ಮೂರು ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ! ಇಂದಿನ ದರ ಎಷ್ಟು ಗೊತ್ತಾ?

ಮೂರು ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ!  ಇಂದಿನ ದರ ಎಷ್ಟು ಗೊತ್ತಾ?

ಹೆಣ್ಣು ಮಕ್ಕಳ ಸೌಂದರ್ಯವನ್ನು ಹೆಚ್ಚಿಸಲು ಇರುವ ಸಂಕೇತಿಸಲಾದ ಚಿನ್ನ, ಅದರ ವಿಶಿಷ್ಟವಾದ ಹೊಳಪಿನ ಹಳದಿ ವರ್ಣಕ್ಕೆ ಹೆಸರುವಾಸಿಯಾಗಿದೆ ಎಂದು ಹೇಳಬಹುದು ಮತ್ತು ಸಹಸ್ರಮಾನಗಳಿಂದ ನಾಗರಿಕತೆಗಳಿಂದ ಮೌಲ್ಯಯುತವಾಗಿದೆ ಎಂದರೆ ತಪ್ಪಾಗಲಾರದು.  ಅದರ ಆಕರ್ಷಣೆಯು ಅದರ ವಿರಳತೆ ಮತ್ತು ಸಂಕೀರ್ಣವಾದ, ದುಬಾರಿ ಗಣಿಗಾರಿಕೆ ಮತ್ತು ಸಂಸ್ಕರಣೆಯ ಪ್ರಕ್ರಿಯೆಯಿಂದ ಉಂಟಾಗುತ್ತದೆ, ಇದು ಅದರ ಹೆಚ್ಚಿನ ಮೌಲ್ಯಕ್ಕೆ ಕೊಡುಗೆ ನೀಡುತ್ತದೆ.  ಐತಿಹಾಸಿಕವಾಗಿ, ಚಿನ್ನದ ಮೃದುತ್ವ ಮತ್ತು ತುಕ್ಕುಗೆ ಪ್ರತಿರೋಧವು ಅದನ್ನು ನಾಣ್ಯ ಮತ್ತು ಆಭರಣಗಳಿಗೆ ಸೂಕ್ತವಾಗಿದೆ, ಇದು ಸಂಪತ್ತು ಮತ್ತು ಸ್ಥಾನಮಾನದ ಸಂಕೇತವಾಗಿ ಸ್ಥಾಪಿಸುತ್ತದೆ.

 ಸೌಂದರ್ಯಶಾಸ್ತ್ರದ ಹೊರತಾಗಿ, ಎಲೆಕ್ಟ್ರಾನಿಕ್ಸ್ ಮತ್ತು ಏರೋಸ್ಪೇಸ್‌ನಲ್ಲಿ ಚಿನ್ನದ ಪ್ರಾಯೋಗಿಕ ಅಪ್ಲಿಕೇಶನ್‌ಗಳು ಅದರ ವಾಹಕತೆ ಮತ್ತು ಮತ್ತಷ್ಟು ಡ್ರೈವ್ ಬೇಡಿಕೆಯನ್ನು ಹೆಚ್ಚಿಸಿದೆ. ಇನ್ನು ಈ ಕಾರಣದಿಂದ ದಿನದಿಂದ ದಿನಕ್ಕೆ ಚಿನ್ನದ ಬೆಲೆ ಆಕಾಶಕ್ಕೆ ತಲುಪಿದೆ ಎಂದ್ರೆ ತಪ್ಪಾಗಲಾರದು. ಬಾರಿ ಬೇಡಿಕೆ ಇರುವ  ಸಂಪನ್ಮೂಲವಾಗಿ, ವರ್ಷಗಳಿಂದ ಕೊಡ ಚಿನ್ನದ ಬೆಲೆ ಗಗನಕ್ಕೆ ಏರುತ್ತಲೇ ಬಂದಿದೆ. ಸಾಕಷ್ಟು ಮಂದಿ ನಾವು ಇನ್ನೂ ಚಿನ್ನ ಕೊಂಡುಕೊಳ್ಳಲು ಆಗದು ಎಂಬ ಭರವಸೆ ಕೊಡ ಹುಟ್ಟಿಕೊಳ್ಳುವಷ್ಟು ಚಿನ್ನದ ದರ ಗಗನಕ್ಕೆ ಮುಟ್ಟಿತ್ತು.  
ನೆನ್ನೆ ಕೊಡ ಬಜೆಟ್ ಮಂಡನೆ ಆಗಿದ್ದು  ಈ ಬಾರಿಯ ಬಜೆಟ್ ಪಟ್ಟಿ ನೋಡಿ ಯಾರೊಬ್ಬರೂ ಕೊಡ ಸಮಾಧಾನ ವ್ಯಕ್ತ ಪಡಿಸಿಲ್ಲ. ಏಕೆಂದ್ರೆ ಇದರಿಂದ ಯಾರೊಬ್ಬರಿಗೂ ಯಾವ ಲಭಾವಂತು ಪಡೆಯಲು ಸಾಧ್ಯವಿಲ್ಲ. 

ಆದ್ರೆ ಇಂದು ಚಿನ್ನದ ದರ ಇಳಿಮುಖ ಕಂಡಿದೆ. ಇದರಿಂದ ಕೊಂಚವಾದರೂ ಮುಂದಿನ ದಿನಗಳಲ್ಲಿ ಚಿನ್ನದ ದರ ಇನ್ನಷ್ಟು ಇಳಿಯಬಹುದು ಎಂಬ ಭಾವನೆ ಹುಟ್ಟಿಕೊಂಡಿದೆ. ಇನ್ನು 25 ಜುಲೈ 2024 ರಂತೆ, 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹6334 ಆಗಿದ್ದರೆ,. ಬೆಂಗಳೂರಿನಲ್ಲಿ ಜುಲೈ 22 ರಂದು 1 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 6,770 ರೂ. ಇತ್ತು  ಅಂದರೆ ಇಂದಿನ ಬೆಲೆ 6334 ..ಒಟ್ಟು ನಾಲ್ಕು ದಿನದಿಂದ ಪ್ರತಿ ಗ್ರಾಂ ಗೆ ಒಟ್ಟು 436 ರೂಪಾಯಿ ಕಡಿಮೆ ಆಗಿದೆ 

999 ಚಿನ್ನ ಎಂದೂ ಕರೆಯಲ್ಪಡುವ 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹6915 ಆಗಿದೆ. ಇತ್ತ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು 24 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 70,850 ತಲುಪಿದೆ. ಹಾಗೆ ಚೆನ್ನೈ 70,079 ರೂ, ಮುಂಬೈ  70,850 ರೂ, ಹಾಗೂ ಕೋಲ್ಕತ್ತಾದಲ್ಲಿ 70,850ರೂ, ಹಾಗೆಯೇ ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ  71,000 ರೂ. ತಲುಪಿದೆ ಎಂದು ವರದಿ ಆಗಿದೆ.