ದೊರೆಯದಿದ್ದರು ನಡೆಯುತ್ತೆ ಆದರೆ ಮೊಬೈಲ್ ಮತ್ತು ಇಂಟರ್ನೆಟ್ ಇಲ್ಲದೆ ಮನುಷ್ಯ ಬದಕಲು ಸಾಧ್ಯವಿಲ್ಲ ಅಷ್ಟೊಂದು ಅಡಿಕ್ಟ್ ಆಗಿದ್ದಾರೆ. ಆದರೆ ಈ ಇಂಟರ್ನೆಟ್ ಮತ್ತು ಮೊಬೈಲ ಮೂಲಕವೇ ಇಂದು ಪ್ರತಿಯೊಬ್ಬರೂ ರಾತ್ರೋರಾತ್ರಿ ಯೇ ಪ್ರಸಿದ್ಧಿಯನ್ನು ಪಡೆದುಕೊಳ್ಳುತ್ತಿದ್ದಾರೆ.

ಆದರೆ ಇದರ ಉಪಯೋಗವನ್ನು ದುಷ್ಕರ್ಮಿಗಳು ದುರಪಯೋಗ ಪಡಿಸಿ ಕೊಳ್ಳುತ್ತಿದ್ದಾರೆ . ಏನಿದು ಘಟನೆ ನೋಡಣ ಬನ್ನಿ .ಇನ್​​ಸ್ಟಾಗ್ರಾಂನಲ್ಲಿ ಸುಂದರ ಆಂಟಿಯರೇ ಇವನ ಟಾರ್ಗೆಟ್ ಆಗಿದ್ದರು. ಫೇಕ್ ಅಕೌಂಟ್ ಕ್ರಿಯೇಟ್ ಮಾಡೋದು, ಮೆಸೇಜ್ ನಲ್ಲೇ ಪಟಯಿಸೋದು ಇವನ ಕೆಲಸ. ಬೆಂಗಳೂರಲ್ಲಿ ಆಂಟಿಯರ ಹಿಂದೆ ಬಿದ್ದಿದ್ದ ಕಾಮುಕ ಟೆಕ್ಕಿಯನ್ನು HSR ಲೇಔಟ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಹುಡುಗಿಯರು ಬಿಲ್ ಕುಲ್ ಬೇಡ, ಆಂಟಿ ಪ್ರೊಫೈಲ್ ಕಂಡ್ರೆ ಬಿಡಲ್ಲ. ಫೇಕ್ ಅಕೌಂಟ್ ಮಾಡೋದು, ಮೆಸೇಜ್​​ನಲ್ಲೇ ಲಾಕ್ ಮಾಡೋದು. ಅಸ್ಸಾಂ ಮೂಲದ ಫೈಜಲ್​​ನನ್ನು ಬಂಧಿಸಿದ್ಧಾರೆ. ಇನ್​​ಸ್ಟಾದಲ್ಲಿ ಸುಂದರ ಆಂಟಿಯರ ಪ್ರೊಫೈಲ್ ಹುಡುಕಿ ರಿಕ್ವೆಸ್ಟ್ ಕಳಿಸ್ತಿದ್ದ. ರಿಕ್ವೆಸ್ಟ್ ಎಕ್ಸೆಪ್ಟ್​ ಮಾಡ್ತಿದ್ದಂತೆ ಎಮೋಷನಲ್ ಡೈಲಾಗ್ ಹೊಡೀತಿದ್ದನು. 

ಹೆಣ್ಣುಮಕ್ಕಳ ಫ್ರೀಡಂ, ಅಂಕಲ್ ಗಳ ವೀಕ್ನೆಸ್ ಬಗ್ಗೆ ಮಾತಾಡಿ ತನಗೆ ಹತ್ರ ಮಾಡ್ಕೋತಿದ್ದನು. ಖಾಸಗಿ ಜಾಗಕ್ಕೆ ಕರೆದು ಮಹಿಳೆಯರ ಜೊತೆ ಲೈಂಗಿಕ ಸಂಪರ್ಕ ಬೆಳೆಸುತ್ತಿದ್ದನು. ಮೀಟಿಂಗ್ ಶುರು ಮಾಡಿ  ಆರೋಪಿ ಫೈಜಲ್ ಖಾಸಗಿ ಕ್ಷಣಗಳನ್ನ ರೆಕಾರ್ಡ್ ಮಾಡಿಕೊಳ್ತಿದ್ದನು. ನಂತರ ಲಕ್ಷ ಲಕ್ಷ ಹಣ ಕೇಳ್ತಿದ್ದ. ಮತ್ತೆ ಮತ್ತೆ ಪೀಡಿಸ್ತಿದ್ದನು. ಹಣ ಕೊಡದಿದ್ರೆ ಗಂಡನಿಗೆ ವಿಡಿಯೋ ಕಳಿಸೋದಾಗಿ ಬೆದರಿಕೆ ಹಾಕುತ್ತಿದ್ದನು. ಮಹಿಳೆಯೊಬ್ಬರಿಗೆ ಬ್ಲಾಕ್ ಮೇಲ್ ಮಾಡಿ ಚೆನ್ನೈಗೆ ಕರೆದಿದ್ದನು.
ಈಗ ಈತನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ .