ವರ್ಷಕ್ಕೆ ಒಂದು ಬಾರಿ ತೆಗೆಯುವ ಹಾಸನಾಂಬೆ ದೇವಸ್ತಾನ ದಲ್ಲಿ ಅಡಗಿದೆ ನಿಗೂಢ ರಹಸ್ಯ! ಆ ರಹಸ್ಯ ಏನು ಗೊತ್ತಾ?

ವರ್ಷಕ್ಕೆ ಒಂದು ಬಾರಿ ತೆಗೆಯುವ ಹಾಸನಾಂಬೆ ದೇವಸ್ತಾನ ದಲ್ಲಿ ಅಡಗಿದೆ ನಿಗೂಢ ರಹಸ್ಯ! ಆ ರಹಸ್ಯ ಏನು ಗೊತ್ತಾ?

ನಮ್ಮ ಹಿಂದೂ ಸಂಪ್ರದಾಯದಲ್ಲಿ  ದೇವರ ಸಂಖ್ಯೆ ಹೆಚ್ಚಾಗಿಯೇ ಇದೆ. ಇನ್ನೂ ದೇವರು ಇದ್ದಲ್ಲಿ ದೇವರ ಆಚರಣೆ ಹಾಗೂ ಇದಕ್ಕೆ ಸಂಬಂಧಿತ ಕಥೆಗಳು ಹೆಚ್ಚಾಗಿಯೇ ಇದೆ. ಹಾಗಾಗಿ ನಮ್ಮ ಹಿಂದೂ ಸಂಪ್ರದಾಯದಲ್ಲಿ ಈ ರೀತಿಯ ಆಚರಣೆಗಳು ಹೆಚ್ಚಾಗಿರುವ ಕಾರಣ ಪದ್ದತಿಗಳು ಕೊಡ ಸಾಕಷ್ಟಿದೆ. ಈಗ ದೀಪಾವಳಿಯ ಸಮಯದಲ್ಲಿ ಹಾಸನಾಂಬೆ ದೇವಸ್ಥಾನ ಹೆಚ್ಚು ಸದ್ದು ಮಾಡುತ್ತದೆ. ಏಕೆಂದರೆ ಈ ದೇವಸ್ಥಾನ ವರ್ಷಕ್ಕೆ ಒಂದು ಬಾರಿ ದೀಪಾವಳಿಯ ಸಮಯದಲ್ಲಿ ಮಾತ್ರ ತೆರೆದು ಪೂಜೆ ಸಲ್ಲಿಸುವ ದೇವಸ್ತಾವಾಗಿದೆ. ಇನ್ನೂ ಈ ದೇವಿ ವರ್ಷಕ್ಕೆ ಒಂದು ಬಾರಿ ಪೂಜೆ ಸಲ್ಲಿಸಿ ಕೊಂಡರು ಕೊಡ ಬಹಳ ಅದ್ದೂರಿಯ ಪೂಜೆಯನ್ನು ಸಲ್ಲಿಸುತ್ತಾರೆ. ಆದರೆ ಈ ದೇವಸ್ತಾನಕ್ಕೆ ಪುರಾಣಗಳಲ್ಲಿ ಸಾಕಷ್ಟು ನಿಗೂಢ ಕಥೆಗಳನ್ನು ಹೊಂದಿದೆ. ಇಂದು ನಮ್ಮ ಲೇಖನದಲ್ಲಿ ಈ ದೇವಸ್ಥಾನದ ನಿಗೂಢ ಕಥೆಗಳನ್ನು ಹೇಳಲು ಹೊರಟ್ಟಿದೇವೆ.

ಇನ್ನೂ ವರ್ಷಕ್ಕೆ ಒಂದೇ ಬಾರಿ 13ದಿನಗಳ ಕಾಲ ತೆಗೆಯುವ ಈ ದೇವಸ್ಥಾನ ಹದಿಮೂರನೇ ದಿನ ಒಂದು ದೀಪ ವಿಧವಾದ ಹೂಗಳಿಂದ ಅಲಂಕಾರ ಮಾಡಿಸಿಕೊಂಡು ಮುಚ್ಚಿದ ಬಾಗಿಲು ಮುಂದಿನ ವರ್ಷವೇ ತೆಗೆಯುವುದು. ಇನ್ನೂ ಒಂದು ವರ್ಷ ಕಳೆದ ಬಳಿಕ ಕೊಡ ಆ ದೀಪ ಉರಿಯುತ್ತಲೇ ಇದ್ದು ಹೂಗಳು  ಬಾಡಿಹೋಗದೆ ಇರುತ್ತದೆ. ಇನ್ನೂ ತೆರೆದ ಬಳಿಕ ಆ ಊರಿನಲ್ಲಿ ಇರುವ ಯಾವ ಮನೆಯೂ ಕೊಡ ಒಗ್ಗರಣೆಯನ್ನು ಹಾಕುವಂತಿಲ್ಲ ಎನ್ನುವ ಪದ್ಧತಿ ಇದೆ. ಇನ್ನೂ ಈಗಲೂ ಆಚರನೆ ಮಾಡಿಕೊಂಡು ಬರುವ ಸಂಪ್ರದಾಯವಾಗಿದೆ. ಇನ್ನೂ ಈ ದೇವಸ್ಥಾನದ ಪುರಾಣ ಕಥೆಗಳನ್ನು ನೋಡುವುದಾದರೆ ಈ ದೇವಸ್ಥಾನ ಮಹಾ  ಭಾರತದ ಕಾಲಘಟ್ಟದಲ್ಲಿ ಸಿಂಹಪುರಿ ಎನ್ನುವ ಹೆಸರಿದೆ. ಅರ್ಜುನನ ಮೊಮ್ಮಗ ಶಾಪಗ್ರಸ್ತ ಆಗಿದ್ದ ಸಮಯದಲ್ಲಿ ಇಲ್ಲಿ ನೆಲೆಸಿರುತ್ತಾನೆ.ಸಪ್ತ ಮಾತ್ರಿಕೆಯರಾದ ಚಾಮುಂಡಿ, ರಾಜೇಶ್ವರಿ , ಇಂದ್ರಾಣಿ, ಮಹೇಶ್ವರಿ, ಬ್ರಹಿ ದೇವತೆಗಳು ವಿಹಾರಕ್ಕೆ ಬಂದ ಸಂದರ್ಭದಲ್ಲಿ ಇಲ್ಲಿನ ಪ್ರಕೃತಿಗೆ ಮನಸೋತು ಇಲ್ಲೆಯೆ ನೆಲೆಸಿದ್ದಾರೆ ಎನ್ನುವ ಮಾತಿದೆ.  

ಈ ಅದ್ಬುತ ಶಕ್ತಿಗಳು ಒಂದೇ ಕಾಲಗಟ್ಟದಲ್ಲಿ ನೆಲೆಸಿದ್ದು ಒಂದೇ ಜಾಗದಲ್ಲಿ ನೆಲೆಸಿರುವ ಕಾರಣ ಈ ಜಾಗ ಬಹಳ ಶಕ್ತಿಯುತ ಎನ್ನುವ ನಂಬಿಕೆ ಇದೆ. ಇಂತಹ ಅದ್ಬುತ ಶಕ್ತಿ ದೇವತೆಗಳಿಗೆ ಸಮರ್ಪಿಸಲು ಈ ದೇವಸ್ಥಾನವನ್ನು 12 ಶತಮಾನದಲ್ಲಿ ನಿರ್ಮಿಸಲಾಗಿದೆ. ಈ ಊರಿನಲ್ಲಿ ಅಂಧಕಾಸುರ ಎನ್ನುವ ರಾಕ್ಷಸನು ಬ್ರಹ್ಮ ದೇವನಿಗೆ ಕಠಿಣ ತಪಸ್ಸು ಮಾಡುವ ಮುಖಾಂತರ ವರವನ್ನು ಪಡೆದುಕೊಂಡನು. ಇವನು ಈ ವರವನ್ನು ದುರುಪಯೋಗ ಮಾಡಿಕೊಂಡಾಗ ಅದೇ ಊರಿಗೆ ಹಾನಿ ಆಗುತ್ತಿದ್ದ ಕಾರಣ ಇಲ್ಲಿ ನಲೆಸಿದ್ದ ಶಕ್ತಿ ದೇವತೆಗಳು ಒಟ್ಟಿಗೆ ಸೇರಿ ಹಾಸನಾಂಬೆಯ ರೂಪ ಪಡೆದುಕೊಂಡು ಇವನ ವಧೆ ಮಾಡಿದ ಸಂಧರ್ಭದಲ್ಲಿ ಆ ಊರಿನ ಪಾಳೆಗಾರರು ಈ ಹಾಸನಾಂಬೆ ದೇವಸ್ತಾನ ನಿರ್ಮಾಣ ಆಗಿದೆ  ಎನ್ನಲಾಗುತ್ತಿದೆ. ಇಂದು ಅಂದಿನಿಂದಲೂ ಕೊಡ ಇಂದಿನ ವರೆಗೂ ಈ ದೇವಿಯ ಶಕ್ತಿ ಇಂದಿಗೂ ಹೆಚ್ಚಾಗುತ್ತಾ ಹೋಗುತ್ತಿದೆ ಎನ್ನುವ ನಂಬಿಕೆ ಎಲ್ಲರದ್ದೂ. ( video credit : FOCUS )