ಇಸ್ಲಾಂ ತೊರೆದು ಹಿಂದೂ ಯುವಕನನ್ನ ದೇವಸ್ಥಾನದಲ್ಲಿ ಹಿಂದೂ ರೀತಿ ರಿವಾಜುಗಳ ರೀತಿಯಲ್ಲಿ ಮದುವೆಯಾದ ಮುಸ್ಲಿಂ ಯುವತಿ
ಉತ್ತರಪ್ರದೇಶದ ಬೇಗುಸರಾಯ್ ನಲ್ಲಿ ಅದ್ಭುತವಾದ ಉದಾಹರಣೆಯೊಂದು ಕಂಡುಬಂದಿದ್ದು, ಇಲ್ಲಿ ಮುಸ್ಲಿಂ ಯುವತಿಯೊಬ್ಬಳು ಹಿಂದೂ ಯುವಕನ ಜೊತೆ ಹಿಂದೂ ರೀತಿ ರಿವಾಜಿಗಳಂತೆ ಮಂದಿರವೊಂದರಲ್ಲಿ ಹಸೆಮಣೆ ಏರಿದ್ದಾಳೆ. ಝಾರ್ಖಂಡ್‌ನ ಹಜಾರಿಬಾಗ್‌ನ ಸಾದಿಯಾ ಪರವೀನ್ ಬೇಗುಸರಾಯ್‌ನ ನಿಪಾನಿಯಾ ಗ್ರಾಮದ ಸೋಹನ್ ಕುಮಾರ್ ದಾಸ್ ಜೊತೆ ಕಳೆದ 2 ವರ್ಷಗಳಿಂದ ಪ್ರೀತಿಸುತ್ತಿದ್ದಳು. ಸೋಹನ್ ಕುಮಾರ್ ದಾಸ್ ಝಾರ್ಖಂಡ್‌ನ ಹಜಾರಿಬಾಗ್ ನಲ್ಲಿ ಎರಡು ವರ್ಷಗಳ ಹಿಂದೆ ನನ್ ಬ್ಯಾಂಕಿಂಗ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ಸಮಯದಲ್ಲೇ ಇಬ್ಬರ ನಡುವೆ ಸ್ನೇಹದಿಂದ ಪ್ರೇಮಾಂಕುರವಾಗಿತ್ತು. ಆಗಿನಿಂದ ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು.
ದಿನಕಳೆದಂತೆ ಸ್ನೇಹ ಪ್ರೀತಿಯಾಗಿಬಿಟ್ಟಿತು. ಇಬ್ಬರೂ ಮದುವೆಯಾಗಿ ಜೀವನ ನಡೆಸಲು ನಿರ್ಧರಿಸಿದರು. ಸಾದಿಯಾ ಪರವೀನ್ ಸೋಹನ್ ಕುಮಾರ್ ಜೊತೆ ಬೇಗುಸರಾಯ್ ಬಂದಳು ಹಾಗು ಶನಿವಾರದಂದು ನಗರದ ನೌಲಖಾ ಮಂದಿರದಲ್ಲಿ ಹಿಂದೂ ರೀತಿ ರಿವಾಜುಗಳಂತೆ ಮದುವೆಯಾದರು. ಈ ಮದುವೆಯಿಂದ ನವಜೋಡಿಗಳು ಖುಷಿಯಾಗಿದ್ದಾರೆ. ಮದುವೆಯ ಸಂದರ್ಭದಲ್ಲಿ ಯುವಕನ ತಂದೆ ತಾಯಿ ಕೂಡ ಹಾಜರಿದ್ದರು. ಜಯಮಂಗಲಾ ವಾಹಿನಿ ಸಾಮಾಜಿಕ ಸಂಘಟನೆಯ ಸದಸ್ಯರು ಮಂದಿರದಲ್ಲಿ ಈ ಮದುವೆಗೆ ಸಾಕ್ಷಿಯಾದರು
ಬಳಿಕ ಮಾತನಾಡಿದ ಸಾದಿಯಾ, “ಪ್ರೀತಿಯಲ್ಲಿ ಜಾತಿ ಧರ್ಮ ಕಾಣಲು ಸಿಗುವುದಿಲ್ಲ. ಸೋಹನ್ ಕುಮಾರ್ ಜೊತೆ ಪ್ರೇಮಾಂಕುರವಾಯಿತು ಈಗ ಮದುವೆಯೂ ಆಗಿದೆ, ನಾನೀಗ ಜೀವನಪರ್ಯಂತ ಸೋಹನ್ ಜೊತೆ ಜೀವನ ಕಳೆಯುತ್ತೇನೆ” ಎಂದಿದ್ದಾಳೆ. ಮದುವೆಯಾದ ಬಳಿಕ ಮಾತನಾಡಿರುವ ಸೋಹನ್, “ನನ್ ಬ್ಯಾಂಕಿಂಗ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ ಸಾದಿಯಾ ಪರವೀನ್ ನನಗೆ ಪರಿಚಯವಾದಳು, ಇಬ್ಬರೂ ಸ್ನೇಹಿತರಾದೆವು ಬಳಿಕ ಇಬ್ಬರ ನಡುವೆ ಪ್ರೇಮಾಂಕುರವಾಯಿತು. ನಾವೀಗ ಮದುವೆಯಾಗಿದ್ದೇವೆ” ಎಂದಿದ್ದಾನೆ. ಜಾತಿ ಧರ್ಮದ ಹಂಗು ತೊರೆದು ಇಬ್ಬರೂ ಮದುವೆಯಾಗಿ ಇಂದು ಖುಷಿಯಾಗಿದ್ದಾರೆ. ಬಳಿಕ ಮಾತನಾಡಿದ ಜೋಡಿ, “ಮಂದಿರದಲ್ಲಿ ಮದುವೆಯಾಗಿದ್ದೇವೆಣ ಈಗ ಕಾನೂನು ಮಾನ್ಯತೆಗಾಗಿ ಕೋರ್ಟ್ ಮ್ಯಾರೇಜ್ ಗಾಗಿ ಸಿದ್ಧತೆ ನಡೆಸುತ್ತಿದ್ದೇವೆ” ಎಂದಿದ್ದಾರೆ.
ಯಾವ ಹುಡುಗಿಗೆ 18 ವರ್ಷ ತುಂಬಿದ ಬಳಿಕ ಮತದಾನ ಮಾಡುವ ಹಕ್ಕು, ತನಗಿಷ್ಟವಾದ ಹುಡುಗನನ್ನ ಮದುವೆಯ ಹಕ್ಕು ಸಂವಿಧಾನ ನೀಡುತ್ತೆ ಎಂದ ಮೇಲೆ ತನಗಿಷ್ಟವಾದ ಧ-ರ್ಮ-ಕ್ಕೆ ಹೋಗಲು ಕೂಡ ಅವಳಿಗೆ ಪೂರ್ಣ ಸ್ವಾತಂತ್ರ್ಯವಿದೆ. ನಾನು ಹಿಂ-ದೂ ಧರ್ಮಕ್ಕೆ ಮ-ತಾಂ-ತ-ರವಾಗಿರುವ ಕಾರಣ ನನ್ನ ಕುಟುಂಬಸ್ಥರು ನನ್ನ ವಿ-ರು-ದ್ಧ ಏನು ಬೇಕಾದರೂ ಮಾಡಬಹುದು ಆ ಕಾರಣಕ್ಕೆ ನಾನು ಎಸ್‌ಎಸ್‌ಪಿ ಯವರಿಗೆ ದೂ-ರು ನೀಡುತ್ತಿದ್ದೇನೆ” ಎಂದು ದೂರನ್ನ ಕೊಟ್ಟಿದ್ದಾಳೆ.
ಸನಾತನ ಹಿಂದೂ ಧರ್ಮಕ್ಕೆ ಮರಳಿ ವಾಪಸ್ ಬಂದ ಸಹೋದರಿಗೆ ಸುಸ್ವಾಗತ, ನಿಮ್ಮ ಧರ್ಮ ನಿಷ್ಟೆ ಹೀಗೇ ಇರಲಿ ಹಾಗು ನಿಮ್ಮ ಧರ್ಮ ಕಾರ್ಯಗಳು ಮುಂದುವರೆಯಲಿ.