ಸೋನುಗೌಡನಿಂದ ಪ್ರೇರಿತರಾಗಿ ರೀಲ್ಸ್ ಮಾಡಲು ಹೋದ ಯುವತಿಯರು: ಬಿತ್ತು ನೋಡಿ ಪೊರಕೆ ಏಟು ಅವರ ಅಮ್ಮನಿಂದ ; ವಿಡಿಯೋ ವೈರಲ್

ಸೋನುಗೌಡನಿಂದ ಪ್ರೇರಿತರಾಗಿ ರೀಲ್ಸ್ ಮಾಡಲು   ಹೋದ  ಯುವತಿಯರು: ಬಿತ್ತು  ನೋಡಿ ಪೊರಕೆ ಏಟು ಅವರ ಅಮ್ಮನಿಂದ ; ವಿಡಿಯೋ ವೈರಲ್

ಈಗಿನ ಕಾಲದಲ್ಲಿ ಯುವತಿಯರು ಸಾಮಾಜಿಕ ಜಾಲತಾಣದಲ್ಲಿ ಬರುವ ರೀಲ್ಸ್ಗಳಿಂದ ಪ್ರೇರಿತ ರಾಗಿ ಅದರಂತೆ ಮಾಡಲು ಮುಂದಾಗುತ್ತಾರೆ . ಅದೇ ರೀತಿ ಇಬ್ಬರು ಯುವತಿಯರು ಡಾನ್ಸ್ ಮಾಡಲು ಹೋಗಿದ್ದಾರೆ . ಅವರನ್ನು ಗಮನಿಸುತ್ತಿದ್ದ ಅವಳ ಅಮ್ಮ ಸರಿಯಾಗೇ ಛಡಿ ಏಟು ಕೊಟ್ಟಿದ್ದಾರೆ .

ಒಳ್ಳೆಯ ಕಾರ್ಯ, ಒಳ್ಳೆಯ ಉದ್ದೇಶಗಳನ್ನು ಹೊಂದಿರುವ ವೀಡಿಯೋಗಳು ಇಷ್ಟು ಫೇಮಸ್ ಆಗುವುದೋ ಇಲ್ಲವೋ ಆದರೆ ಸೋನುಗೌಡ  ಬಿಕಿನಿ ವೀಡಿಯೋ ಮಾತ್ರ ಊರೆಲ್ಲಾ ಮಾತನಾಡುವಂತೆ ಮಾಡಿ, ವೀಡಿಯೋಗೆ ಲಕ್ಷಗಟ್ಟಲೇ ವೀವ್ಸ್‌ ನೀಡಿರುವುದು ಕಹಿ ಸತ್ಯ. ಈ ಮಧ್ಯೆ ಮಕ್ಕಳು ಫೇಮಸ್‌ ಆಗುವುದಕ್ಕಾಗಿ ಯಾವ ರೀತಿ ಪ್ರಭಾವಕ್ಕೊಳಗಾಗುತ್ತಾರೆ ಎಂದು ಪೋಷಕರನ್ನು ಎಚ್ಚರಿಸುವ ಸಲುವಾಗಿ ಒಬ್ಬರು ಹಾಸ್ಯಮಯವಾಗಿ ವೀಡಿಯೋವೊಂದನ್ನು ಮಾಡಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.  ತಮ್ಮ ವೀಡಿಯೋಗೆ ಅತೀ ಹೆಚ್ಚು ವೀವ್ಸ್ ಬರಬೇಕೆಂದು ಆಸೆಯಲ್ಲಿರುವ ಹಳ್ಳಿಯ ಹುಡುಗಿಯರಿಬ್ಬರು ಸೋನುಗೌಡ ಬಿಕಿನಿ ವೀಡಿಯೋಗೆ ಬಂದ ವೀವ್ಸ್‌ ನೋಡಿ ಫುಲ್‌ ಬೆರಗಾಗ್ತಾರೆ. ಅವಳಂತೆ ನಾವು ಫೇಮಸ್ ಆಗ್ಬೇಕು ಅಂತ ಆಕೆಯಂತೆ ವೀಡಿಯೋ ಮಾಡೋಣ ಅಂತ ಮಾತಾಡಿಕೊಳ್ಳುವ ಈ ಹುಡುಗಿಯರು ಮೊಬೈಲ್‌ ಫೋನ್ ಹಿಡಿದುಕೊಂಡು ಯಾರು ಇಲ್ಲದ ಜಾಗಕ್ಕೆ ಬರುತ್ತಾರೆ.   

ಇತ್ತ ಪ್ರಾಯಕ್ಕೆ ಬಂದ ಮಕ್ಕಳಿಬ್ಬರು ಕಪಿಗಳಂತೆ ಮೊಬೈಲ್ ಹಿಡಿದು ಆಡುವುದರಿಂದ ಇವರ ಮೇಲೆ ಕಣ್ಣಿಟ್ಟಿದ ತಾಯಿ ಇವರ ಮಾತನ್ನ ಕೇಳಿಸಿಕೊಂಡಿದ್ದಲ್ಲದೇ ಮನೆಯಲ್ಲಿದ್ದ ಪೊರಕೆ ತೆಗೆದುಕೊಂಡು ಇವರ ಹಿಂದೆಯೇ ಮೆಲ್ಲನೆ ಬಂದಿದ್ದಾರೆ. ಇತ್ತ ಅಮ್ಮ ಬಂದಿರುವುದನ್ನು ತಿಳಿಯದ ಈ ಮಕ್ಕಳಲ್ಲಿ ಒಬ್ಬಳು ವೀಡಿಯೋ ಮಾಡಲು ಶುರು ಮಾಡಿದ್ರೆ ಇನ್ನೊಬ್ಳು ಬಟ್ಟೆ ಬಿಚ್ಚಲು ರೆಡಿ ಆಗಿದ್ದಾಳೆ. ಅಷ್ಟರಲ್ಲಿ ಅಲ್ಲಿಗೆ ತಲುಪಿದ ಅಮ್ಮ ಪೊರಕೆ ಹುಡಿಯಾಗುವಂತೆ ಮಕ್ಕಳಿಬ್ಬರಿಗೆ ಬಾರಿಸಿದ್ದಲ್ಲದೇ ಓದಿ ಅಂದ್ರೆ ನನ್ನ ಮರ್ಯಾದೆ ತೆಗೆತೀರಾ ಅಂತ ಬಾಯ್ ಬಾಯ್ ಬಡಿದುಕೊಂಡಿದ್ದಾಳೆ.   ಈ ವಿಡಿಯೋ ನೋಡಿದ ನೆಟ್ಟಿಗರು ಈ ರೀತಿ ಕಾಮೆಂಟ್ ಮಾಡಿದ್ದಾರೆ  ನೋಡಿ  "ಸೋನು ಗೌಡಗೆ ಈ ತರ  ಅವಳ ಅಮ್ಮ ಬಾರಿಸಿದ್ರೆ ಅವ್ಳುಈ  ತರ  ರೀಲ್ಸ್ ಮಾಡ್ತಾ   ಇರ್ಲಿಲ್ಲ ನಿಮ್ msg ನೋಡಿ ಅದ್ರೂ ಬೇರೆ ಹೆಣ್ಣು ಮಕ್ಕಳು    ಬುದ್ದಿ ಕಲೀತಾರೆ ಅಷ್ಟೆ ಸಾಕು ಆಲ್ ದಿ ಬೆಸ್ಟ್ "