ವೀರಪ್ಪನ್ ನಿಂದಾ ಬಿಡಿಸಿಕೊಂಡು ಬಂದ ನಂತರ ರಾಜ್ ಕುಮಾರ್ ಅವರನ್ನು ಹೇಗೆ ಬರಮಾದಿಕೊಳ್ಳಲಾಗಿತ್ತು ಗೊತ್ತಾ
ನಮ್ಮ ಸ್ಯಾಂಡಲ್ ವುಡ್ ನಲ್ಲಿ ಹಿರಿಯ ನಟರೆಂದ ಕೂಡಲೇ ತಟ್ಟನೆ ನೆನಪಾಗುವ ಹೆಸರು ಎಂದರೆ ಅದು ನಮ್ಮ "ಕನ್ನಡ ರತ್ನ" "ಡಾಕ್ಟರ್ ರಾಜ್ ಕುಮಾರ್" ಅವರು. ಇನ್ನೂ ನಮ್ಮ ಸ್ಯಾಂಡಲ್ ವುಡ್ ನ ದೊಡ್ಡ ಮನೆಯ ಕುಟುಂಬದ ಬಗ್ಗೆ ಹೇಳಬೇಕು ಎಂದಿಲ್ಲ. ಚಿಕ್ಕ ಮಕ್ಕಳಿಗೂ ಕೊಡ ತಿಳಿದಿರುತ್ತದೆ ನಾವು ಯಾರ ಬಗ್ಗೆ ಮಾತನಾಡಲು ಹೊರತ್ತಿದ್ದೇವೆ ಎಂದು. ಸ್ಯಾಂಡಲ್ ವುಡ್ ನ ದೊಡ್ಡ ಮನೆಯ ರಾಜ್ ಕುಮಾರ್ ಅವರು ಕಟ್ಟಿರುವ ಸಾಮ್ರಾಜ್ಯ ಎಂದರೆ ತಪ್ಪಾಗಲಾರದು. ಇಂದು ನಮ್ಮ ಸ್ಯಾಂಡಲ್ ವುಡ್ ಇಷ್ಟು ಮಟ್ಟಕ್ಕೆ ಬೆಳೆದು ನಿಂತಿದೆ ಎಂದರೆ ಇವ್ರ ಹಾಗೂ ಇವರ ಕುಟುಂಬದ ಕೊಡುಗೆ ಸಾಕಷ್ಟಿದೆ. ಇನ್ನೂ ರಾಜ್ ಕುಮಾರ್ ಅವರು ನಮ್ಮನ್ನು ಅಗಲಿ ಸಾಕಷ್ಟು ವರ್ಷಗಳು ಕಳೆದಿದ್ದರೂ ಕೊಡ ಇಂದಿಗೂ ಎಂದಿಗೂ ಅವರ ಹೆಸರು ಅಜರಾಮರ.
ಇನ್ನೂ ಡಾಕ್ಟರ್ ರಾಜ್ ಕುಮಾರ್ ಅವರು ಒಂದು "ಗಾಜನೂರು" ಎನ್ನುವ ಸಣ್ಣ ಹಳ್ಳಿಯಲ್ಲಿ ಬಡತನದ ರೇಖೆಯಲ್ಲಿ ಜನಿಸಿದವರು. ಇನ್ನೂ ಈತ ವಿದ್ಯಾವಂತ ಅಲ್ಲದಿದ್ದರೂ ಕೊಡ ಸಂಸ್ಕಾರದಲ್ಲಿ ಈತ ಯಾವ ಎಲ್ಲವನ್ನೂ ಮೀರಿಸುವಂತಹ ವ್ಯಕ್ತಿತ್ವವನ್ನು ಹೊಂದಿದ್ದರು ಎಂದರೆ ತಪ್ಪಾಗಲಾರದು. ಹಾಗಾಗಿ ಇವರು ಗಡಿಯಲ್ಲಿ ಬೆಳೆದಿರುವ ದೊಡ್ಡ ಮನೆಯ ಪ್ರತಿಯೊಂದು ಸದಸ್ಯರಿಗೂ ಕೊಡ ಸರಳ ಜೀವನವನ್ನು ನಡೆಸುತ್ತಾ ಬಂದಿದ್ದಾರೆ. ಇದೊಂದೇ ಕಾರಣದಿಂದ ಅಂದಿನಿಂದ ಇಂದಿನ ವರೆಗೂ ದೊಡ್ಡ ಮನೆ ಹಾಗೂ ದೊಡ್ಡ ಮನೆಯವರ ಮೇಲೆ ಇರುವ ಗೌರವ ಕಿಂಚಿತ್ತೂ ಕೊಡ ಕಡಿಮೆ ಆಗಿಲ್ಲ. ಇನ್ನೂ ಡಾಕ್ಟರ್ ರಾಜ್ ಕುಮಾರ್ ಅವರು ನಟನಾಗಿ,ಗಾಯಕನಾಗಿ,ಸಂಯೋಜಕನಾಗಿ ಹಾಗೂ ನಿರ್ಮಾಪಕ ನಾಗಿಯು ಕೂಡ ಗುರುತಿಸಿಕೊಂಡಿದ್ದಾರೆ.
ಇನ್ನೂ "ಪಾರ್ವತಮ್ಮ ರಾಜಕುಮಾರ್" ಅವರು ರಾಜ್ ಕುಮಾರ್ ಅವರು ಕಟ್ಟಿದ ಪಿ ಅರ್ ಕೆ ಪ್ರೊಡಕ್ಷನ್ ನ ಸಂಸ್ಥೆಯ ನಿರ್ಮಾಪಕಿ ಆಗಿ ಸ್ಯಾಂಡಲ್ ವುಡ್ ನಲ್ಲಿ ಗುರುತಿಸಿಕೊಂಡಿದ್ದಾರೆ. ಇನ್ನೂ ಎಷ್ಟೆಲ್ಲ ಕುಶಿಯಿಂದ ಇರುವ ಕುಟುಂಬಕ್ಕೆ ಬಂದ ಅತಿ ದೊಡ್ಡ ಕಪ್ಪು ನೆರಳು ಎಂದರೆ ಅದು "ವೀರಪ್ಪನ್" ಅವರು ರಾಜ್ ಕುಮಾರ್ ಅವರನ್ನು ಕಿಡ್ನಾಪ್ ಮಾಡಿದ ಕ್ಷಣ.ಇನ್ನೂ ಈ ಕ್ಷಣ ಇಡೀ ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದ್ದಲ್ಲದೆ ರಣರಂಗಗವನ್ನು ಸೃಷ್ಟಿ ಮಾಡಿತ್ತು. ಇನ್ನೂ ಸರ್ಕಾರಕ್ಕೆ ಹಲವಾರು ಬೇಡಿಕೆಗಳನ್ನು ಇಟ್ಟು ಇವರನ್ನು "ಜುಲೈ 30 2000"ರಂದು ಗಜನೂರಿನ ಮನೆಯಿಂದ ಕಿಡ್ನಾಪ್ ಮಾಡಲಾಗಿತ್ತು. ಸತತ ಸರ್ಕಾರಕ್ಕೆ ಆಮಿಷ ಒಡ್ಡಿ "ನೂರಾಎಂಟ " ದಿನಗಳ ಕಾಲ ಅವರನ್ನು ಕಿಡ್ನಾಪ್ ಮಾಡಿ ಇಡಲಾಗಿತ್ತು. ಇನ್ನೂ ಸರ್ಕಾರ ವೀರಪ್ಪನ್ ಅವರ ಇಚ್ಛೆಗಳನ್ನು ಪೂರೈಸಿದ ನಂತರ ಇವರನ್ನು ಬಿಟ್ಟು ಕಳುಹಿಸಲಾಗಿದೆ. ಇನ್ನೂ ರಾಜ್ ಕುಮಾರ ಅವ್ರು ಮರಳಿ ಬಂದ ನಂತರ ನಮ್ಮ ಕರ್ನಾಟಕದ ಮಂದಿ ಅವರನ್ನು ಹೇಗೆ ಬರಮಾಡಿಕೊಂಡರು ಎಂದು ನಾವು ನೀಡಿರುವ ಲಿಂಕ್ ಕ್ಲಿಕ್ಕಿಸುವ ಮೂಲಕ ವೀಕ್ಷಣೆ ಮಾಡಿ.